Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 1:14 - ಕನ್ನಡ ಸಮಕಾಲಿಕ ಅನುವಾದ

14 ನನ್ನ ಪಾಪಗಳು ನನಗೆ ನೊಗವಾಗಿ, ನನ್ನ ಕುತ್ತಿಗೆಯ ಮೇಲೆ ಅವು ಬಂದಿವೆ. ಕರ್ತದೇವರು ನನ್ನ ಶಕ್ತಿಯನ್ನು ಕುಂದಿಸಿದ್ದಾರೆ. ಯೆಹೋವ ದೇವರು ನನ್ನನ್ನು ಅವರ ಕೈಗಳಿಗೆ ಒಪ್ಪಿಸಿ, ಅವರನ್ನು ನಾನು ಎದುರಿಸಲಾರದಂತೆ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನ ಕೈ, ನನ್ನ ದ್ರೋಹಗಳನ್ನು ನನ್ನ ಮೇಲೆ ನೊಗವು ಇರುವಂತೆ ನನ್ನನ್ನು ಬಿಗಿದಿದೆ. ಆ ದ್ರೋಹಗಳು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 “ನನ್ನ ದ್ರೋಹಗಳನ್ನು ನನಗೆ ಬಿಗಿದಿದ್ದಾನೆ ನೊಗದ ಕಣ್ಣುಗಳಂತೆ. ಅವು ಹುರಿಗೊಂಡು, ಸುತ್ತಿಕೊಂಡು ಕುತ್ತಿಗೆಗೆ, ನನ್ನ ಶಕ್ತಿಯನ್ನು ಹೀರುತ್ತಿವೆ. ಸಿಕ್ಕಿಸಿದನಲ್ಲಾ ಸ್ವಾಮಿ, ನನ್ನಿಂದ ಎದುರಿಸಲಾಗದಂಥವರ ಕೈಗೆ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆತನ ಕೈ ನನ್ನ ದ್ರೋಹಗಳನ್ನು ನೊಗದ ಕಣ್ಣಿಗಳನ್ನೋ ಎಂಬಂತೆ ನನಗೆ ಬಿಗಿದಿದೆ. ಅವು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 “ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ. ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ. ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ. ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ. ನಾನು ಎದುರಿಸಲಾಗದ ಜನರ ಕೈಗೆ ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 1:14
21 ತಿಳಿವುಗಳ ಹೋಲಿಕೆ  

ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸೊತ್ತನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು. ನೀನು ಅವರಿಗೆ ಕರುಣೆಯನ್ನು ತೋರಿಸದೆ, ವೃದ್ಧರ ಮೇಲೆಯೂ, ಬಹು ಭಾರವಾದ ನೊಗವನ್ನು ಹೊರಿಸಿದೆ.


ಆದುದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬಡತನದಲ್ಲಿ ಬಟ್ಟೆಬರೆ ಏನೂ ಇಲ್ಲದೆ, ಯೆಹೋವ ದೇವರು ನಿಮ್ಮ ಮೇಲೆ ಕಳುಹಿಸುವ ಆ ಶತ್ರುಗಳಿಗೇ ನೀವು ಸೇವಕರಾಗಬೇಕಾಗುವುದು. ಯೆಹೋವ ದೇವರು ನಿಮ್ಮನ್ನು ನಾಶಮಾಡುವವರೆಗೆ ಕಬ್ಬಿಣದ ನೊಗವನ್ನು ನಿಮ್ಮ ಮೇಲೆ ಹೊರಿಸುವರು.


ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಇತರ ಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಾಂಗಗಳೊಳಗಿಂದ ನಿಮ್ಮನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನ ಹೆಸರನ್ನು ಅಳಿಸಿಬಿಡುವೆನು. ನಾನು ನಿಮ್ಮನ್ನು ನಾಶಮಾಡುವೆನು. ಆಗ ನಾನೇ ಯೆಹೋವ ದೇವರೆಂದು ತಿಳಿಯುವಿರಿ.’ ”


ನಾನು ನಿಮ್ಮನ್ನು ಪೂರ್ವದೇಶದ ಜನರಿಗೆ ಸೊತ್ತಾಗಿ ಕೊಡುತ್ತೇನೆ, ಅವರು ತಮ್ಮ ಗುಡಾರಗಳನ್ನು ನಿನ್ನಲ್ಲಿ ನೆಲೆಗೊಳಿಸುವರು. ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿಮ್ಮ ಫಲವನ್ನು ತಿಂದು ನಿಮ್ಮ ಹಾಲನ್ನೇ ಕುಡಿಯುವರು.


ಇಸ್ರಾಯೇಲರ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಡುವೆನು. ಅವರು ಅವನಿಗೆ ಸೇವೆಮಾಡುವರು; ಕಾಡುಮೃಗಗಳನ್ನು ಸಹ ಅವನಿಗೆ ಕೊಡುವೆನು.’ ”


ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ; ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.


ಏಕೆಂದರೆ ನಾನು ಎಫ್ರಾಯೀಮಿಗೆ ಸಿಂಹದ ಹಾಗೆಯೂ, ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ನಾನೇ ಅವರನ್ನು ಸೀಳಿಬಿಟ್ಟು ಹೋಗುವೆನು. ನಾನು ಎತ್ತಿಕೊಂಡು ಹೋಗಲು, ಅವರನ್ನು ಯಾರೂ ಬಿಡಿಸಲಾರರು.


“ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಕುಂದಿಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ.


ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರವಾದ ಬೆಂಕಿ ನಿನ್ನ ಮೇಲೆ ಊದಿ ನಾಶಪಡಿಸುವುದರಲ್ಲಿ ಗಟ್ಟಿಗರಾದ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸುವೆನು.


ನಾನು ನಿಮ್ಮನ್ನು ಪಟ್ಟಣದ ಮಧ್ಯದಿಂದ ಹೊರಗೆ ತಂದು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನ್ಯಾಯತೀರ್ಪುಗಳನ್ನು ನಡೆಸುವೆನು.


ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, ಅರಮನೆಗೆ ಕರೆತಂದನು, “ಯೆಹೋವ ದೇವರಿಂದ ಮಾತು ಉಂಟೋ,” ಎಂದು ಹೇಳಿದನು. ಯೆರೆಮೀಯನು, “ಹೌದು, ಉಂಟು. ನೀನು ಬಾಬಿಲೋನಿನ ಅರಸನ ಕೈಗೆಸಿಕ್ಕಿಬೀಳುವೆ,” ಎಂದನು.


ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರಿಸುವವರೆಗೂ ಅವನು ಅಲ್ಲಿಯೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಯೆಹೋವ ದೇವರ ನುಡಿ,’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.


ಯೆಹೂದದ ಅರಸ ಚಿದ್ಕೀಯನಿಗೂ ನಾನು ಅದೇ ಮಾತುಗಳನ್ನು ಹೇಳಿದೆ: “ನೀವು ಬಾಬಿಲೋನಿನ ಅರಸನ ನೊಗಕ್ಕೆ ಹೆಗಲು ಕೊಟ್ಟು, ಅವನಿಗೂ, ಅವನ ಜನರಿಗೂ ಅಡಿಯಾಳಾಗಬೇಕು. ಆಗ ಬದುಕುವಿರಿ.


“ ‘ “ಆದರೆ ಯಾವುದೇ ರಾಷ್ಟ್ರ ಅಥವಾ ರಾಜ್ಯ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲು, ಅದರ ಅರಸನ ನೊಗಕ್ಕೆ ಹೆಗಲು ಕೊಡಲು ಒಪ್ಪದೆ ಹೋದರೆ, ಆ ರಾಷ್ಟ್ರವನ್ನು ನಾನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ದಂಡಿಸುತ್ತಾ ಬರುವೆನು. ಕೊನೆಗೆ ಆ ಅರಸನ ಕೈಯಿಂದಲೇ ಅದನ್ನು ನಿರ್ಮೂಲ ಮಾಡಿಸುವೆನು, ಇದು ಯೆಹೋವ ದೇವರಾದ ನನ್ನ ನುಡಿ.


ಇಗೋ, ನಾನು ಕಳುಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ, ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನೂ ತೆಗೆದುಕೊಂಡು, ಈ ದೇಶಕ್ಕೆ ವಿರೋಧವಾಗಿಯೂ, ಅವರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ತರಿಸಿ, ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ಭಯಕ್ಕೂ, ಪರಿಹಾಸ್ಯಕ್ಕೂ ಗುರಿಮಾಡಿ ನಿತ್ಯ ನಾಶಮಾಡುವೆನು.


ಅಸ್ಸೀರಿಯವನ್ನು ನನ್ನ ದೇಶದಲ್ಲಿ ಮುರಿದುಬಿಡುವೆನು. ನನ್ನ ಪರ್ವತಗಳ ಮೇಲೆ ಅವರನ್ನು ತುಳಿದುಬಿಡುವೆನು. ಅವನ ನೊಗವು ನನ್ನ ಜನರ ಮೇಲಿಂದ ತೊಲಗಿ, ಅವರ ಭಾರವು ಅವರ ಭುಜಗಳ ಮೇಲಿನಿಂದ ತೊಲಗುವುದು.”


“ನೀನು ಹೋಗಿ ಹನನ್ಯನಿಗೆ ಹೀಗೆ ಹೇಳು: ‘ನೀವು ಮರದ ನೊಗಗಳನ್ನು ಮುರಿದಿದ್ದೀ; ಆದರೆ ಅವಕ್ಕೆ ಬದಲಾಗಿ ನಿನ್ನ ಮೇಲೆ ಕಬ್ಬಿಣದ ನೊಗಗಳನ್ನು ಉಂಟುಮಾಡು,’ ಎಂದು ಯೆಹೋವ ದೇವರು ಹೇಳುತ್ತಾರೆ.


ಯೆಹೂದದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವ ದೇವರೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ವಶಪಡಿಸಿಕೊಳ್ಳುವನು.


ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ, “ಇಗೋ, ನಾನು ಈ ವಂಶಕ್ಕೆ ವಿರೋಧವಾಗಿ ನಾಶನವನ್ನು ಯೋಚಿಸುತ್ತೇನೆ. ಇದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ. ಅಹಂಕಾರವಾಗಿ ನಡೆಯದೆ ಇರುವಿರಿ. ಇದು ವಿಪತ್ತಿನ ಕಾಲವೇ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು