Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 5:40 - ಕನ್ನಡ ಸಮಕಾಲಿಕ ಅನುವಾದ

40 ನಿನ್ನೊಡನೆ ವ್ಯಾಜ್ಯ ಮಾಡಿ ನಿನ್ನ ಅಂಗಿಯನ್ನು ನಿನ್ನಿಂದ ಕಿತ್ತುಕೊಳ್ಳುವವನಿಗೆ, ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

40 ಅನಿ ಕೊನ್ ತರ್ ತುಜ್ಯಾ ಭುತ್ತುರ್‍ಲಿ ಅಂಗಿ ಸಾಟಿಚ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ನ್ಹೆವ್ಕ್ ತಯಾರ್ ಹೊತಾ ಜಾಲ್ಯಾರ್, ತೆಕಾ ವೈಲಿ ಅಂಗಿಬಿ ಕಾಡುನ್ ದಿವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 5:40
5 ತಿಳಿವುಗಳ ಹೋಲಿಕೆ  

ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ತೋರಿಸು. ನಿನ್ನ ಮೇಲಂಗಿಯನ್ನು ತೆಗೆದುಕೊಳ್ಳುವವನಿಗೆ, ನಿನ್ನ ಒಳ ಅಂಗಿಯನ್ನು ಕೊಟ್ಟುಬಿಡು.


ನಿಮ್ಮ ನಿಮ್ಮಲ್ಲಿ ವ್ಯಾಜ್ಯವಿರುವುದೇ, ನೀವು ಈಗಾಗಲೇ ಸಂಪೂರ್ಣವಾಗಿ ಸೋತವರೆಂಬುದಕ್ಕೆ ಸೂಚನೆಗಳಾಗಿವೆ. ಆದರೆ ಅನ್ಯಾಯವನ್ನು ಏಕೆ ಸಹಿಸಬಾರದು? ಏಕೆ ಮೋಸಹೊಂದಬಾರದು?


ಆದರೆ ನಾನು ನಿಮಗೆ ಹೇಳುವುದೇನೆಂದರೆ, ಕೆಡುಕನನ್ನು ಎದುರಿಸಬೇಡಿರಿ. ಯಾವನಾದರೂ ನಿನ್ನ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸಿಕೊಡು.


ಯಾವನಾದರೂ ನಿನ್ನನ್ನು ಒಂದು ಕಿಲೋಮೀಟರು ದೂರ ಬಾ ಎಂದು ಒತ್ತಾಯ ಮಾಡಿದರೆ, ಅವನೊಡನೆ ಎರಡು ಕಿಲೋಮೀಟರು ದೂರ ಹೋಗು;


ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು