Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 3:2 - ಕನ್ನಡ ಸಮಕಾಲಿಕ ಅನುವಾದ

2 ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ. ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕುವುದಕ್ಕೆ ಒಂದು ಸಮಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಹುಟ್ಟುವ ಸಮಯ, ಸಾಯುವ ಸಮಯ ನೆಡುವ ಸಮಯ, ನೆಟ್ಟದ್ದನ್ನು ಕೀಳುವ ಸಮಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಹುಟ್ಟುವ ಸಮಯ, ಸಾಯುವ ಸಮಯ. ನೆಡುವ ಸಮಯ, ಸಸಿಗಳನ್ನು ಕೀಳುವ ಸಮಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 3:2
36 ತಿಳಿವುಗಳ ಹೋಲಿಕೆ  

ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ.


ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ; ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ; ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ.


ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.


ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು.


ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಪರಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವು ಬೇರುಸಹಿತವಾಗಿ ಕಿತ್ತುಹಾಕಲಾಗುವುದು.


ಒಬ್ಬ ಸ್ತ್ರೀಗೆ ಪ್ರಸವ ಗಳಿಗೆ ಬಂದಾಗ ದುಃಖವಿರುವುದು. ಆದರೆ ಆಕೆಯು ಮಗುವನ್ನು ಹೆತ್ತಾಗ ಈ ಲೋಕದೊಳಗೆ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಆಕೆಯು ಇನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.


ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.


“ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ?


“ಆ ಸಮಯದಲ್ಲಿಯೇ ಮೋಶೆ ಜನಿಸಿದನು. ಅವನು ದೇವರ ದೃಷ್ಟಿಯಲ್ಲಿ ಸುಂದರನಾಗಿದ್ದನು. ಮೂರು ತಿಂಗಳುಗಳ ಕಾಲ ಅವನು ತನ್ನ ತಂದೆಯ ಮನೆಯಲ್ಲೇ ಬೆಳೆದನು.


“ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರುವ ಕಾಲವು ಹತ್ತಿರ ಬಂದಾಗ, ಈಜಿಪ್ಟಿನಲ್ಲಿ ನಮ್ಮ ಜನರ ಸಂಖ್ಯೆ ಬಹಳ ಹೆಚ್ಚಾಯಿತು.


ಆಗ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಸಮಯ ಇನ್ನೂ ಬಾರದೆ ಇದ್ದುದರಿಂದ ಅವರ ಮೇಲೆ ಯಾರೂ ಕೈಹಾಕಲಿಲ್ಲ.


ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.


ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’ ಎಂದು ಹೆಸರನ್ನಿಡಬೇಕು.


ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ,


ಆದರೆ ನಿಮಗೆ ಹೇಳಲು ಯೆಹೋವ ದೇವರು ನನಗೆ ಹೇಳಿದ್ದಾರೆ. ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ. ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.


ನೋಡು, ಈ ಹೊತ್ತು ನೀನು ಕೀಳುವುದಕ್ಕೂ, ಕೆಳಗೆ ಹಾಕಿಬಿಡುವುದಕ್ಕೂ, ನಾಶಮಾಡುವುದಕ್ಕೂ, ಕೆಡವಿ ಹಾಕುವುದಕ್ಕೂ, ಕಟ್ಟುವುದಕ್ಕೂ, ನೆಡುವುದಕ್ಕೂ ನಾನು ನಿನ್ನನ್ನು ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ನಿನ್ನನ್ನು ನೇಮಿಸಿದ್ದೇನೆ,” ಎಂದರು.


“ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಕೂಗು! ಏಕೆಂದರೆ ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು,” ಎಂದು ಯೆಹೋವ ದೇವರು ಹೇಳುತ್ತಾರೆ.


“ನೀನು ಹೋಗಿ ಹಿಜ್ಕೀಯನಿಗೆ ಹೀಗೆ ಹೇಳು, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ.


ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.


ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು. ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು. ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು.


ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ, ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು.


ಆಗ ಅವನು, “ಮುಂದಿನ ವರ್ಷ ಈ ಸಮಯದಲ್ಲಿ ನಿನ್ನ ಕೈಯಲ್ಲಿ ಒಬ್ಬ ಮಗನನ್ನು ಎತ್ತಿಕೊಂಡಿರುವೆ,” ಎಂದನು. ಅದಕ್ಕವಳು, “ಹಾಗಲ್ಲ, ದೇವರ ಮನುಷ್ಯನೇ, ನನ್ನ ಒಡೆಯನೇ, ನಿನ್ನ ಸೇವಕಿಗೆ ನೀನು ಸುಳ್ಳು ಹೇಳಬೇಡ,” ಎಂದಳು.


ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.


ತೃಪ್ತಿಪಟ್ಟವರು ಆಹಾರಕ್ಕಾಗಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಸಿದವರು ಇನ್ನು ಮುಂದೆ ಹಸಿಯರು. ಬಂಜೆಯಾದವಳು ಏಳುಮಂದಿ ಮಕ್ಕಳನ್ನು ಹೆತ್ತಳು. ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನಳಾದಳು.


ಯೆಹೋವ ದೇವರ ಮಾತಿನ ಹಾಗೆ ಅವರ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಮರಣಹೊಂದಿದನು.


ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ.


ಆದರೆ ಬರುವ ವರ್ಷ ಈ ಕಾಲದಲ್ಲಿ ಸಾರಳು ನಿನ್ನಿಂದ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸವೆನು,” ಎಂದು ಹೇಳಿದರು.


ನಿನ್ನ ಹೊರಗಿನ ಕೆಲಸವನ್ನು ಕ್ರಮವಾಗಿ ಇರಿಸು. ನಿನ್ನ ಹೊಲಗಳನ್ನು ಸಿದ್ಧಪಡಿಸು; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.


ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣುಹೆಂಟೆಯನ್ನು ತೆಗೆದು, ದಿನವೆಲ್ಲಾ ಹೊಡೆಯುವನೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು