Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:8 - ಕನ್ನಡ ಸಮಕಾಲಿಕ ಅನುವಾದ

8 ಯೆಹೋವ ದೇವರು ಚೀಯೋನಿನ ಗೋಡೆಯನ್ನು ನಾಶಮಾಡಬೇಕೆಂದು ಉದ್ದೇಶಿಸಿದ್ದಾರೆ. ಅಳತೆಯ ಗೆರೆಯನ್ನು ಎಳೆದಿದ್ದಾರೆ. ತನ್ನ ಕೈಯನ್ನು ಕೆಡಿಸುವುದರಿಂದ ಹಿಂದೆಗೆಯಲಿಲ್ಲ. ಆದ್ದರಿಂದ ಕಲ್ಲಿನ ಪ್ರಾಕಾರವನ್ನು ಮತ್ತು ಗೋಡೆಯನ್ನು ಗೋಳಾಡುವಂತೆ ಆತನು ಮಾಡಿದ್ದಾನೆ. ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳು ಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಮತ್ತು ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಸಿಯೋನ್ ನಗರಿಯ ಕೋಟೆಯನ್ನು ನಾಶಪಡಿಸಲೆಂದು ಎಳೆದಿರುವನಲ್ಲಾ ಸರ್ವೇಶ್ವರ ಅಳತೆನೂಲನ್ನು ! ಹಾಳುಮಾಡುವ ತನ್ನ ಕೈಯನ್ನು ಹಿಂದೆಗೆಯದೆ ಬಿರುಕುಗೊಳಿಸಿದ್ದಾನೆ ಪೌಳಿಗೋಡೆಯನ್ನೇ, ಕೋಟೆಯನ್ನೇ, ಅವುಗಳೆರಡೂ, ಕುಸಿದು ಬಿದ್ದುಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳುಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಯೆಹೋವನು ಚೀಯೋನ್ ಕುಮಾರಿಯ ಪೌಳಿಗೋಡೆಯನ್ನು ನಾಶಮಾಡಬೇಕೆಂದು ಯೋಚಿಸಿದ್ದಾನೆ. ಆತನು ಅಳತೆದಾರದಿಂದ ಒಡೆಯಬೇಕಾದ ಗೋಡೆಗೆ ಗುರುತು ಮಾಡಿದ್ದಾನೆ. ಆತನು ತಾನು ಮಾಡುತ್ತಿದ್ದ ನಾಶನವನ್ನು ನಿಲ್ಲಿಸಲಿಲ್ಲ. ಪೌಳಿಗೋಡೆಗಳು ಮತ್ತು ಗೋಪುರಗಳು ದುಃಖದಿಂದ ಗೋಳಾಡುವಂತೆ ಆತನು ಮಾಡಿದ್ದಾನೆ. ಅವೆರಡೂ ಕುಸಿದುಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:8
17 ತಿಳಿವುಗಳ ಹೋಲಿಕೆ  

ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ವಿರುದ್ಧ ಬಳಸಿದ ನೂಲನ್ನೂ, ಅಹಾಬನ ಮನೆಯ ವಿರುದ್ಧ ಬಳಸಿದ ಮಟ್ಟಗೋಲನ್ನೂ ಚಾಚಿ, ಒಬ್ಬನು ತಟ್ಟೆಯನ್ನು ಒರೆಸಿದಂತೆ ಅದನ್ನು ಒರೆಸಿ ತಲೆಕೆಳಗಾಗಿ ಹಾಕುವ ಹಾಗೆ ನಾನು ಯೆರೂಸಲೇಮನ್ನು ಅಳಿಸಿಬಿಡುವೆನು.


“ಯೆಹೂದವು ದುಃಖಪಡುತ್ತದೆ. ಅವಳ ನಗರಗಳು ಸೊರಗುತ್ತವೆ; ಅವರು ಭೂಮಿಗಾಗಿ ಗೋಳಾಡುತ್ತಾರೆ, ಯೆರೂಸಲೇಮಿನ ಕೂಗು ಏರಿ ಬಂತು.


ಆದರೆ ಬಕಪಕ್ಷಿಯು ಮತ್ತು ಮುಳ್ಳುಹಂದಿಯು ಅದನ್ನು ಆವರಿಸಿಕೊಳ್ಳುವುವು. ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವುವು. ಗಲಿಬಿಲಿ ಎಂಬ ನೂಲನ್ನು, ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು.


ಚೀಯೋನ್ ಬಾಗಿಲುಗಳಲ್ಲಿ ಪ್ರಲಾಪವು, ದುಃಖವು ತುಂಬಿರುವುದು. ಅವಳು ನಿರ್ಗತಿಕಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.


ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ. ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ.


ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.


ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. ಅವರು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. ಅವರು ಕೆಡವಿ ಕನಿಕರಿಸಲಿಲ್ಲ. ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ.


ಕರ್ತದೇವರು ಶತ್ರುವಿನಂತೆ ಆಗಿ, ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. ಯೆಹೂದದ ದುಃಖವನ್ನೂ, ಪ್ರಲಾಪವನ್ನೂ ಹೆಚ್ಚಿಸಿದ್ದಾರೆ.


ಕರ್ತದೇವರು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾರೆ. ಯೆಹೂದದ ಪುತ್ರಿಯ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿ ಹಾಕಿದ್ದಾರೆ. ಅವರು ಅವುಗಳನ್ನು ನೆಲಸಮ ಮಾಡಿದ್ದಾರೆ. ಅವರು ಆಕೆಯ ರಾಜ್ಯವನ್ನೂ, ಪ್ರಭುಗಳನ್ನೂ ಅಗೌರವಿಸಿ ನೆಲಕ್ಕೆ ದಬ್ಬಿದ್ದಾರೆ.


ನಾನು ನ್ಯಾಯವನ್ನು ಅಳತೆಗೋಲನ್ನಾಗಿಯೂ ಮತ್ತು ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು. ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು. ಅಡಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿ ಬಿಡುವುದು.


ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.


ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.


ಹಾಗೆಯೇ ದಾವೀದನು ಮೋವಾಬ್ಯರನ್ನು ಸಹ ಸೋಲಿಸಿದನು. ಸೆರೆಯಾಳುಗಳನ್ನು ನೆಲದ ಮೇಲೆ ಹಗ್ಗದಿಂದ ಅಳತೆ ಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ, ಒಂದು ಪಾಲನ್ನು ಉಳಿಸಿದನು. ಹೀಗೆ ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.


ಅವರ ಹೃದಯವು ಕರ್ತದೇವರ ಕಡೆಗೆ ಕೂಗಿ, ಚೀಯೋನಿನ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನಿನಗೆ ವಿಶ್ರಾಂತಿ ಬೇಡ, ನಿನ್ನ ಕಣ್ಣ ರೆಪ್ಪೆಯನ್ನು ಮುಚ್ಚಬೇಡ.


ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು, ದರ್ಶನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ. ಅದು ಗೋಡೆಗಳು ಹೊಡೆದುರುಳಿಸುವ ದಿನವು. ಪರ್ವತಗಳಿಗೆ ಜನರು ಕೂಗಾಡುವ ದಿನವದು.


ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು