Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 1:10 - ಕನ್ನಡ ಸಮಕಾಲಿಕ ಅನುವಾದ

10 ಆಗ, ಅತ್ಯುತ್ತಮ ಕಾರ್ಯಗಳನ್ನು ನೀವು ವಿವೇಚಿಸಿಕೊಳ್ಳುವಿರಿ. ಕ್ರಿಸ್ತನ ಪುನರಾಗಮನ ದಿನದವರೆಗೆ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕೆಂತಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ, ನಿರ್ಮಲರಾಗಿಯೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭು ಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿ ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ ಕ್ರಿಸ್ತನು ಬರುವ ದಿನದಲ್ಲಿ ನೀವು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಅಸೆಚ್ ಬರಿ ಕಾಮಾ ಖಲಿ ಮನ್ತಲೆ ತುಮಿ ಕಳ್ವುನ್ ಘೆತಲೆ ಹೊವ್ಚೆ, ಅನಿ ಕ್ರಿಸ್ತ್ ಯೆತಲ್ಯಾ ದಿಸಾತ್ ತುಮಿ ಸರಳ್ ಅನಿ ನಿತಳ್ ರ್‍ಹಾವ್ಚೆ ಮನುನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 1:10
43 ತಿಳಿವುಗಳ ಹೋಲಿಕೆ  

ಈ ಲೋಕದ ನಡುವಳಿಕೆಯನ್ನು ಹೊಂದಿಕೊಳ್ಳದೇ, ನಿಮ್ಮ ಮನಸ್ಸನ್ನು ರೂಪಾಂತರಿಸಿಕೊಂಡು ನವೀಕರಿಸಿಕೊಳ್ಳಿರಿ. ಆಗ ನೀವು ಉತ್ತಮವಾದ, ಮೆಚ್ಚುಗೆಯಾಗಿರುವಂಥ ಮತ್ತು ಪರಿಪೂರ್ಣವಾದ ದೇವರ ಚಿತ್ತ ಯಾವುದು ಎಂಬುದನ್ನು ತಿಳಿದುಕೊಳ್ಳುವಿರಿ.


ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!


ಸಮಾಧಾನದ ದೇವರು ತಾವಾಗಿಯೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ. ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಪುನರಾಗಮನದಲ್ಲಿ ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿ.


ದೇವರ ಚಿತ್ತವನ್ನು ಬಲ್ಲವನೂ ನಿಯಮದಿಂದ ಉಪದೇಶವನ್ನು ಹೊಂದಿ ಯಾವುದು ಉತ್ತಮವಾದದ್ದೆಂದು ಅನುಮೋದಿಸುವವನೂ ಆಗಿದ್ದೀ.


ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿರಿ.


ಪ್ರಿಯ ಸ್ನೇಹಿತರೇ, ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.


ಒಳ್ಳೆಯ ಕೆಲಸಗಳನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಕ್ರಿಸ್ತ ಯೇಸುವಿನ ಪುನರಾಗಮನ ದಿನದವರೆಗೆ ಪೂರೈಸುವರು ಎಂಬುದೇ ನನ್ನ ದೃಢ ವಿಶ್ವಾಸವಾಗಿದೆ.


ಎಲ್ಲವನ್ನು ಪರಿಶೋಧಿಸಿ ಒಳ್ಳೆಯದನ್ನೇ ಬಿಗಿಯಾಗಿ ಹಿಡಿದುಕೊಳ್ಳಿರಿ.


ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ದಿನದಲ್ಲಿ ನೀವು ನಿರ್ದೋಷಿಗಳಾಗಿರುವಂತೆ ಅವರು ಕೊನೆಯತನಕವೂ ನಿಮ್ಮನ್ನು ಬಲಪಡಿಸಿ ಕಾಯುವರು.


ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ಪ್ರಯಾಸ, ಸಹನೆಯನ್ನು ಬಲ್ಲೆನು. ನೀನು ದುಷ್ಟರನ್ನು ಸಹಿಸಲಾರೆ. ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.


ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು.


ನತಾನಯೇಲನು ತಮ್ಮ ಬಳಿಗೆ ಬರುವುದನ್ನು ಯೇಸು ಕಂಡು ಅವನ ವಿಷಯವಾಗಿ, “ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ,” ಎಂದು ಹೇಳಿದರು.


ಆಗ ಯೇಸು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನೀನು ನನಗೆ ಅಡ್ಡಿಯಾಗಿದ್ದೀ; ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು.


“ಆದ್ದರಿಂದ ನೀವು ಈಗ ಯೆಹೋವ ದೇವರಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಅವರನ್ನು ಸೇವಿಸಿರಿ. ನಿಮ್ಮ ಪೂರ್ವಜರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಸೇವಿಸಿದ ದೇವರುಗಳನ್ನು ತೊರೆದುಬಿಟ್ಟು ಯೆಹೋವ ದೇವರನ್ನೇ ನೀವು ಸೇವಿಸಿರಿ.


ಈ ಲೋಕದೊಂದಿಗೂ, ವಿಶೇಷವಾಗಿ ನಮ್ಮ ಮತ್ತು ನಿಮ್ಮ ಸಂಬಂಧದಲ್ಲಿಯೂ, ನಾವು ದೇವರಿಂದ ಹೊಂದಿದ ಪವಿತ್ರತೆ ಮತ್ತು ದೈವಿಕ ನಿಷ್ಕಪಟತ್ವದಿಂದ ಯೋಗ್ಯರಾಗಿ ವರ್ತಿಸಿದ್ದೇವೆ ಎಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಈ ಮನಸ್ಸಾಕ್ಷಿಯ ಹೇಳಿಕೆಯು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಇದನ್ನು ಈ ಲೋಕದ ಜ್ಞಾನದಿಂದ ಅಲ್ಲ, ದೇವರ ಕೃಪೆಯನ್ನೇ ಆಶ್ರಯಿಸಿ ಮಾಡಿದ್ದೇವೆ.


ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.


ಮಾಂಸಭಾವದ ಮನಸ್ಸು ದೇವರಿಗೆ ಶತ್ರುವಾಗಿರುತ್ತದೆ. ಏಕೆಂದರೆ, ಅದು ದೇವರ ನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ.


ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು.


ಒಳ್ಳೆಯದನ್ನು ದ್ವೇಷಮಾಡಿ ಕೆಟ್ಟದ್ದನ್ನು ಪ್ರೀತಿ ಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ನನ್ನ ಜನರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತು ಕೊಳ್ಳುವವರೇ,


ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.


ಬಾಯಿಯು ಆಹಾರವನ್ನು ರುಚಿ ನೋಡುವಂತೆ ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?


ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು.


ಇವರಾದರೋ, ನಾನು ಸುವಾರ್ತೆಗಾಗಿ ನೇಮಕವಾಗಿದ್ದೇವೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ.


ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಳಿದು ಹೋಗದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ಕೃಪೆಯಿರಲಿ.


ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ, ನಾವು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ದೇಹದ ಪರಿಪಕ್ವತೆಯೆಡೆಗೆ ಅವರ ಶಿರಸತ್ವದಲ್ಲಿ ಬೆಳೆಯೋಣ.


ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ?


ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ.


ನಮ್ಮ ಸೇವೆಯು ಅಪವಾದಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.


ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ.


ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.


ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ.


ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಏಕೆಂದರೆ ನಾನು ಹೃದಯಪೂರ್ವಕವಾಗಿ ದೇವರ ನಿಯಮದಲ್ಲಿ ಹರ್ಷಗೊಳ್ಳುವವನಾಗಿದ್ದೇನೆ.


ನಾನು ಮಾಡಲು ಬಯಸದಿರುವುದನ್ನು ಮಾಡುವುದಾದರೆ, ನಿಯಮವು ಒಳ್ಳೆಯದೆಂದು ಒಪ್ಪುತ್ತೇನೆ.


ಆದ್ದರಿಂದ ದೇವರ ಮುಂದೆಯೂ ಜನರ ಮುಂದೆಯೂ ನನ್ನ ಮನಸ್ಸಾಕ್ಷಿಯನ್ನು ಯಾವಾಗಲೂ ಶುದ್ಧವಾಗಿಟ್ಟುಕೊಂಡಿರಲು ಪರಿಶ್ರಮಿಸುತ್ತಿದ್ದೇನೆ.


ಕೇಡನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆ ಮತ್ತು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವರು ಮಾಡಿರುವ ಕೆಟ್ಟ ಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ.


ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು