Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:38 - ಕನ್ನಡ ಸಮಕಾಲಿಕ ಅನುವಾದ

38 ಮಹೋನ್ನತರ ಬಾಯಿಂದ ಕೇಡೂ, ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಪರಾತ್ಪರನಾದ ದೇವರ ಬಾಯಿಯ ಮಾತಿನಿಂದಲೇ ಮೇಲು ಮತ್ತು ಕೇಡುಗಳು ಸಂಭವಿಸುತ್ತವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಒಳಿತು-ಕೇಡು ಸಂಭವಿಸುವುದು ಪರಾತ್ಪರನ ಮಾತಿನಿಂದ ಅಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಪರಾತ್ಪರನ ಬಾಯಿಮಾತಿನಿಂದಲೇ ಮೇಲು ಕೇಡುಗಳೆರಡೂ ಸಂಭವಿಸುತ್ತವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಕೆಟ್ಟವುಗಳೂ ಸಂಭವಿಸುವಂತೆ ಮಹೋನ್ನತನಾದ ಯೆಹೋವನು ಆಜ್ಞಾಪಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:38
8 ತಿಳಿವುಗಳ ಹೋಲಿಕೆ  

ಬೆಳಕನ್ನು ರೂಪಿಸುವವನೂ, ಕತ್ತಲನ್ನು ನಿರ್ಮಿಸುವವನೂ, ಸಮಾಧಾನವನ್ನು ಉಂಟುಮಾಡುವವನೂ, ವಿಪತ್ತನ್ನು ಬರಮಾಡುವವನೂ ನಾನೇ. ಯೆಹೋವನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.


ಪಟ್ಟಣದಲ್ಲಿ ಕಹಳೆಯನ್ನು ಊದಿದರೆ, ಜನರು ಹೆದರುವುದಿಲ್ಲವೇ? ಯೆಹೋವ ದೇವರಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೇ?


“ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ, ಹಾಗೆಯೇ ನಾನು ವಾಗ್ದಾನ ಮಾಡಿದ ಸಮೃದ್ಧಿಯನ್ನೆಲ್ಲಾ ಅವರ ಮೇಲೆ ಬರಮಾಡುವೆನು.


ಆದರೆ ಯೋಬನು ಅವಳಿಗೆ, “ನೀನು ಹುಚ್ಚಳಂತೆ ಮಾತನಾಡುತ್ತಿರುವೆ? ನಾವು ದೇವರಿಂದ ಒಳ್ಳೆಯದನ್ನು ಹೊಂದಿದ್ದೇವೆ, ಕಷ್ಟವನ್ನು ಹೊಂದಬಾರದೋ?” ಎಂದನು. ಇವೆಲ್ಲವುಗಳಲ್ಲಿಯೂ ಪಾಪದ ಮಾತೊಂದೂ ಯೋಬನ ಬಾಯಿಂದ ಬರಲಿಲ್ಲ.


ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ.


ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ. ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.


ಆದರೆ ಅರಸನು, “ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ. ಏಕೆಂದರೆ, ‘ದಾವೀದನನ್ನು ದೂಷಿಸು,’ ಎಂದು ಯೆಹೋವ ದೇವರು ಅವನಿಗೆ ಹೇಳಿದ್ದಾರೆ. ಹಾಗಾದರೆ, ‘ಏಕೆ ಹೀಗೆ ಮಾಡುತ್ತೀ?’ ಎಂದು ಹೇಳುವವನ್ಯಾರು?” ಎಂದನು.


ಸುಖ ದಿನದಲ್ಲಿ ಸಂತೋಷವಾಗಿರು. ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು: ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು