ಪ್ರಕಟನೆ 3:9 - ಕನ್ನಡ ಸಮಕಾಲಿಕ ಅನುವಾದ9 ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದಿಂದ ಕೆಲವರು ಬಂದು ನಿನ್ನ ಪಾದಕ್ಕೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳಿಯುವಂತೆಯೂ ಮಾಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಕೆಲವರನ್ನು ಸೈತಾನನ ಸಭಾಮಂದಿರದಿಂದ ಕರೆಯಿಸುವೆನು. ಅವರು ನಿನ್ನ ಪಾದಕ್ಕೆ ಬಿದ್ದು ನಮಸ್ಕರಿಸುವಂತೆಯೂ, ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ತಾವು ಯೆಹೂದ್ಯರೆಂದು ಕೊಚ್ಚಿಕೊಳ್ಳುವ ‘ಸೈತಾನನ ಕೂಟಕ್ಕೆ’ ಸೇರಿದ ಕೆಲವರಿದ್ದಾರೆ. ಆದರೆ ಅವರು ವಾಸ್ತವವಾಗಿ ಯೆಹೂದ್ಯರಲ್ಲ; ಸುಳ್ಳುಗಾರರು. ಇಗೋ ನೋಡು, ಅವರು ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ಶರಣಾಗುವಂತೆ ಮಾಡುತ್ತೇನೆ. ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನಾನು ನಿನಗೆ ಅನುಗ್ರಹಿಸುವದೇನಂದರೆ ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಸೈತಾನನ ಸಮಾಜದವರಲ್ಲಿ ಕೆಲವರು ಬಂದು ನಿನ್ನ ಪಾದಗಳ ಮುಂದೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳುಕೊಳ್ಳುವಂತೆಯೂ ಮಾಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ಆಯ್ಕ್! ತ್ಯಾ ಸೈತಾನಾಕ್ ಸಮಂದ್‍ಪಡಲ್ಲ್ಯಾ ತಾಂಡ್ಯಾಚೆ ಸರ್ಕೆ,ತೆನಿ ಜುದೆವ್ ನ್ಹಯ್ ಹೊಲ್ಯಾರ್ಬಿ ಅಪ್ನಿ ಜುದೆವ್ ಮನುನ್ ಸಾಂಗ್ತಲಿ ಲೊಕಾ ತಿ. ಮಿಯಾ ತ್ಯಾ ಲೊಕಾನಿ ಯೆವ್ನ್ ತುಮ್ಚ್ಯಾ ಪಾಂಯಾತ್ನಿ ಪಡಿಸರ್ಕೆ ಕರ್ತಾ. ತನ್ನಾ ತೆಂಕಾ ಕಳುನ್ ಯೆತಾ ಮಿಯಾ ತುಮ್ಚೊ ಪ್ರೆಮ್ ಕರ್ತಾ ಮನುನ್ . ಅಧ್ಯಾಯವನ್ನು ನೋಡಿ |