Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 7:21 - ಕನ್ನಡ ಸಮಕಾಲಿಕ ಅನುವಾದ

21 ಜನರು ಆಡಿದ ಎಲ್ಲಾ ಮಾತುಗಳನ್ನು ನೀನು ಲಕ್ಷಿಸಬೇಡ, ನಿನ್ನ ಕೆಲಸದವರೂ ನಿನ್ನನ್ನು ಶಪಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು, ನಿನ್ನ ಆಳು ನಿನ್ನನ್ನು ಶಪಿಸುವುದು ಕಿವಿಗೆ ಬಿದ್ದೀತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಜನರು ಆಡುವ ಮಾತುಗಳನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ. ನಿನ್ನ ಆಳೂ ನಿನ್ನನ್ನು ಶಪಿಸುವುದು ಕಿವಿಗೆ ಬೀಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು; ನಿನ್ನ ಆಳು ನಿನ್ನನ್ನು ಶಪಿಸುವದು ಕಿವಿಗೆ ಬಿದ್ದೀತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 7:21
7 ತಿಳಿವುಗಳ ಹೋಲಿಕೆ  

“ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ; ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ.


ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.


ಆದರೆ ಅರಸನು, “ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ. ಏಕೆಂದರೆ, ‘ದಾವೀದನನ್ನು ದೂಷಿಸು,’ ಎಂದು ಯೆಹೋವ ದೇವರು ಅವನಿಗೆ ಹೇಳಿದ್ದಾರೆ. ಹಾಗಾದರೆ, ‘ಏಕೆ ಹೀಗೆ ಮಾಡುತ್ತೀ?’ ಎಂದು ಹೇಳುವವನ್ಯಾರು?” ಎಂದನು.


“ನನ್ನ ಒಡೆಯನೇ, ನನ್ನ ಅಕ್ರಮವನ್ನು ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖತನದಿಂದ ಮಾಡಿದ ಕಾರ್ಯವನ್ನು ನೆನಸದೆ, ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ.


ನೀನು ಸಹ ಅನೇಕ ವೇಳೆ ಇತರರನ್ನು ಶಪಿಸಿದ್ದೀ, ಇದು ನಿನ್ನ ಹೃದಯಕ್ಕೆ ತಿಳಿದಿದೆ.


ಆದರೆ ಕೆಲವು ಪುಂಡಪೋಕರಿಗಳು, “ಇವನು ನಮ್ಮನ್ನು ರಕ್ಷಿಸುವುದೇನು?” ಎಂದು ಅವನನ್ನು ತಿರಸ್ಕರಿಸಿದರು. ಅವರು ಅವನಿಗೆ ಕಾಣಿಕೆಯನ್ನು ತೆಗೆದುಕೊಂಡು ಬರಲಿಲ್ಲ. ಅವನು ಕೇಳದ ಹಾಗೆ ಇದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು