Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 2:27 - ಕನ್ನಡ ಸಮಕಾಲಿಕ ಅನುವಾದ

27 ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ, ‘ಅವರು ಕಬ್ಬಿಣದ ಕೋಲಿನಿಂದ ರಾಷ್ಟ್ರಗಳನ್ನು ಆಳುವರು. ಮಣ್ಣಿನ ಮಡಿಕೆಗಳು ಒಡೆಯುವಂತೆ ಬಲ ಮುರಿದು ಹೋಗುವುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು; ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

27 ಅನಿ ತೊ ಎಕ್ ಲೊಂಗ್ಟಾಚ್ಯಾ ಸೊಳ್ಳಿನ್ ತೆಂಚೆ ವರ್ತಿ ಅಧಿಕಾರ್ ಚಾಲ್ವುತಾ. ಎಕ್ ಮಾಟಿನ್ ಕರಲ್ಲ್ಯಾ ಗಾಡ್ಗ್ಯಾ ಸರ್ಕೆ ತೊ ತುಕ್ಡೆತುಕ್ಡೆ ಕರ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 2:27
12 ತಿಳಿವುಗಳ ಹೋಲಿಕೆ  

ಆಕೆ, “ರಾಷ್ಟ್ರಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ” ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ದೇವರ ಬಳಿಗೂ ಅವರ ಸಿಂಹಾಸನದ ಬಳಿಗೂ ಎತ್ತಲಾಯಿತು.


ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.” ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ.


ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲಿ, ಬಾವಿಯಿಂದ ನೀರನ್ನು ತೆಗೆಯುವುದಕ್ಕಾಗಲಿ, ಬೋಕಿಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.”


“ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.


“ತಂದೆಯೇ, ನೀವು ನನಗೆ ಕೊಟ್ಟವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು ಜಗದುತ್ಪತ್ತಿಗೆ ಮುಂಚೆ ನೀವು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ಕಾಣಬೇಕೆಂದು ನಾನು ಅಪೇಕ್ಷಿಸುತ್ತೇನೆ.


ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ.


ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾನೆ: ಯಾವ ಪ್ರಕಾರ ಒಬ್ಬನು ಕುಂಬಾರನ ಮಡಕೆಯನ್ನು ಅದು ತಿರುಗಿ ಒಂದುಗೂಡದ ಹಾಗೆ ಒಡೆಯುತ್ತಾನೋ, ಅದೇ ಪ್ರಕಾರ ನಾನು ಈ ಜನರನ್ನೂ, ಈ ಪಟ್ಟಣವನ್ನೂ ಒಡೆದುಬಿಡುವೆನು. ಆಗ ಹೂಳಿಡುವುದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಳಿಡುವರು.


ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. ಮರಣವೇ ಅವರ ಕುರುಬ; ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು ಅವರ ರೂಪ ಕ್ಷಯವಾಗುವುದು. ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು.


ಪುರಾತನ ಮನುಷ್ಯನು ಬಂದು ಮಹೋನ್ನತನ ಪರಿಶುದ್ಧರಿಗೆ ನ್ಯಾಯತೀರ್ಪು ಕೊಡುವವರೆಗೂ, ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಳ್ಳುವ ಕಾಲದವರೆಗೂ ಅವರ ಮೇಲೆ ಜಯವನ್ನು ಹೊಂದಿತು.


ಆದರೆ ಆ ಮಹೋನ್ನತನ ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಂಡು, ಅದನ್ನು ಎಂದಿಗೂ ಎಂದೆಂದಿಗೂ ವಶಪಡಿಸಿಕೊಳ್ಳುವರು.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು