Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:5 - ಕನ್ನಡ ಸಮಕಾಲಿಕ ಅನುವಾದ

5 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರ‍ ಗ್ರಂಥದಲ್ಲಿ ಓದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವರ ವಿಷಯದಲ್ಲಿ - ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

5 ಅನಿ ದೆವ್ ಮನ್ತಾ,ಹೆಚೆಸಾಟ್ನಿ ಎಕ್ ಘೊಮನುಸ್ ಅಪ್ನಾಚ್ಯಾ ಬಾಯ್ಕ್, ಅನಿ ಬಾಬಾಕ್ ಸೊಡ್ತಾ, ಅನಿ ಅಪ್ನಾಚ್ಯಾ ಬಾಯ್ಕೊಕ್ಡೆ ಎಕ್ ಹೊತಾ, ಅನಿ ತೆನಿ ದೊಗೆಬಿ ಎಕುಚ್ ಆಂಗ್ ಹೊತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:5
19 ತಿಳಿವುಗಳ ಹೋಲಿಕೆ  

ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ.


ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ.


“ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.”


ವೇಶ್ಯೆಯನ್ನು ಸೇರುವವನು ಅವಳೊಂದಿಗೆ ಒಂದೇ ದೇಹವಾಗುವನೆಂಬುದು ನಿಮಗೆ ತಿಳಿಯದೋ? “ಅವರಿಬ್ಬರೂ ಒಂದೇ ಶರೀರವಾಗಿರುವರು,” ಎಂದು ಹೇಳಲಾಗಿದೆಯಲ್ಲವೇ?


ಕೇಳು ಮಗಳೇ, ಇದನ್ನು ಆಲೋಚಿಸಿ, ಕಿವಿಗೊಡು. ನಿಮ್ಮ ಜನರನ್ನೂ, ನಿಮ್ಮ ತಂದೆಯ ಮನೆಯನ್ನೂ ಮರೆತುಬಿಡು.


ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.


ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.


ದಾವೀದನು ಸೌಲನ ಸಂಗಡ ಮಾತನಾಡಿ ಮುಗಿಸಿದ ಮೇಲೆ, ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು.


ನಾನು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಎಚ್ಚರಿಕೆಯಿಂದ ಕಾಪಾಡಿ, ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದು, ಅವರನ್ನು ಅಂಟಿಕೊಂಡರೆ,


ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡಬೇಕು. ಅವರ ಸೇವೆಮಾಡಿ ಅವರಿಗೆ ಅಂಟಿಕೊಂಡು, ಅವರ ಹೆಸರಿನಲ್ಲಿ ಪ್ರಮಾಣಮಾಡಬೇಕು.


ಆದರೆ ನಿಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾದ ನೀವೆಲ್ಲರು ಇಂದಿನವರೆಗೆ ಬದುಕಿದ್ದೀರಿ.


ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು.


ಈ ಜನಾಂಗಗಳನ್ನು ಕುರಿತು ಯೆಹೋವ ದೇವರು ಇಸ್ರಾಯೇಲರಿಗೆ, “ನೀವು ಅವರ ಬಳಿಗೆ ಪ್ರವೇಶಿಸಬಾರದು. ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು,” ಎಂದು ಹೇಳಿದ್ದರು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು.


ನನ್ನ ಸಹೋದರನಾದ ಯೋನಾತಾನನೇ, ನಾನು ನಿನಗೋಸ್ಕರ ಶೋಕಿಸುತ್ತೇನೆ. ನೀನು ನನಗೆ ಬಹಳ ಮನೋಹರನಾಗಿದ್ದಿ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯಕರವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.


ನಿನ್ನನ್ನು ಸೃಷ್ಟಿಸಿದವನು ಒಬ್ಬನೇ ಅಲ್ಲವೇ? ನೀವು ದೇಹ ಮತ್ತು ಆತ್ಮದಲ್ಲಿ ಅವರಿಗೆ ಸೇರಿದವರು. ಮತ್ತು ಒಬ್ಬರೇ ದೇವರಾಗಿರುವ ದೇವರು ಏನು ಹುಡುಕುತ್ತಾರೆ? ದೈವಿಕ ಸಂತಾನ. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಯೌವನದ ಹೆಂಡತಿಗೆ ವಿಶ್ವಾಸದ್ರೋಹ ಮಾಡಬೇಡಿ.


ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು,” ಎಂದು ಹೇಳಿದರು.


ಇದಲ್ಲದೆ ದಾವೀದನು ಇಜ್ರೆಯೇಲ್ ಊರಿನವಳಾದ ಅಹೀನೋವಮಳನ್ನು ಮದುವೆ ಮಾಡಿಕೊಂಡಿದ್ದನು. ಅವರಿಬ್ಬರೂ ಅವನ ಹೆಂಡತಿಯರಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು