Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 3:11 - ಕನ್ನಡ ಸಮಕಾಲಿಕ ಅನುವಾದ

11 ನಾನು ಬೇಗ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ಅಪಹರಿಸದಂತೆ ನಿನಗಿರುವುದನ್ನು ಹಿಡಿದುಕೊಂಡಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಾನು ಬೇಗನೇ ಬರುತ್ತೇನೆ, ನಿನ್ನ ಕಿರೀಟವನ್ನು ಯಾರೂ ಕಸಿದುಕೊಳ್ಳದಂತೆ ನೀನು ಅವಲಂಬಿಸಿರುವುದನ್ನೇ ಆಶ್ರಯಿಸಿಕೊಂಡಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಾನು ಬೇಗನೆ ಬರುತ್ತೇನೆ. ನಿನ್ನ ಜಯಮಾಲೆಯನ್ನು ಯಾರೂ ಕಸಿದುಕೊಳ್ಳದಂತೆ ನೀನು ಅವಲಂಬಿಸಿರುವುದನ್ನೇ ಆಶ್ರಯಿಸಿಕೊಂಡಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಬೇಗನೆ ಬರುತ್ತೇನೆ; ನಿನಗಿರುವದನ್ನು ಹಿಡಿದುಕೊಂಡಿರು; ನಿನ್ನ ಜಯಮಾಲೆಯನ್ನು ಯಾರೂ ಅಪಹರಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಮಿಯಾ ಲಗ್ಗುನಾಚ್ ಯೆವ್ಲಾಲಾ. ಜೆ ಕಾಯ್ ತುಮ್ಚ್ಯಾಕ್ಡೆ ಹಾಯ್ ತೆ ಬರೆ ಕರುನ್ ಸಂಬಾಳುನ್ ಘೆವ್ನ್ ರ್‍ಹಾವಾ, ಅಸೆ ರ್‍ಹಾಲ್ಯಾರ್ ತುಮ್ಕಾ ನಾಹೊಲ್ಯಾರ್ ತುಮಿ ಜಿಕಲ್ಲ್ಯಾ ಭೊಮಾನಾ ಕೊನಾಕ್‍ಬಿ ಚೊರುನ್ ಘೆವ್ಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 3:11
19 ತಿಳಿವುಗಳ ಹೋಲಿಕೆ  

ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು.


ಆಗ ಕರ್ತ ಯೇಸು, “ಇಗೋ, ನಾನು ಬೇಗ ಬರುತ್ತೇನೆ. ಪ್ರತಿಯೊಬ್ಬರಿಗೂ ಅವರವರ ಕೆಲಸಕ್ಕೆ ತಕ್ಕಂತೆ ಕೊಡುವ ಪ್ರತಿಫಲವು ನನ್ನಲ್ಲಿದೆ.


ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಭಯಪಡಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು, ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕೆ ಇದ್ದಾನೆ. ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವವರೆಗೆ ನಂಬಿಗಸ್ತನಾಗಿರು. ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು.


ನೀವು ಹೊಂದಿರುವುದನ್ನು ನಾನು ಬರುವ ತನಕ ಭದ್ರವಾಗಿ ಹಿಡಿದುಕೊಂಡಿರಬೇಕೆಂಬ ಅಪ್ಪಣೆಯನ್ನೇ ಹೊರತು ಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲವೆಂಬುದೇ.


ಈಗ ನನಗೋಸ್ಕರ ನೀತಿಯ ಕಿರೀಟವು ಇಡಲಾಗಿದೆ. ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾದ ಕರ್ತದೇವರು ಆ ದಿನದಲ್ಲಿ ನನಗೆ ಕೊಡುವರು. ನನಗೆ ಮಾತ್ರವಲ್ಲದೆ ಅವರ ಪುನರಾಗಮನಕ್ಕಾಗಿ ಆಸಕ್ತಿಯಿಂದ ಕಾದಿರುವವರೆಲ್ಲರಿಗೂ ಕೊಡುವರು.


ಇದಲ್ಲದೆ ಯಾವನಾದರೂ ಆಟದ ಸ್ವರ್ಧೆಯಲ್ಲಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ, ಅವನು ಜಯಶಾಲಿಯ ಕಿರೀಟ ಹೊಂದುವುದಿಲ್ಲ.


ಈ ವಿಷಯಗಳಲ್ಲಿ ಸಾಕ್ಷಿ ನೀಡುವವರು, “ಹೌದು, ನಾನು ಬೇಗ ಬರುತ್ತೇನೆ!” ಎಂದು ಹೇಳುತ್ತಾರೆ. ಆಮೆನ್. ಕರ್ತ ಯೇಸುವೇ ಬಾ.


ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.


ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,


ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ.


ಆದ್ದರಿಂದ ನೀನು ಹೊಂದಿದ ಉಪದೇಶವನ್ನೂ ಕೇಳಿದ ರೀತಿಯನ್ನೂ ಜ್ಞಾಪಿಸಿಕೊಂಡು, ಅದನ್ನು ಕೈಕೊಳ್ಳುವವನಾಗಿ ಪಶ್ಚಾತ್ತಾಪಪಡು, ನೀನು ಎಚ್ಚರವಾಗಿರದಿದ್ದರೆ, ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಎಂದು ನಿನಗೆ ಯಾವ ರೀತಿಯಲ್ಲಿಯೂ ತಿಳಿಯದು.


ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.


ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು, ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ. ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನನ್ನು ಕೊಲ್ಲಲಾದ ದಿನಗಳಲ್ಲಿಯೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ಅಲ್ಲಗಳೆಯಲಿಲ್ಲ.


ಆಗ, “ಇಗೋ, ಬೇಗನೆ ಬರುತ್ತೇನೆ! ಈ ಗ್ರಂಥದ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವರು ಧನ್ಯರು,” ಎಂದು ಕರ್ತ ಆಗಿರುವ ಯೇಸು ಹೇಳಿದರು.


ಯೆಹೋವ ದೇವರ ಮಹಾದಿವಸವು ಸಮೀಪವಾಗಿದೆ, ಬಹು ತ್ವರೆಯಾಗಿ ಬರುತ್ತಿದೆ. ಕೇಳಿರಿ. ಯೆಹೋವ ದೇವರ ದಿನದಂದು ಕೂಗು ಕಹಿಯಾಗಿರುವುದು. ಶೂರನು ಅಲ್ಲಿ ಬೊಬ್ಬೆ ಹಾಕುವನು.


ಪ್ರಿಯರೇ, ನೀವು ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿರಿ. ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾರೆ.


ನಿಮ್ಮ ಸಹನೆಯು ಎಲ್ಲರಿಗೂ ತಿಳಿದಿರಲಿ. ಕರ್ತದೇವರ ಬರುವಿಕೆಯು ಹತ್ತಿರವಾಗಿದೆ.


“ಇಗೋ, ನಾನು ಕಳ್ಳನು ಬರುವಂತೆ ಬರುತ್ತೇನೆ. ಬೆತ್ತಲೆಯಾಗಿ ತಿರುಗಾಡಿ, ಜನರಿಂದ ಅವಮಾನಗೊಳ್ಳದಂತೆ ಎಚ್ಚರವಾಗಿದ್ದು ತನ್ನ ವಸ್ತ್ರವನ್ನು ಯಾವನು ಕಾಪಾಡಿಕೊಳ್ಳುತ್ತಾನೋ ಅವನು ಧನ್ಯನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು