Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 2:23 - ಕನ್ನಡ ಸಮಕಾಲಿಕ ಅನುವಾದ

23 ಅಲ್ಲಿ ನಜರೇತ್ ಎಂಬ ಊರಲ್ಲಿ ವಾಸಮಾಡಿದನು. ಹೀಗೆ, “ನಜರಾಯನೆಂಬ ಹೆಸರು ಯೇಸುವಿಗೆ ಬರುವುದು,” ಎಂದು ಪ್ರವಾದಿಗಳು ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅಲ್ಲಿರುವ ನಜರೇತೆಂಬ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನು ನಜರೇತಿನವನೆಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳು ಹೇಳಿರುವ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅಲ್ಲಿರುವ ನಜರೇತ್ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನನ್ನು ನಜರೇತಿನವನೆಂದು ಕರೆಯುವರು” ಎಂಬ ಪ್ರವಚನ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಮತ್ತು ನಜರೇತೆಂಬ ಊರಿಗೆ ಬಂದು ಅಲ್ಲಿ ಮನೆಮಾಡಿಕೊಂಡು ಇದ್ದನು. ಇದರಿಂದ - ನಜರಾಯನೆಂಬ ಹೆಸರು ಆತನಿಗೆ ಬರುವದು ಎಂಬದಾಗಿ ಪ್ರವಾದಿಗಳಿಂದ ಹೇಳಿಸಿರುವ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನಜರೇತ್ ಎಂಬ ಊರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನು’ ಎಂದು ಕರೆಯುತ್ತಾರೆ” ಎಂದು ದೇವರು ಪ್ರವಾದಿಗಳ ಮೂಲಕ ಹೇಳಿದ್ದು ಹೀಗೆ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಅನಿ ಥೈ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾಲೊ. ಅಶೆ “ತೆಕಾ ನಜರೆತ್‍ಕಾರ್ ಮನುನ್ ಬಲ್ವುತ್ಯಾತ್” ಮನುನ್ ಪ್ರವಾದ್ಯಾನಿ ಜೆಜುಚ್ಯಾ ವಿಶಯಾತ್ ಸಾಂಗಟಲ್ಲೆ ಖರೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 2:23
20 ತಿಳಿವುಗಳ ಹೋಲಿಕೆ  

ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು.


ಅವನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀವು ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರುವೆಯೋ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರಿಂದ ಬಂದ ಪರಿಶುದ್ಧರು,” ಎಂದು ಕೂಗಿ ಹೇಳಿದನು.


ಅವನು ಮುಖ್ಯ ದ್ವಾರದೊಳಗೆ ಹೋದಾಗ, ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ, “ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.


ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು:


“ಜಗತ್ತಿನಲ್ಲಿ ಇರುವ ಯೆಹೂದ್ಯರ ಮಧ್ಯದಲ್ಲಿ ದಂಗೆಯೆಬ್ಬಿಸಿ ಪೌಲನೆಂಬ ಈ ಮನುಷ್ಯನು ತೊಂದರೆ ಕೊಡುವವನಾಗಿದ್ದಾನೆಂತಲೂ ನಜರೇತಿನವರ ಪಂಗಡಕ್ಕೆ ಇವನು ನಾಯಕನೆಂದೂ ನಾವು ಕಂಡೆವು.


“ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.


ಪಿಲಾತನು ಒಂದು ಫಲಕದ ಮೇಲೆ ಶಿರೋನಾಮವನ್ನು ಬರೆಸಿ, ಅದನ್ನು ಶಿಲುಬೆಯ ಮೇಲಿಟ್ಟಿದ್ದನು. ಅದೇನಂದರೆ: ಯೆಹೂದ್ಯರ ಅರಸನಾದ ನಜರೇತಿನ ಯೇಸು.


ಆಗ ಯೇಸು ಅವರಿಗೆ ತಿರುಗಿ, “ನೀವು, ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು,” ಎಂದರು.


ಅವರು ಯೇಸುವಿಗೆ, “ನಜರೇತಿನ ಯೇಸುವನ್ನು,” ಎಂದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು,” ಎಂದರು. ಅವರನ್ನು ಹಿಡಿದುಕೊಡಲಿದ್ದ ಯೂದನು ಸಹ ಅವರೊಂದಿಗೆ ನಿಂತಿದ್ದನು.


ಯೋಸೇಫನೂ ಮರಿಯಳೂ ಕರ್ತದೇವರ ನಿಯಮದ ಪ್ರಕಾರ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ, ತಮ್ಮ ಊರಾಗಿದ್ದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.


ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು,


“ ‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು.


ಹರಕೆಮಾಡಿ, “ಸೇನಾಧೀಶ್ವರ ಯೆಹೋವ ದೇವರೇ, ನೀವು ನಿಶ್ಚಯವಾಗಿ ನಿಮ್ಮ ದಾಸಿಯ ದೀನತೆಯನ್ನು ಕಂಡು, ನಿಮ್ಮ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿಮ್ಮ ದಾಸಿಗೆ ಗಂಡು ಮಗುವನ್ನು ಕೊಟ್ಟರೆ, ಅವನು ಬದುಕುವ ಸಕಲ ದಿವಸಗಳಲ್ಲಿ ಅವನನ್ನು ಯೆಹೋವ ದೇವರಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರಿಕನ ಕತ್ತಿ ಬೀಳುವುದಿಲ್ಲ,” ಎಂದಳು.


ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.


ಹೀಗಿರುವಲ್ಲಿ, ಒಂದು ದಿನ ಯೇಸು ಗಲಿಲಾಯ ಪ್ರಾಂತದ ನಜರೇತ್ ಎಂಬ ಪಟ್ಟಣದಿಂದ ಬಂದು, ಯೊರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು.


“ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು