Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:32 - ಕನ್ನಡ ಸಮಕಾಲಿಕ ಅನುವಾದ

32 ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

32 ಅನಿ ಸಗ್ಳ್ಯಾ ಬಾಶಾಂಚಿ ಲೊಕಾ ತೆಚ್ಯಾ ಇದ್ರಾಕ್ ಜಮಾ ಹೊತ್ಯಾತ್. ತನ್ನಾ ಕುರ್‍ಬುರಾ ಕಶೆ ಶೆಳಿಯಾಕ್ನಿ ಅನಿ ಬಕ್ರ್ಯಾಕ್ನಿ ಎಗಳ್ತ್ಯಾತ್ ತಸೆ ತೊ ಥೈ ಜಮಲ್ಲ್ಯಾ ಲೊಕಾಕ್ನಿ ದೊನ್ ತಾಂಡೆ ಕರುನ್ ಎಗಳ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:32
22 ತಿಳಿವುಗಳ ಹೋಲಿಕೆ  

ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ,


ಆಗ ನೀವು ನೀತಿವಂತನಿಗೂ, ದುಷ್ಟನಿಗೂ, ದೇವರ ಸೇವೆ ಮಾಡುವವನಿಗೂ, ಮಾಡದವನಿಗೂ ಇರುವ ವ್ಯತ್ಯಾಸವನ್ನು ಪುನಃ ನೋಡುವಿರಿ.


ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು.


ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು.


ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ ಶುದ್ಧಮಾಡಿ ಗೋಧಿಯನ್ನು ಕಣಜದಲ್ಲಿ ತುಂಬಿಕೊಂಡು, ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.


ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.


“ನಾನೇ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ನನ್ನ ಕುರಿಗಳು ನನ್ನನ್ನು ತಿಳಿದಿವೆ.


ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು, ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ.


ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು.


ನಾನು ಸಾರುವ ಸುವಾರ್ತೆಯ ಪ್ರಕಾರ ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ವಿಚಾರಿಸುವ ದಿನದಲ್ಲಿ ಇವೆಲ್ಲಾ ಸಂಭವಿಸುವುದು.


ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು.


ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.


ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.


ಆದರೆ ದೇವರು ಮಂದೆಯ ಹಾಗೆ ತಮ್ಮ ಜನರನ್ನು ಹೊರತಂದು, ಕುರಿಗಳನ್ನು ನಡೆಸುವಂತೆ ಮರುಭೂಮಿಯಲ್ಲಿ ಅವರನ್ನು ನಡೆಸಿದರು.


ಯೆಹೋವ ದೇವರ ಸಂಗಡ ವಿವಾದಿಸುವವರು ಚದರಿಹೋಗುವರು. ಅವರು ಆಕಾಶದಲ್ಲಿಂದ ಅವರ ಮೇಲೆ ಗುಡುಗುವರು, ಯೆಹೋವ ದೇವರು ಲೋಕಾಂತ್ಯದವರೆಗೂ ನ್ಯಾಯತೀರಿಸುವರು. “ತಮ್ಮ ಅರಸನಿಗೆ ಬಲ ಕೊಡುವರು. ತಮ್ಮ ಅಭಿಷಿಕ್ತನ ಕೊಂಬನ್ನು ಉನ್ನತ ಮಾಡುವರು.”


ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು