Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 1:25 - ಕನ್ನಡ ಸಮಕಾಲಿಕ ಅನುವಾದ

25 ನಿಮಗೆ ನಂಬಿಕೆಯಲ್ಲಿ ಅಭಿವೃದ್ಧಿಯೂ ಸಂತೋಷವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರೊಡನೆ ಇರುವೆನೆಂದು ನಿಶ್ಚಯವಾಗಿ ತಿಳಿದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆದದರಿಂದ ನಿಮಗೆ ಕ್ರಿಸ್ತ ನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ತಸೆಹೊವ್ನ್ ತುಮ್ಕಾ ವಿಶ್ವಾಸಾತ್ ವಾಡಾವಳಿಕ್ ಅನಿ ಕುಶಿ ಹೊವ್‍ಸಾಟ್ನಿ ಮಿಯಾ ತುಮ್ಚ್ಯಾ ವಾಂಗ್ಡಾ ಝಿತ್ತೊ ರ್‍ಹಾತಾ ಮನುನ್ ಮಿಯಾ ಲೈ ವಿಶ್ವಾಸ್ ಥವ್ಲಾ ಅನಿ ಮಾಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 1:25
17 ತಿಳಿವುಗಳ ಹೋಲಿಕೆ  

ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತ ದೇವರಲ್ಲಿ ಭರವಸೆಯುಳ್ಳವನಾಗಿದ್ದೇನೆ.


ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತೇವೆಂದು ತಿಳಿಯಬೇಡಿರಿ. ಆದರೆ ನಿಮ್ಮ ಆನಂದಕ್ಕಾಗಿ ಕೆಲಸಮಾಡಿ, ನಾವೂ ಭಾಗಿಗಳಾಗಿರಲು ಬಯಸುತ್ತೇವೆ. ಏಕೆಂದರೆ, ನೀವು ವಿಶ್ವಾಸದಲ್ಲಿ ದೃಢವಾಗಿ ನಿಂತಿದ್ದೀರಲ್ಲ.


ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.


ಯೇಸುವಿನ ಮೂಲಕವೇ ನಾವು ಈಗ ಈ ಕೃಪೆಯಲ್ಲಿ ವಿಶ್ವಾಸದಿಂದ ಪ್ರವೇಶಮಾಡಿದ್ದೇವೆ. ಈ ಕೃಪೆಯಲ್ಲಿಯೇ ಈಗ ನಿಂತಿದ್ದೇವೆ. ನಾವು ದೇವರ ಮಹಿಮೆಯಲ್ಲಿ ಪಾಲುಗೊಳ್ಳುತ್ತೆವೆಂಬ ನಿರೀಕ್ಷೆಯಲ್ಲಿ ಆನಂದಪಡುತ್ತೇವೆ.


“ನಿಮ್ಮ ಮಧ್ಯದಲ್ಲಿ ನಾನು ದೇವರ ರಾಜ್ಯದ ಬಗ್ಗೆ ಬೋಧಿಸುತ್ತಾ ಇದ್ದೆನು. ನಿಮ್ಮಲ್ಲಿ ಯಾರೂ ನನ್ನ ಮುಖವನ್ನು ಇನ್ನೊಮ್ಮೆ ಕಾಣಲಾರಿರಿ ಎಂದು ನಾನು ಬಲ್ಲೆನು.


ನೀವು ಕ್ರಿಸ್ತ ಯೇಸುವನ್ನು ನೋಡಲಿಲ್ಲವಾದರೂ ಅವರನ್ನು ಪ್ರೀತಿಸುತ್ತೀರಿ. ನೀವು ಈಗ ಅವರನ್ನು ಕಾಣದಿದ್ದರೂ ಅವರಲ್ಲಿ ನಂಬಿಕೆಯಿಟ್ಟು ವ್ಯಕ್ತಪಡಿಸಲಾಗದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.


ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದದಿಂದ ತುಂಬಿದವನಾಗಿ ಬರುತ್ತೇನೆಂದು ಬಲ್ಲೆನು.


ಯೆಹೂದ್ಯರಲ್ಲದವರನ್ನು ದೇವರಿಗೆ ವಿಧೇಯರಾಗುವುದಕ್ಕಾಗಿ ಕ್ರಿಸ್ತನು ನನ್ನ ಮೂಲಕ ಮಾತಿನಿಂದಲೂ ಕೃತ್ಯದಿಂದಲೂ


ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.


ಅವನು ಅಲ್ಲಿಗೆ ಬಂದು ದೇವರ ಕೃಪೆಯನ್ನು ಕಂಡು ಹರ್ಷಭರಿತನಾಗಿ, ಅವರೆಲ್ಲರೂ ಕರ್ತನಿಗೆ ಹೃದಯಪೂರ್ವಕವಾಗಿ ಭಯಭಕ್ತಿ ಉಳ್ಳವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸಿದನು.


ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು.


ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.


ಆದರೂ ನಾನು ಶರೀರದಲ್ಲಿಯೇ ಉಳಿದಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.


ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು