Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:46 - ಕನ್ನಡ ಸಮಕಾಲಿಕ ಅನುವಾದ

46 ಅವರು ಯೇಸುವನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೂ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ನಂಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಆದರೆ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

46 ತೆಚೆಸಾಟ್ನಿ ತೆನಿ ತೆಕಾ ಧರುನ್ ಭಾಂದುಕ್ ಬಗಟ್ಲ್ಯಾನಿ. ಖರೆ ಲೊಕಾ ಜೆಜುಕ್ ಎಕ್ ಪ್ರವಾದಿ ಮನುನ್ ಮಾನುನ್ ಘೆಯ್ತ್ ತಸೆಮನುನ್ ತೆನಿ ಲೊಕಾಕ್ನಿ ಭಿಂಯಾಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:46
15 ತಿಳಿವುಗಳ ಹೋಲಿಕೆ  

ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.


‘ಮನುಷ್ಯರಿಂದ ಬಂತು,’ ಎಂದು ಹೇಳಿದರೆ ಜನರಿಗೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಗೌರವಿಸುತ್ತಾರೆ,” ಎಂದುಕೊಂಡರು.


“ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.


ಲೋಕವು ನಿಮ್ಮನ್ನು ದ್ವೇಷಿಸಲಾರದು. ಲೋಕದ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯದಲ್ಲಿ ನಾನು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.


ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.


ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು.


ಅಯ್ಯೋ, ಅರೀಯೇಲೇ, ಅರೀಯೇಲೇ, ದಾವೀದನು ವಾಸಿಸಿದ ಪಟ್ಟಣವೇ! ವರುಷಕ್ಕೆ ವರುಷವನ್ನು ಕೂಡಿಸಿರಿ. ನಿಮ್ಮ ಹಬ್ಬಗಳ ಚಕ್ರ ಮುಂದುವರಿಯಲಿ.


ಕುಚೋದ್ಯಗಾರನು ಬುದ್ಧಿವಾದವನ್ನು ದ್ವೇಷಿಸುತ್ತಾನೆ. ಅವನು ಜ್ಞಾನಿಗಳಿಂದ ದೂರವಿರುತ್ತಾನೆ.


ಮುಖ್ಯಯಾಜಕರೂ ಫರಿಸಾಯರೂ ಯೇಸುವಿನ ಸಾಮ್ಯಗಳನ್ನು ಕೇಳಿದಾಗ, ತಮ್ಮ ವಿಷಯದಲ್ಲಿಯೇ ಅದನ್ನು ಹೇಳಿದರೆಂದು ಅರ್ಥಮಾಡಿಕೊಂಡರು.


ಯೇಸು ಪುನಃ ಸಾಮ್ಯಗಳ ಮೂಲಕ ಅವರ ಕೂಡ ಮಾತನಾಡುತ್ತಾ:


ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.


ಆಗ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಸಮಯ ಇನ್ನೂ ಬಾರದೆ ಇದ್ದುದರಿಂದ ಅವರ ಮೇಲೆ ಯಾರೂ ಕೈಹಾಕಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು