Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:19 - ಕನ್ನಡ ಸಮಕಾಲಿಕ ಅನುವಾದ

19 ‘ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು,” ಎಂದು ಯೇಸು ಉತ್ತರವಿತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನರಹತ್ಯ ಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಮೋಸಮಾಡಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ತುಕಾ ಖಾಯ್ದೆ ಗೊತ್ತ್ ಹಾತ್; ಜಿವಾನಿ ಮಾರುನಕೊ, ವೆಭಿಚಾರ್ ಕರುನಕೊ, ಚೊರುನಕೊ, ಅನಿ ಎಕ್ಲ್ಯಾವರ್ತಿ ಝುಟೆ ಅಪ್ವಾದ್ ಘಾಲುನಕೊ, ಮೊಸ್ ಕರುನಕೊ, ಅನಿ ತುಜ್ಯಾ ಬಾಯ್-ಬಾಬಾಕ್ ಮಾನ್‍ ದಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:19
16 ತಿಳಿವುಗಳ ಹೋಲಿಕೆ  

ಏಕೆಂದರೆ, “ವ್ಯಭಿಚಾರ ಮಾಡಬೇಡ, ಕೊಲೆ ಮಾಡಬೇಡ, ಕದಿಯಬೇಡ, ದುರಾಶೆ ಪಡಬೇಡ,” ಎನ್ನುವ ಹಾಗೂ ಇತರ ಯಾವ ಆಜ್ಞೆಗಳೇ ಇರಲಿ ಅವೆಲ್ಲವೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಮಾತಿನಲ್ಲಿವೆ.


ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.


‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.


ಈ ವಿಷಯದಲ್ಲಿ ಯಾರೂ ಅತಿಕ್ರಮಿಸಿ ತಮ್ಮ ಸಹೋದರ ಸಹೋದರಿಯನ್ನು ವಂಚಿಸದಿರಲಿ. ಏಕೆಂದರೆ ನಾವು ಮೊದಲು ತಿಳಿಸಿ ನಿಮಗೆ ಗಂಭೀರವಾಗಿ ಎಚ್ಚರಿಸಿದಂತೆ ಈ ಪಾಪಗಳ ವಿಷಯದಲ್ಲಿ ಕರ್ತ ಯೇಸುವು ಮುಯ್ಯಿಗೆ ಮುಯ್ಯಿ ತೀರಿಸುವವರಾಗಿದ್ದಾರೆ.


ಏಕೆಂದರೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ನಿಯಮವೆಲ್ಲಾ ಅಡಕವಾಗಿದೆ.


ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ.


ಆದ್ದರಿಂದ ಯಾರೂ ದೇವರ ದೃಷ್ಟಿಯಲ್ಲಿ ನಿಯಮದ ಕೃತ್ಯಗಳಿಂದ ನೀತಿವಂತರೆಂದು ನಿರ್ಣಯಿಸಲಾಗುವುದಿಲ್ಲ. ನಿಯಮದಿಂದ ಪಾಪದ ಪ್ರಜ್ಞೆ ಉಂಟಾಗುತ್ತದಷ್ಟೆ.


ದೇವರ ಶಿಕ್ಷಣ ಮತ್ತು ಎಚ್ಚರಿಸುವ ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಒಂದು ವೇಳೆ ಅವರು ಹೇಳದಿದ್ದರೆ, ಅವರಲ್ಲಿ ಮುಂಜಾವಿನ ಬೆಳಕು ಮೂಡಿಬರುವುದಿಲ್ಲ.


ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬನೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು