ಪ್ರಲಾಪಗಳು 2:22 - ಕನ್ನಡ ಸಮಕಾಲಿಕ ಅನುವಾದ22 ಹಬ್ಬದ ದಿನಕ್ಕೆ ಕರೆಯುವಂತೆಯೇ ನನ್ನ ವಿರುದ್ಧವಾಗಿ ಪ್ರತಿಯೊಂದು ದಿಕ್ಕಿನಲ್ಲಿಯ ವಿರೋಧಿಗಳನ್ನು ಕರೆದಿದ್ದೀರಿ. ಯೆಹೋವ ದೇವರ ಕೋಪದ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಾರರು, ಉಳಿದುಕೊಳ್ಳಲಾರರು. ನಾನು ಬೆಳೆಸಿ ಸಾಕಿದವರನ್ನು ವೈರಿಯು ನಾಶಮಾಡಿದ್ದಾನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಮಹೋತ್ಸವಕ್ಕೆ ಕರೆಯಿಸಿದಂತೆ ನನ್ನನ್ನು ಹೆದರಿಸುವ ದಿಗಿಲುಗಳನ್ನು ನನ್ನ ಸುತ್ತುಮುತ್ತಲು ಕರೆಯಿಸಿದ್ದೀ; ಯೆಹೋವನು ಕೋಪತೀರಿಸಿಕೊಳ್ಳುವ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಿಲ್ಲ, ಯಾರೂ ಉಳಿಯಲಿಲ್ಲ; ನಾನು ನಲಿದಾಡಿಸಿ ಸಾಕಿದವರನ್ನು ನನ್ನ ಶತ್ರುವು ಸಂಹರಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಸುತ್ತಮುತ್ತಲೂ ದಿಗಿಲು ಹುಟ್ಟಿಸುವ ನನ್ನ ಹಗೆಗಳನ್ನೆ ಕರೆಸಿದೆಯಲ್ಲಾ ಹಬ್ಬಕ್ಕೋ ಎಂಬಂತೆ ! ಸರ್ವೇಶ್ವರನ ಪ್ರಕೋಪದ ದಿನದಂದು ತಪ್ಪಿಸಿಕೊಳ್ಳಲಿಲ್ಲ ಯಾರೂ; ಉಳಿಯಲಿಲ್ಲ ಯಾರೂ. ಶತ್ರು ಸಂಹರಿಸಿಬಿಟ್ಟನಲ್ಲಾ ನಾನು ಸಾಕಿ ಆರೈಕೆ ಮಾಡಿದವರನ್ನೂ ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಮಹೋತ್ಸವಕ್ಕೆ ಕರೆಯಿಸಿದಂತೆ ನನ್ನನ್ನು ಹೆದರಿಸುವ ದಿಗಿಲುಗಳನ್ನು ನನ್ನ ಸುತ್ತುಮುತ್ತಲು ಕರೆಯಿಸಿದ್ದೀ; ಯೆಹೋವನು ಕೋಪತೀರಿಸಿಕೊಳ್ಳುವ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಿಲ್ಲ, ಯಾರೂ ಉಳಿಯಲಿಲ್ಲ; ನಾನು ನಲಿದಾಡಿಸಿ ಸಾಕಿದವರನ್ನು ನನ್ನ ಶತ್ರುವು ಸಂಹರಿಸಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಭೀತಿಯು ಸುತ್ತಮುತ್ತಲಿಂದ ನನ್ನ ಕಡೆಗೆ ಬರುವಂತೆ ನೀನು ಆಹ್ವಾನಿಸಿದೆ. ಯೆಹೋವನ ಕೋಪದ ದಿನದಂದು ಯಾರೂ ತಪ್ಪಿಸಿಕೊಳ್ಳಲಿಲ್ಲ. ಯಾರೂ ಉಳಿಯಲಿಲ್ಲ. ನಾನು ಸಾಕಿಸಲಹಿದವರನ್ನು ನನ್ನ ವೈರಿಯು ಸಂಹರಿಸಿದನು. ಅಧ್ಯಾಯವನ್ನು ನೋಡಿ |
ಯೆಹೋವ ದೇವರು ಹೇಳುವುದೇನೆಂದರೆ, ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಸೇವಕರನ್ನೂ, ಜನರನ್ನೂ ಈ ಪಟ್ಟಣದಲ್ಲಿ ವ್ಯಾಧಿಯಿಂದಲೂ, ಖಡ್ಗದಿಂದಲೂ, ಕ್ಷಾಮದಿಂದಲೂ ಉಳಿದವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಶತ್ರುಗಳ ಕೈಗೂ ಒಪ್ಪಿಸುವೆನು. ಅವನು ಅವರನ್ನು ಖಡ್ಗದ ಬಾಯಿಂದ ಹೊಡೆಯುವನು. ಅವರ ಮೇಲೆ ಕರುಣೆ ಇಡುವುದಿಲ್ಲ, ಕನಿಕರಿಸುವುದಿಲ್ಲ, ಅಂತಃಕರಣ ಪಡುವುದಿಲ್ಲ.’