Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 17:14 - ಕನ್ನಡ ಸಮಕಾಲಿಕ ಅನುವಾದ

14 ಅವರು ಕುರಿಮರಿಯಾದವರ ಮೇಲೆ ಯುದ್ಧಮಾಡುವರು. ಆದರೆ ಕುರಿಮರಿಯಾದವರು ಕರ್ತರ ಕರ್ತರೂ ರಾಜಾಧಿರಾಜರೂ ಆಗಿರುವುದರಿಂದ ಅವರನ್ನು ಜಯಿಸುವರು. ಅವರೊಂದಿಗಿದ್ದವರು ದೇವರಿಂದ ಕರೆಹೊಂದಿದವರೂ ಆಯ್ದುಕೊಂಡವರೂ ನಂಬಿಗಸ್ತರೂ ಆಗಿರುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವರು ಯಜ್ಞದ ಕುರಿಯಾದಾತನ ಮೇಲೆ ಯುದ್ಧಮಾಡುವರು, ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವದರಿಂದ ಅವರನ್ನು ಜಯಿಸುವನು; ಮತ್ತು ದೇವರು ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ ಆಗಿರುವ ಆತನ ಕಡೆಯವರು ಆ ಜಯದಲ್ಲಿ ಪಾಲುಗಾರರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

14 ತೆನಿ ಬೊಕ್ಡಾಚ್ಯಾ ವಿರೊದ್ ಕುಸ್ತಿ ಧರ್‍ತ್ಯಾತ್; ಖರೆ ಬೊಕ್ಡು ಅಪ್ನಾಚ್ಯಾ ಬಲ್ವಲ್ಲ್ಯಾ, ಎಚುನ್ ಕಾಡಲ್ಲ್ಯಾ ಅನಿ ವಿಶ್ವಾಸಾಚ್ಯಾ ವಾಂಗ್ಡಿಯಾಂಚ್ಯಾ ವಾಂಗ್ಡಾ ತೆಂಕಾ ಹಾರ್‍ವುನ್ ಸೊಡ್ತಾ, ಕಶ್ಯಾಕ್ ಮಟ್ಲ್ಯಾರ್ ತೊಚ್ ಧನಿಯಾಚೊ ಧನಿ ಅನಿ ರಾಜಾಂಚೊ ರಾಜಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 17:14
41 ತಿಳಿವುಗಳ ಹೋಲಿಕೆ  

ಆದರೆ ದೇವರು ಯಾರನ್ನು ಮುಂದಾಗಿ ನೇಮಿಸಿದರೋ, ಅವರನ್ನು ಕರೆದರು; ಯಾರನ್ನು ಕರೆದರೋ, ಅವರನ್ನು ನೀತಿವಂತರೆಂದು ನಿರ್ಣಯಿಸಿದರು; ಯಾರನ್ನು ನೀತಿವಂತರೆಂದು ನಿರ್ಣಯಿಸಿದರೋ ಅವರನ್ನು ಮಹಿಮೆಪಡಿಸಿದರು.


ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು.


“ಹೀಗೆಯೇ ಆಹ್ವಾನಿತರಾದವರು ಅನೇಕರು, ಆದರೆ ಆಯ್ಕೆಯಾದವರು ಕೆಲವರು ಮಾತ್ರ,” ಎಂದನು.


ನಾನು ಜಯಹೊಂದಿ, ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆ, ಜಯಶಾಲಿಯಾದವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು.


ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.


ಅರಸನು ದಾನಿಯೇಲನಿಗೆ ಉತ್ತರವಾಗಿ, “ನೀನು ಈ ರಹಸ್ಯವನ್ನು ಪ್ರಕಟಮಾಡಲು ಸಮರ್ಥನಾದ್ದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ, ಅರಸುಗಳ ಒಡೆಯರಾಗಿಯೂ, ರಹಸ್ಯಗಳನ್ನು ಪ್ರಕಟ ಮಾಡುವವರಾಗಿಯೂ ಇದ್ದಾರೆ,” ಎಂದನು.


ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ದೇವರುಗಳ ದೇವರು, ಕರ್ತರ ಕರ್ತರು, ದೇವಾಧಿದೇವರು, ಪರಾಕ್ರಮಿಯೂ, ಭಯಭಕ್ತಿಗೆ ಪಾತ್ರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ.


ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಭಯಪಡಬೇಡ. ಇಗೋ, ನಿಮ್ಮನ್ನು ಪರೀಕ್ಷಿಸಲು, ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕೆ ಇದ್ದಾನೆ. ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯುವವರೆಗೆ ನಂಬಿಗಸ್ತನಾಗಿರು. ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು.


ಅವು ಸೂಚಕಕಾರ್ಯಗಳನ್ನು ನಡೆಸುವ ದೆವ್ವಗಳ ಆತ್ಮಗಳಾಗಿದ್ದು, ಭೂಲೋಕದ ರಾಜರುಗಳನ್ನು ಸರ್ವಶಕ್ತರಾದ ದೇವರ ಮಹಾದಿನದ ಯುದ್ಧಕ್ಕಾಗಿ ಕೂಡಿಸುವುದಕ್ಕಾಗಿ ಹೊರಟವು.


ಆಮೇಲೆ ಕ್ರಿಸ್ತನು ಎಲ್ಲಾ ಆಧಿಪತ್ಯವನ್ನೂ ಎಲ್ಲಾ ಅಧಿಕಾರವನ್ನೂ ಎಲ್ಲಾ ಶಕ್ತಿಯನ್ನೂ ತೆಗೆದುಹಾಕಿ, ರಾಜ್ಯವನ್ನು ತಂದೆ ದೇವರಿಗೆ ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.


ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ.


ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ.


ಅವರು ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಗೆಲ್ಲುವುದಿಲ್ಲ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಇದು ಯೆಹೋವ ದೇವರ ನುಡಿ.


ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ, ಪಾತಾಳದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ, ಇವರನ್ನು ಜಯಿಸಿ ಕೊಲ್ಲುವುದು.


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡ ನಾಯಕನನ್ನು ಮೆಚ್ಚಿಸಬೇಕೆಂದು ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳಲಾರನು.


“ಆ ಅರಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವರು. ಅದು ಬೇರೆ ಜನರಿಗೆ ಸೇರಿ ಹೋಗುವುದಿಲ್ಲ. ಅದು ಆ ರಾಜ್ಯಗಳನ್ನೆಲ್ಲಾ ಧ್ವಂಸಮಾಡಿ, ಮುಗಿಸಿ, ತಾನು ಎಂದೆಂದಿಗೂ ನಿಲ್ಲುವುದು.


ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿದ್ದಾರೆ; ಅವರು ತಮ್ಮ ತೀರ್ಪಿನ ದಿನದಲ್ಲಿ ಅರಸರನ್ನು ದಂಡಿಸುವರು.


ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.


“ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.


ಏಕೆಂದರೆ ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, “ನಿಮ್ಮನ್ನು ಸುಲಿದುಕೊಂಡ ಜನಾಂಗಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ. ಏಕೆಂದರೆ ನಿಮ್ಮನ್ನು ಮುಟ್ಟುವವನು ಯೆಹೋವ ದೇವರ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.


ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು; ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”


ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧ ಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು.


ಏಕೆಂದರೆ ನಾನು ಉತ್ತರದಲ್ಲಿರುವ ರಾಜ್ಯಗಳ ಕುಲಗಳನ್ನೆಲ್ಲಾ ಕರೆಯುತ್ತೇನೆ. “ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ, ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.


ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ.


ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು, ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ. ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನನ್ನು ಕೊಲ್ಲಲಾದ ದಿನಗಳಲ್ಲಿಯೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ಅಲ್ಲಗಳೆಯಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು