Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:16 - ಕನ್ನಡ ಸಮಕಾಲಿಕ ಅನುವಾದ

16 ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿತೆರೆದಿದ್ದಾರೆ. “ನಾವು ಆಕೆಯನ್ನು ನುಂಗಿಬಿಟ್ಟೆವು. ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ. ಅದನ್ನು ನಾವು ಕಣ್ಣಾರೆ ಕಂಡಿದ್ದೇವೆ,” ಎಂದು ಅವರು ಕೊಚ್ಚಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ಶತ್ರುಗಳೆಲ್ಲಾ ನಿನ್ನನ್ನು ನೋಡಿ ಬಾಯಿ ವ್ಯಂಗ್ಯವಾದ ನಗುವಿನಿಂದ ಟೀಕಿಸುತ್ತಾರೆ, ಛೀಗುಟ್ಟಿ, ಹಲ್ಲು ಕಡಿಯುತ್ತಾರೆ; ಆಹಾ, ಆಕೆಯನ್ನು ನುಂಗಿಬಿಟ್ಟಿದ್ದೇವೆ, ನಾವು ನಿರೀಕ್ಷಿಸುತ್ತಿದ್ದ ದಿನವು ಇದೇ, ಈಗ ಬಂದೊದಗಿತು, ಅದನ್ನು ಕಣ್ಣಾರೆ ಕಂಡೆವು ಅಂದುಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಿನ್ನನ್ನು ನೋಡಿ ಶತ್ರುಗಳೆಲ್ಲರು ಕಟಕಟನೆ ಹಲ್ಲು ಕಡಿಯುತ್ತಾರಲ್ಲಾ ಬಾಯಿ ಕಿಸಿದು ! “ಹಾ, ಆಕೆಯನ್ನು ಕಬಳಿಸಿಬಿಟ್ಟೆವು ಈ ದಿನಕ್ಕಾಗಿಯೆ ನಾವು ಕಾದಿದ್ದೆವು ಈಗ ಅದನ್ನು ಕಣ್ಣಾರೆ ಕಂಡೆವು” ಎಂದು ಕೊಚ್ಚಿಕೊಳ್ಳುತ್ತಾರಲ್ಲಾ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ಶತ್ರುಗಳೆಲ್ಲಾ ನಿನ್ನನ್ನು ನೋಡಿ ಬಾಯಿ ಕಿಸಿದು ಛೀಗುಟ್ಟಿ ಹಲ್ಲು ಕಡಿಯುತ್ತಾರೆ; ಆಹಾ, ಆಕೆಯನ್ನು ನುಂಗಿಬಿಟ್ಟಿದ್ದೇವೆ, ನಾವು ನಿರೀಕ್ಷಿಸುತ್ತಿದ್ದ ದಿನವು ಇದೇ ಇದು, ಬಂದೊದಗಿತು, ಕಣ್ಣಾರೆ ಕಂಡೆವು ಅಂದುಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಿನ್ನ ಎಲ್ಲ ವೈರಿಗಳು ನಿನ್ನನ್ನು ನೋಡಿ ಬಾಯಿ ತೆರೆದು ಸಿಳ್ಳುಹಾಕಿ ಹಲ್ಲು ಕಡಿಯುತ್ತಾರೆ. “ನಾವು ಅವರನ್ನು ಸಂಪೂರ್ಣವಾಗಿ ನುಂಗಿದೆವು! ನಿಜವಾಗಿ ನಾವು ಈ ದಿನವನ್ನೇ ನಿರೀಕ್ಷಿಸುತ್ತಿದ್ದೆವು. ಅಂತೂ ಕೊನೆಗೆ ಇದು ನೆರವೇರುವುದನ್ನು ನಾವು ಕಂಡೆವು” ಎಂದು ಅವರು ಅನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:16
31 ತಿಳಿವುಗಳ ಹೋಲಿಕೆ  

ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.


ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.


ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.


ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ, ಆದರೆ ಅವನನ್ನು ಕಂಡು ಹಲ್ಲು ಕಡಿಯುತ್ತಾನೆ.


“ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮ್ಮನ್ನು ನುಂಗಿಬಿಟ್ಟಿದ್ದಾನೆ. ನಮ್ಮನ್ನು ಜಜ್ಜಿದ್ದಾನೆ. ನಮ್ಮನ್ನು ಬರೀ ಪಾತ್ರೆಯಾಗಿ ಮಾಡಿದ್ದಾನೆ. ಘಟಸರ್ಪದ ಹಾಗೆ ನಮ್ಮನ್ನು ನುಂಗಿಬಿಟ್ಟಿದ್ದಾನೆ. ನಮ್ಮನ್ನು ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ. ನಮ್ಮನ್ನು ಉಗುಳಿಬಿಟ್ಟಿದ್ದಾನೆ.


ಅವರು ನಮ್ಮ ಮೇಲೆ ರೋಷಗೊಂಡು ನಮ್ಮನ್ನು ನಾಶಮಾಡಿಬಿಡುತ್ತಿದ್ದರು.


ಔತಣಗಳಲ್ಲಿ ಗೇಲಿಮಾಡುವ ಕಪಟಿಗಳಂತೆ ಅವರು ನನ್ನ ಮೇಲೆ ಹಲ್ಲುಗಳನ್ನು ಕಡಿಯುತ್ತಾರೆ.


ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ.


ಈ ಮಾತುಗಳನ್ನು ಕೇಳಿದಾಗ ಅವರು ರೋಷವುಳ್ಳವರಾಗಿ, ಅವನ ಕಡೆಗೆ ನೋಡಿ, ತಮ್ಮ ಹಲ್ಲುಗಳನ್ನು ಕಡಿದರು.


ಇಸ್ರಾಯೇಲನ್ನು ಕಬಳಿಸಲಾಗಿದೆ. ಅವರು ಜನಾಂಗಗಳಲ್ಲಿ ಬೇಡವಾದ ಪಾತ್ರೆಯ ಹಾಗೆ ಇದ್ದಾರೆ.


ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ತೀರಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಯೆಹೂದವನ್ನು ಕೆಡಿಸಿದರು.


ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ,


ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ


“ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಸ್ಸೀರಿಯನ ಅರಸನು ಅವನನ್ನು ತಿಂದುಬಿಟ್ಟನು. ಕಡೆಯಲ್ಲಿ ಬಾಬಿಲೋನಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.”


ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ; ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ, ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು.


“ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಿಬಿದ್ದ ನಿನ್ನ ದೇಶವೂ ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. ನಿನ್ನನ್ನು ನುಂಗಿದವರು ದೂರವಾಗುವರು.


ದುಷ್ಟರು ಇದನ್ನು ಕಂಡು ವ್ಯಥೆ ಪಡುವರು; ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು; ದುಷ್ಟರ ಆಶೆಯು ನಾಶವಾಗುವುದು.


ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.


ದೇವರು ಪರಲೋಕದಿಂದ ಸಹಾಯ ಕಳುಹಿಸಿ, ನನ್ನನ್ನು ನಿಂದಿಸುವವರನ್ನು ದಂಡಿಸಿ, ನನ್ನನ್ನು ರಕ್ಷಿಸುವರು. ದೇವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನೂ ತಮ್ಮ ಸತ್ಯವನ್ನೂ ಕಳುಹಿಸುವರು.


“ಕೆಟ್ಟ ರೋಗವು ಅವನನ್ನು ಹಿಡಿದಿದೆ, ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,” ಎಂದು ಹೇಳಿಕೊಳ್ಳುತ್ತಾರೆ.


ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.


ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ಹಿಂಸಿಸಿ, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ಭಯಕ್ಕೂ ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.


ಆಗ ನಾನು ಈ ಆಲಯವನ್ನು ಶೀಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲಾ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.’ ”


ನಾನು ನರಳಾಡುವುದನ್ನು ಅವರು ಕೇಳಿದರೂ, ನನ್ನನ್ನು ಆದರಿಸಲು ಅಲ್ಲಿರಲಿಲ್ಲ. ನನ್ನ ಎಲ್ಲಾ ಶತ್ರುಗಳು ನನ್ನ ಕಷ್ಟದ ವಿಷಯವನ್ನು ಕೇಳಿದರು. ನೀವು ಹಾಗೆ ಮಾಡಿದಿರೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು, ಅವರು ನನ್ನ ಹಾಗೆಯೇ ಆಗುವರು.


ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವೆ. ನೀನು ಹಾಸ್ಯಕ್ಕೂ ನಿಂದೆಗೂ ಗುರಿಯಾಗುವೆ. ಅದೇ ನಿನಗೆ ಹೆಚ್ಚಾಗುವುದು.


ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ. ಅವರು, “ಯೆರೂಸಲೇಮನ್ನು ಕೆಡಿಸೋಣ. ಚೀಯೋನಿನ ನಾಶನವನ್ನು ಕಣ್ಣಾರೆ ನೋಡೋಣ,” ಎಂದು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು