Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 5:15 - ಕನ್ನಡ ಸಮಕಾಲಿಕ ಅನುವಾದ

15 ನಮ್ಮ ಹೃದಯಾನಂದವು ತೀರಿತು. ನಮ್ಮ ನರ್ತನವು ಶೋಕವಾಗಿ ಮಾರ್ಪಟ್ಟಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯ ನಲಿವುಗಳು ದುಃಖವಾಗಿ ಮಾರ್ಪಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಸಂತೋಷವು ನಮ್ಮ ಹೃದಯದಿಂದ ಮಾಯವಾಗಿದೆ ನಮ್ಮ ನಾಟ್ಯನಲಿವು ದುಃಖಕರವಾಗಿ ಮಾರ್ಪಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯವೇ ದುಃಖವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಮ್ಮ ಹೃದಯಗಳಲ್ಲಿ ಆನಂದವೇ ಉಳಿದಿಲ್ಲ. ನಮ್ಮ ನರ್ತನದ ಸ್ಥಾನವನ್ನು ಗೋಳಾಟವು ಆವರಿಸಿಕೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 5:15
6 ತಿಳಿವುಗಳ ಹೋಲಿಕೆ  

ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.


ನಾನು ಈ ದೇಶಗಳಿಂದ ಸಂತೋಷದ ಶಬ್ದ ಮತ್ತು ಸಂತೋಷದ ಶಬ್ದವನ್ನು ಮಾತ್ರ ತೆಗೆದುಹಾಕುತ್ತೇನೆ, ವಧು ಅಥವಾ ವಧುವಿನ ಧ್ವನಿ ಅಲ್ಲಿ ಕೇಳಿಸುವುದಿಲ್ಲ, ಬೀಸುಕಲ್ಲಿನ ಸದ್ದನ್ನು ಅಡಗಿಸುವೆನು. ದೀಪಕ್ಕೆ ಎಣ್ಣೆ ಇಲ್ಲದಂತೆ ಮಾಡುವೆನು.


ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ; ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ.


ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು