ಪ್ರಕಟನೆ 18:20 - ಕನ್ನಡ ಸಮಕಾಲಿಕ ಅನುವಾದ20 “ಪರಲೋಕವೇ ಸಂಭ್ರಮಿಸಿರಿ, ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ ಆಕೆಯ ನಿಮಿತ್ತ ಹರ್ಷಗೊಳ್ಳಿರಿ! ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ ದೇವರು ಆಕೆಗೆ ತೀರ್ಪುಮಾಡಿದ್ದಾರೆ!” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಪರಲೋಕವೇ, ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 “ಸ್ವರ್ಗನಿವಾಸಿಗಳೇ, ಸಂಭ್ರಮಿಸಿ, ದೇವಜನರೇ, ಪ್ರೇಷಿತರೇ, ಪ್ರವಾದಿಗಳೇ, ಹರ್ಷಿಸಿ ! ದಂಡಿಸಿರುವರು ಅವಳನು ದೇವರೇ ಸರಿಯಾಗಿ ನಿಮಗಾಕೆ ಎಸಗಿದಕ್ಕೆ ಪ್ರತಿಯಾಗಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಪರಲೋಕವೇ, ಆನಂದಪಡು; ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ, ಇವಳು ನಿಮಗೆ ಅನ್ಯಾಯಮಾಡಿದ್ದಕ್ಕಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದರಿಂದ ಆನಂದಪಡಿರಿ ಎಂದು ಆ ಶಬ್ದ ಹೇಳಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಪರಲೋಕವೇ, ಇದರಿಂದ ನೀನೂ ಸಂತೋಷಪಡು! ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ! ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್20 ಸರ್‍ಗಾ ತಿಚ್ಯಾ ನಾಸಾಸಾಟ್ನಿ ಖುಶಿ ಹೊ! ದೆವಾಚ್ಯಾ ಲೊಕಾನು, ಅಪೊಸ್ತಲಾನು ಅನಿ ಪ್ರವಾದ್ಯಾನು, ಖುಶಿ ಹೊವಾ! ಕಶ್ಯಾಕ್ ಮಟ್ಲ್ಯಾರ್ ತೆನಿ ತುಮ್ಕಾ ಕರಲ್ಲ್ಯಾ ಸಗ್ಳ್ಯಾ ಕಾಮಾಂಚ್ಯಾ ತಕ್ ದೆವಾನ್ ತಿಕಾ ಶಿಕ್ಷಾ ದಿಲ್ಯಾನಾಯ್! ಅಧ್ಯಾಯವನ್ನು ನೋಡಿ |