Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:8 - ಕನ್ನಡ ಸಮಕಾಲಿಕ ಅನುವಾದ

8 ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಕಡೆಯದಾಗಿ ಸಹೋದರರೇ, ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ಆಕ್ರಿಕ್ ಭಾವಾನು ಅನಿ ಭೆನಿಯಾನು, ಖರೆ ಅನಿ ಪ್ರಾಮಾನಿಕತೆ ಹೊತ್ತೆ ಖಚ್ಚೆ ಹಾಯ್ ನಿತಿನ್ ಹೊತ್ತೆ ಖಚ್ಚೆ ಪವಿತ್ರ್ ಹೊತ್ತೆ, ಅನಿ ಪ್ರೆಮಾನ್ ಭರಲೆ ಸಗ್ಳ್ಯಾನಿ ಮಾನಿ ಸಾರ್ಕೆ ಖಚ್ಚೆ ಹಾಯ್ ತೆಚ್ಯಾ ವಿಶಯಾತುಚ್ ಚಿಂತುನ್ಗೆತ್ ರ್‍ಹಾವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:8
67 ತಿಳಿವುಗಳ ಹೋಲಿಕೆ  

ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.


ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ


ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ.


ಪವಿತ್ರಾತ್ಮರ ಫಲವೇನೆಂದರೆ: ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ,


ನಿಮ್ಮ ನಡವಳಿಕೆಯು ಯೆಹೂದ್ಯರಲ್ಲದವರ ನಡುವೆ ಯೋಗ್ಯವಾಗಿರಲಿ, ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ, ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಕರ್ತ ಯೇಸು ನಮ್ಮನ್ನು ದರ್ಶಿಸುವ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.


ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಶುದ್ಧಮನಸ್ಸಾಕ್ಷಿಯಿಂದ ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಲು ಬಯಸುತ್ತೇವೆ.


ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು.


ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ.


ಆದರೆ, ಅವನು ಅತಿಥಿ ಸತ್ಕಾರ ಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಸ್ವಯಂನಿಯಂತ್ರವುಳ್ಳವನೂ ನ್ಯಾಯವಂತನೂ ಪರಿಶುದ್ಧನೂ ಶಿಸ್ತುಳ್ಳವನಾಗಿರಬೇಕು.


ಕ್ರಿಸ್ತ ಯೇಸುವಿನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.


ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.


ನಮ್ಮವರು ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೂ ಅಗತ್ಯವಾಗಿರುವ ಕೊರತೆಗಳನ್ನು ನೀಗಿಸುವುದಕ್ಕೂ ಕಲಿತುಕೊಳ್ಳಲಿ. ಆಗ ಅವರು ನಿಷ್ಪಲರಾಗದೇ ಇರುವರು.


ಪಕ್ಷತನ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಯ ಕೃತ್ಯಗಳಲ್ಲಾಗಲಿ, ಮತ್ಸರಗಳಲ್ಲಾಗಲಿ ನಿರತರಾಗಿರದೆ ಹಗಲಿನಲ್ಲಿರುವವರಂತೆ ಸಭ್ಯತೆಯಿಂದ ನಡೆದುಕೊಳ್ಳೋಣ.


ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ; ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.


ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಅವರ ಸಂಕಟದಲ್ಲಿ ಪರಾಮರಿಸಿ, ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ದೋಷವೂ ಆಗಿರುವ ಭಕ್ತಿ.


ನನ್ನ ಪ್ರಿಯ ಮಕ್ಕಳೇ, ನೀವು ಬರೀಮಾತಿನಿಂದಾಗಲಿ, ಹೊಗಳಿಕೆಯ ಮಾತಿನಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರಬೇಕು.


ವೃದ್ಧರು ಆತ್ಮ ಸಂಯಮವುಳ್ಳವರೂ ಗೌರವಕ್ಕೆ ಯೋಗ್ಯರೂ ಸ್ವಯಂನಿಯಂತ್ರಿತರೂ ನಂಬಿಕೆ, ಪ್ರೀತಿ, ತಾಳ್ಮೆ ಇವುಗಳಲ್ಲಿ ಬದಲಾಗದವರೂ ಆಗಿರಬೇಕೆಂದು ಉಪದೇಶಿಸು.


ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ.


ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.


ಎಲ್ಲಕ್ಕೂ ಮಿಗಿಲಾಗಿ ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ ಇರಲಿ. ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.


ಇಸ್ರಾಯೇಲಿನ ದೇವರೂ, ಇಸ್ರಾಯೇಲಿನ ಬಂಡೆಯಾದವರೂ ನನಗೆ ಮಾತನಾಡಿದ್ದು: ‘ಮನುಷ್ಯರ ಮೇಲೆ ನೀತಿಯಿಂದ ಆಳುವವನು, ದೇವರ ಭಯದಿಂದ ಆಳುವವನು.


ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು.


ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.


ಕಡೆಯದಾಗಿ ನನ್ನ ಪ್ರಿಯರೇ, ಕರ್ತನಲ್ಲಿ ಆನಂದಿಸಿರಿ. ಬರೆದದ್ದನ್ನೇ ನಿಮಗೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ, ಅದು ನಿಮಗೆ ಸುರಕ್ಷಿತವೇ.


ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ.


ನೀತಿವಂತನ ಮಾರ್ಗವು ಸಮಾನವಾಗಿದೆ. ನೀನು ಅತ್ಯಧಿಕವಾದ ಯಥಾರ್ಥವಂತನು, ನೀತಿವಂತನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ,


ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ. ಪಟ್ಟಣದ ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.


ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು.


ಆಕೆಯು ಮಕ್ಕಳನ್ನು ಸಾಕಿದವಳೂ ಅತಿಥಿ ಸತ್ಕಾರ ಮಾಡಿದವಳೂ ಭಕ್ತರ ಪಾದಗಳನ್ನು ತೊಳೆದವಳೂ ಸಂಕಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಹೀಗೆ ಪ್ರತಿಯೊಂದು ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.


ನೀವು ಬದುಕಿ ನಿಮ್ಮ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಹಾಗೆ ನ್ಯಾಯವನ್ನು ಅಂದರೆ ಕೇವಲ ನ್ಯಾಯವನ್ನೇ ಅನುಸರಿಸಬೇಕು.


ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ.


ಹೀಗೆ ನಿಮ್ಮ ಅನುದಿನದ ಜೀವನವು ಹೊರಗಿನವರ ಮುಂದೆ ಯೋಗ್ಯವಾಗಿರುವುದು ಮತ್ತು ನೀವು ಯಾರ ಮೇಲೆಯೂ ಆತುಕೊಳ್ಳದೆ ಬಾಳುವಿರಿ.


ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ. ಏಕೆಂದರೆ ನಾವೆಲ್ಲರೂ ಒಂದೇ ದೇಹದ ಅಂಗಗಳು.


ಮಾನ ಅವಮಾನಗಳಿಂದಲೂ ಕೀರ್ತಿ ಅಪಕೀರ್ತಿಗಳಿಂದಲೂ ಸತ್ಯವಂತರಾಗಿದ್ದರೂ ಮೋಸಗಾರರೂ ಎಂದೆಣಿಸಿಕೊಂಡವರಾಗಿದ್ದೇವೆ.


ಅವರು, “ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನು, ದೇವರಿಗೆ ಭಯಪಡುವವನು, ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನೀನು ಹೇಳುವಂಥದ್ದನ್ನು ಕೇಳಲಿಕ್ಕಾಗಿ ನಿನ್ನನ್ನು ಅಲ್ಲಿಗೆ ಕರೆಯಿಸಬೇಕೆಂದು ಒಬ್ಬ ಪರಿಶುದ್ಧ ದೇವದೂತನಿಂದ ಆದೇಶಪಡೆದಿದ್ದಾನೆ,” ಎಂದರು.


ತಮ್ಮಷ್ಟಕ್ಕೆ ತಾವೇ ಮಾತನಾಡುವವರು ತಮ್ಮ ಸ್ವಂತ ಮಹಿಮೆಯನ್ನು ಹುಡುಕುತ್ತಾರೆ. ಆದರೆ ತನ್ನನ್ನು ಕಳುಹಿಸಿದ ತಂದೆಯ ಮಹಿಮೆಯನ್ನು ಹುಡುಕುವ ಮನುಷ್ಯನು ಸತ್ಯವಂತನು; ಆತನಲ್ಲಿ ಅನೀತಿಯಿಲ್ಲ.


ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು.


ಏಕೆಂದರೆ, ಯೋಹಾನನು ನೀತಿವಂತನು ಮತ್ತು ಪವಿತ್ರ ಮನುಷ್ಯನು ಎಂದು ತಿಳಿದು ಹೆರೋದನು ಭಯಪಟ್ಟು ಅವನನ್ನು ಸುರಕ್ಷಿತವಾಗಿಟ್ಟಿದ್ದನು. ಯೋಹಾನನು ಹೇಳಿದ್ದನ್ನು ಹೆರೋದನು ಕೇಳಿದಾಗಲೆಲ್ಲಾ ಅವನಿಗೆ ಗಲಿಬಿಲಿಯಾಗುತ್ತಿತ್ತು. ಆದರೂ ಅವನ ಮಾತನ್ನು ಕೇಳಲು ಇಷ್ಟಪಡುತ್ತಿದ್ದನು.


ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ; ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.


ಈಗ ನನ್ನ ಮಗಳೇ, ನೀನು ಭಯಪಡಬೇಡ. ನಿನಗೆ ಬೇಕಾಗಿರುವುದನ್ನು ನಿನಗೆ ಮಾಡುವೆನು. ನೀನು ಗುಣವತಿಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರೂ ಬಲ್ಲರು.


ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.


ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು.


“ಅನನೀಯ ಎಂಬ ಹೆಸರಿನವನೊಬ್ಬನು ನನ್ನ ಬಳಿ ಬಂದನು. ಅವನು ಮೋಶೆಯ ನಿಯಮಕ್ಕನುಗುಣವಾಗಿ ಭಕ್ತಿವಂತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ ಸಾಕ್ಷಿಹೊಂದಿದವನೂ ಆಗಿದ್ದನು.


ಅವನ ಬಾಯಿ ಮಾತು ಬಹು ಮಧುರ. ಹೌದು, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಪುತ್ರಿಯರೇ, ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.


ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು.


ಪ್ರಿಯ ಸ್ನೇಹಿತರೇ, ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.


ವೃದ್ಧ ಸ್ತ್ರೀಯರನ್ನು ತಾಯಿಯಂತೆಯೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆಯಿಂದ ಸಹೋದರಿಯರಂತೆಯೂ ಅವರವರಿಗೆ ಬುದ್ಧಿ ಹೇಳು.


ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.


“ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ. ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು.


ನ್ಯಾಯದ ತೂಕವೂ ತಕ್ಕಡಿಯೂ ಯೆಹೋವ ದೇವರದೇ. ಚೀಲದ ತೂಕಗಳು ಅವರ ಕೈಕೆಲಸವೇ.


ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು.


ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು.


ಸಹೋದರರೇ, ನಿಮ್ಮಲ್ಲಿ ಪವಿತ್ರಾತ್ಮಭರಿತರೂ ಜ್ಞಾನವಂತರೂ ಎಂದು ಸಾಕ್ಷಿ ಹೊಂದಿರುವ ಏಳು ಜನರನ್ನು ಆಯ್ಕೆ ಮಾಡಿರಿ. ನಾವು ಅವರನ್ನು ಈ ಕಾರ್ಯಕ್ಕಾಗಿ ನೇಮಿಸುವೆವು.


ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ.


ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು.


ಹಿರಿಯರು ನಂಬಿಕೆಯಿಂದಲೇ ಒಳ್ಳೆಯ ಸಾಕ್ಷಿಹೊಂದಿದರು.


ಹಾಗೆಯೇ ಅವರ ಹೆಂಡತಿಯರು ಗೌರವವುಳ್ಳವರಾಗಿರಬೇಕು. ಚಾಡಿ ಹೇಳದವರೂ ಸ್ವಸ್ಥ ಬುದ್ಧಿಯುಳ್ಳವರೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರೂ ಆಗಿರತಕ್ಕದ್ದು.


ಅವನೊಂದಿಗೆ ಇನ್ನೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇನೆ. ಆ ಸಹೋದರನು ಮಾಡಿದ ಸುವಾರ್ತೆ ಸೇವೆಯನ್ನು ಎಲ್ಲಾ ಸಭೆಗಳವರು ಪ್ರಶಂಶಿಸಿದ್ದಾರೆ.


ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ, ಸಂತೋಷಕರವಾಗಿಯೂ ಇದ್ದರು. ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು.


ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ.


“ಎಷ್ಟರವರೆಗೆ ಅನ್ಯಾಯವಾಗಿ ತೀರ್ಪು ನೀಡುವಿರಿ. ಎಲ್ಲಿಯತನಕ ದುಷ್ಟರಿಗೆ ಮುಖದಾಕ್ಷಿಣ್ಯ ಮಾಡುವಿರಿ?


ಈ ರೀತಿಯಲ್ಲಿ ಕ್ರಿಸ್ತನಿಗೆ ಸೇವೆಮಾಡುವವರು ದೇವರಿಗೆ ಮೆಚ್ಚುಗೆಯಾದವರೂ ಜನರಿಂದ ಅನುಮೋದನೆ ಹೊಂದಿದವರೂ ಆಗಿರುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು