Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 2:7 - ಕನ್ನಡ ಸಮಕಾಲಿಕ ಅನುವಾದ

7 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು, ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ದೇವರ ಪರಲೋಕದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನಲು ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. ಯಾರು ಜಯಹೊಂದುತ್ತಾನೋ ಅಂಥವನಿಗೆ ದೇವರ ಪರಂಧಾಮದಲ್ಲಿ ಇರುವ ಜೀವವೃಕ್ಷದ ಫಲವನ್ನು ಸವಿಯುವ ಸೌಭಾಗ್ಯವನ್ನು ನಾನು ಅನುಗ್ರಹಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನ್ತಲೆ ಆಯ್ಕ್! ಜೊ ಕೊನ್ ಮೊಟ್ಯಾ ಮಾಪಾನ್ ಜಿಕ್ತಾ ತೆಕಾ ಮಿಯಾ ದೆವಾಚ್ಯಾ ಮಳ್ಯಾತ್ಲ್ಯಾ ಜಿವ್‍ ದಿತಲ್ಯಾ ಝಾಡಾಚೆ ಹನ್ನ್ ಖಾತಲೊ ಹಕ್ಕ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 2:7
36 ತಿಳಿವುಗಳ ಹೋಲಿಕೆ  

ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ಬಚ್ಚಿಟ್ಟಿರುವ ಮನ್ನಾವನ್ನು ಕೊಡುವೆನು. ಇದಲ್ಲದೆ ಅವರಿಗೆ ಬಿಳಿಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು. ಆ ಹೆಸರನ್ನು ಹೊಂದಿದವನಿಗೇ ಹೊರತು, ಅದು ಮತ್ತಾರಿಗೂ ತಿಳಿಯದು.


ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಜಯ ಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.


ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.


ಕಿವಿಯುಳ್ಳವನು ಕೇಳಲಿ.


ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.


ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.”


ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ.


“ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರು ಧನ್ಯರು. ಹೀಗೆ ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ದ್ವಾರಗಳ ಮೂಲಕ ಆ ಪಟ್ಟಣದೊಳಕ್ಕೆ ಸೇರುವರು.


ಜಯಹೊಂದುವವರು ಇವುಗಳಿಗೆ ಬಾಧ್ಯನಾಗುವರು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಮಕ್ಕಳಾಗಿರುವರು.


ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.


ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು.


ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.


ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ.


ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು.


ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ. ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ.


“ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.


ದೇವರ ತೋಟವಾದ ಏದೆನಿನಲ್ಲಿ ನೀನಿದ್ದೆ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು, ಸ್ಪಟಿಕ ಚಿನ್ನ ಈ ಅಮೂಲ್ಯವಾದವುಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.


ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ; ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.


ನಾನು ಪರದೈಸಕ್ಕೆ ಒಯ್ಯಲಾದೆನು. ಅಲ್ಲಿ ನಾನು ವಿವರಿಸಲು ಅಸಾಧ್ಯವಾದದ್ದೂ ವರ್ಣಿಸಲು ಅಪ್ಪಣೆಯಿಲ್ಲದ್ದೂ ಆಗಿರುವ ವಿಷಯಗಳನ್ನು ಕೇಳಿದೆನು.


ದೇವರ ತೋಟದ ದೇವದಾರುಗಳು ಅದನ್ನು ಮರೆಮಾಡಲಿಲ್ಲ. ತುರಾಯಿ ಮರಗಳು ಅದರ ಕೊಂಬೆಗಳಿಗೆ ಸಮವಾಗಲಿಲ್ಲ. ಆಲದ ಮರಗಳು ಅದರ ರೆಂಬೆಗಳಷ್ಟೂ ಇಲ್ಲ. ಆ ದೇವರ ತೋಟದ ಯಾವುದೇ ಮರವು ಇದರ ಸೌಂದರ್ಯಕ್ಕೆ ಸಮವಾಗಿಲ್ಲ.


ಹಿತವಾದ ನಾಲಿಗೆಯು ಜೀವವೃಕ್ಷ. ಆದರೆ ವಕ್ರ ನಾಲಿಗೆಯು ಆತ್ಮಚೈತನ್ಯವನ್ನು ನಾಶಮಾಡುವುದು.


ನನಗೆ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಒಂದು ಕಾಣಿಸಿತು. ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಹೆಸರಿನ ಸಂಖ್ಯೆಯ ಮೇಲೆಯೂ ಜಯಹೊಂದಿದವರು ದೇವರ ಕಿನ್ನರಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಗಾಜಿನ ಸಮುದ್ರದ ಮೇಲೆ ನಿಂತುಕೊಂಡು,


ಪರಲೋಕದಿಂದ ಒಂದು ಧ್ವನಿಯು ನನಗೆ, “ಇಂದಿನಿಂದ ಕರ್ತರಲ್ಲಿ ವಿಶ್ವಾಸವುಳ್ಳವರು ಧನ್ಯರು ಎಂಬುದಾಗಿ ಬರೆ!” ಎಂದು ಹೇಳಿತು. ಅದಕ್ಕೆ ಪವಿತ್ರಾತ್ಮ ದೇವರು, “ಹೌದು, ಅವರ ಪ್ರಯಾಸಗಳು ತೀರಿದವು ಅವರಿಗೆ ವಿಶ್ರಾಂತಿಯಾಗುವುದು, ಅವರ ಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ!” ಎಂದು ಹೇಳುತ್ತಾರೆ.


ಜ್ಞಾನವನ್ನು ಹಿಡಿದುಕೊಳ್ಳುವವರಿಗೆ ಜ್ಞಾನವು ಜೀವವೃಕ್ಷವಾಗಿದೆ; ಅದನ್ನು ಭದ್ರವಾಗಿ ಇಟ್ಟುಕೊಳ್ಳುವವರು ಧನ್ಯರು.


ಅನಂತರ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ,” ಎಂದು ಹೇಳಿದರು.


ಉಳಿದ ಬೀಜಗಳು ಒಳ್ಳೆಯ ನೆಲದ ಮೇಲೆ ಬಿದ್ದವು. ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು.” ಇದನ್ನು ಯೇಸು ಹೇಳಿ, “ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ,” ಎಂದು ಒತ್ತಿ ಹೇಳಿದರು.


ತಂದೆಗಳೇ, ಆದಿಯಿಂದ ಇರುವ ದೇವರನ್ನು ನೀವು ಬಲ್ಲವರಾಗಿರುವುದರಿಂದ ನಾನು ನಿಮಗೆ ಬರೆಯುತ್ತೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವುದರಿಂದ ನಿಮಗೆ ಬರೆಯುತ್ತೇನೆ.


ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ,” ಎಂದು ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು