ಪ್ರಕಟನೆ 21:27 - ಕನ್ನಡ ಸಮಕಾಲಿಕ ಅನುವಾದ27 ಅಶುದ್ಧವಾದದ್ದು ಅದರಲ್ಲಿ ಸೇರುವುದಿಲ್ಲ. ಅಸಹ್ಯವಾದದ್ದನ್ನೂ ವಂಚಕವಾದದ್ದನ್ನೂ ನಡೆಸುವವನು ಅದರಲ್ಲಿ ಪ್ರವೇಶಿಸಲಾರನು. ಕುರಿಮರಿಯ ಜೀವ ಪುಸ್ತಕದಲ್ಲಿ ಯಾರ ಯಾರ ಹೆಸರುಗಳು ಬರೆದಿವೆಯೋ ಅವರು ಮಾತ್ರ ಸೇರುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಅದರಲ್ಲಿ ಅಶುದ್ಧವಾದದ್ದೊಂದು ಸೇರುವುದಿಲ್ಲ. ಅವಮಾನವಾದದ್ದಾಗಲಿ ವಂಚನೆಯಾಗಲಿ ಮಾಡುವವನು ಅದರೊಳಗೆ ಪ್ರವೇಶಿಸಲಾರನು. ಆದರೆ ಯಜ್ಞದ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆಯಲ್ಪಟ್ಟಿವೆಯೋ ಅವರು ಮಾತ್ರ ಸೇರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಆದರೆ ಅಶುದ್ಧವಾದುದು ಯಾವುದೂ ಅದನ್ನು ಸೇರಲಾರದು. ಅಂತೆಯೇ, ಹೇಯ ಕೃತ್ಯಗಳನ್ನೆಸಗುವವನೂ ಅಸತ್ಯವನ್ನು ಆಡುವವನೂ ಅದನ್ನು ಸೇರಲಾರನು. ಯಜ್ಞದ ಕುರಿಮರಿಯ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳು ಲಿಖಿತವಾಗಿವೆಯೋ ಅಂಥವರು ಮಾತ್ರ ಅದನ್ನು ಪ್ರವೇಶಿಸಬಲ್ಲರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಅದರಲ್ಲಿ ಹೊಲೆಯಾದದ್ದೊಂದೂ ಸೇರುವದಿಲ್ಲ, ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಸೇರುವದಿಲ್ಲ; ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿಯಲ್ಲಿ ಯಾರಾರ ಹೆಸರುಗಳು ಬರೆದವೆಯೋ ಅವರು ಮಾತ್ರ ಸೇರುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್27 ಖರೆ ಪವಿತ್ರ್ ನಸಲ್ಲೆ ಕಾಯ್ಬಿ, ನಾಹೊಲ್ಯಾರ್ ಅಬ್ರುಗೆಡಿ ಕಾಮಾ ಕರಲ್ಲೆ ಹೊಂವ್ದಿತ್, ಝುಟೆ ಬೊಲ್ತಲೆ ಹೊಂವ್ದಿತ್, ಶಾರಾತ್ ಭುತ್ತುರ್ ಗುಸಿನ್ಯಾತ್. ಖಾಲಿ ಬೊಕ್ಡಾಚ್ಯಾ ಝಿತ್ತ್ಯಾಂಚ್ಯಾ ಪುಸ್ತಕಾತ್ ಕೊನಾಚಿ ನಾವಾ ಲಿವಲ್ಲಿ ಹಾತ್, ತೆನಿ ಎವ್ಡೆಚ್ ಶಾರಾತ್ ಭುತ್ತುರ್ ಗುಸ್ತ್ಯಾತ್. ಅಧ್ಯಾಯವನ್ನು ನೋಡಿ |