ಮತ್ತಾಯ 5:22 - ಕನ್ನಡ ಸಮಕಾಲಿಕ ಅನುವಾದ22 ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ; ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆದರೆ ನಾನು ನಿಮಗೆ ಹೇಳುವದೇನಂದರೆ - ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ - ಛೀ ನೀಚಾ ಅನ್ನುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ಮೂರ್ಖಾ ಅನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಆದರೆ ನಾನು ನಿಮಗೆ ಹೇಳುವುದೇನೆಂದರೆ ಯಾರ ಮೇಲೂ ಕೋಪಗೊಳ್ಳಬೇಡಿ. ಪ್ರತಿಯೊಬ್ಬನೂ ನಿಮ್ಮ ಸಹೋದರ. ನೀವು ಬೇರೆಯವರ ಮೇಲೆ ಕೋಪಗೊಂಡರೆ ನ್ಯಾಯತೀರ್ಪಿಗೆ ಗುರಿಯಾಗುವಿರಿ. ನೀವು ಯಾರಿಗಾದರೂ ಕೆಟ್ಟ ಮಾತುಗಳನ್ನಾಡಿದರೆ, ಯೆಹೂದ್ಯರ ನ್ಯಾಯಸಭೆಯ ವಿಚಾರಣೆಗೆ ಗುರಿಯಾಗುವಿರಿ. ನೀವು ಯಾರನ್ನಾದರೂ ‘ಮೂರ್ಖ’ ಎಂದು ಕರೆದರೆ, ಅಗ್ನಿನರಕಕ್ಕೆ ಸೇರುವ ಅಪಾಯದಲ್ಲಿದ್ದೀರಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್22 ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಜೊ ಕೊನ್ ಅಪ್ನಾಚ್ಯಾ ಭಾವಾಚ್ಯಾ ವರ್‍ತಿ ರಾಗಾನ್ ಹಾಯ್, ತೆಕಾ ಇಚಾರ್‍ನಿ ಕರುಕ್ ಘೆವ್ನ್ ಯೆವ್ಚೆ, ಜೊ ಕೊನ್ ಅಪ್ನಾಚ್ಯಾ ಭಾವಾಕ್ ತಿಯಾ ಕಾಯ್ ಕಾಮಾಕ್ ಯೆಯ್ ನಸಲ್ಲೊ! ಮನುನ್ ಬಲ್ವುತಾ ತೆಕಾ ಜುದೆವ್ ಲೊಕಾಂಚ್ಯಾ ನ್ಯಾಯ್ ಕರ್‍ತಲ್ಯಾ ಲೊಕಾಂಚ್ಯಾ ಮದ್ದಿ ಹಾನುನ್ ಇಬೆ ಕರುಚೆ, ಅನಿ ಜೊ ಕೊನ್ ಅಪ್ನಾಚ್ಯಾ ಭಾವಾಕ್ ಕಸ್ಲ್ಯಾಬಿ ಫಾಯ್ದ್ಯಾಕ್ ಯೆಯ್ ನಸಲ್ಲ್ಯಾ ಪಿಶ್ಯಾ ಮನ್ತಾ ತೊ ನರ್‍ಕಾಚ್ಯಾ ಭಯಾನಕ್ ಆಗಿತ್ ಜಾತಾ. ಅಧ್ಯಾಯವನ್ನು ನೋಡಿ |
ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ತಿರುಗಿದಾಗ, ಸೌಲನ ಮಗಳಾದ ಮೀಕಲಳು ದಾವೀದನಿಗೆ ಎದುರಾಗಿ ಬಂದು, “ನಿಷ್ಪ್ರಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿ ಹಾಕಿದ ಹಾಗೆಯೇ, ಈ ಹೊತ್ತು ತನ್ನ ಸೇವಕರ ದಾಸಿಯರ ಕಣ್ಣು ಮುಂದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಹೊಂದಿದನು?” ಎಂದಳು.