Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 15:4 - ಕನ್ನಡ ಸಮಕಾಲಿಕ ಅನುವಾದ

4 ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು? ಏಕೆಂದರೆ ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ ಎಲ್ಲಾ ರಾಷ್ಟ್ರಗಳವರು ಬಂದು, ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕರ್ತನೇ, ನಿನಗೆ ಭಯಪಡದವರು ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ? ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು ನಿನ್ನನ್ನು ಆರಾಧಿಸುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಹೇ ಪ್ರಭೂ, ನಿನಗಂಜದವರಾರು? ನಿನ್ನ ನಾಮಸ್ತುತಿ ಮಾಡದವರಾರು? ಪರಮಪವಿತ್ರ ನೀನಲ್ಲದಿನ್ಯಾರು ಪ್ರಕಟವಾಗಿವೆ ನಿನ್ನ ನೀತಿಯುತ ಕಾರ್ಯಗಳು ಬಂದೆರಗಲಿವೆ ನಿನಗೆ ಸಕಲ ಜನಾಂಗಗಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ; ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ. ನೀನು ಮಾತ್ರ ಪರಿಶುದ್ಧನಾದವನು. ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಸರ್ವೆಸ್ವರಾ ತುಕಾ ಭಿಂಯ್ ನಸಲ್ಲೊ ಕೊನ್ ಹಾಯ್?, ತುಜ್ಯಾ ಮೊಟ್ಯಾಪಾನಾಚ್ಯಾ ವಿಶಯಾತ್ ಸಾಂಗಿನಸ್ತಾನಾ ಕೊನಾಕ್ ರ್‍ಹಾವ್ಕ್ ಹೊತಾ?, ತಿಯಾ ಎಕ್ಲೊಚ್ ಪವಿತ್ರ್. ಸಗ್ಳಿ ದೆಶಾ ಯೆತ್ಯಾತ್ ಅನಿ ತುಜೆ ಆರಾದನ್ ಕರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತುಜಿ ನ್ಯಾಯ್ ಪಾನಾಚಿ ಕಾಮಾ ಸಗ್ಳ್ಯಾಕ್ನಿ ದಿಸುನ್ ಯೆಲ್ಯಾತ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 15:4
44 ತಿಳಿವುಗಳ ಹೋಲಿಕೆ  

ಯೆಹೋವ ದೇವರೇ, ನೀವು ಉಂಟುಮಾಡಿದ ಜನಾಂಗದವರೆಲ್ಲರೂ ಬಂದು ನಿಮ್ಮ ಮುಂದೆ ಅಡ್ಡಬಿದ್ದು, ನಿಮ್ಮ ಹೆಸರಿಗೆ ಮಹಿಮೆ ಸಲ್ಲಿಸುವರು.


ಸೂರ್ಯೋದಯವು ಮೊದಲುಗೊಂಡು ಅಸ್ತಮಾನದವರೆಗೂ, ನನ್ನ ಹೆಸರು ಎಲ್ಲಾ ಜನಾಂಗಗಳಲ್ಲಿ ಘನವಾಗಿರುವುದು. ಪ್ರತಿಯೊಂದು ಸ್ಥಳದಲ್ಲಿಯೂ ನನ್ನ ಹೆಸರಿಗೆ ಧೂಪವೂ, ಶುದ್ಧ ಕಾಣಿಕೆಯೂ ಅರ್ಪಿಸಲಾಗುವುದು. ಏಕೆಂದರೆ ನನ್ನ ಹೆಸರು ಇತರ ಜನಾಂಗಗಳಲ್ಲಿ ಘನವಾಗಿರುವುದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಓ ಜನಾಂಗಗಳ ಅರಸರಾದವರೇ, ನಿಮಗೆ ಭಯಪಡದವನ್ಯಾರು? ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು. ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ, ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ ನಿಮ್ಮ ಹಾಗೆ ಯಾರೂ ಇಲ್ಲ.


ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.


ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.”


ಅವನು, “ನೀವು ದೇವರಿಗೆ ಭಯಪಟ್ಟು ಅವರಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಅವರು ನ್ಯಾಯತೀರ್ಪು ಮಾಡುವ ಸಮಯ ಬಂದಿದೆ. ಭೂಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದ ದೇವರನ್ನೇ ಆರಾಧಿಸಿರಿ!” ಎಂದು ಮಹಾಧ್ವನಿಯಿಂದ ಹೇಳಿದನು.


ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗಗಳಲ್ಲಿ ಉಳಿದವರೆಲ್ಲಾ ವರ್ಷ ವರ್ಷಕ್ಕೆ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೂ ಹೋಗುವರು.


ಬಲಿಷ್ಠವಾದ ಜನಾಂಗವು ನಿಮ್ಮನ್ನು ಘನಪಡಿಸುವರು, ಭಯಂಕರವಾದ ಜನರ ಪಟ್ಟಣವು ನಿಮಗೆ ಅಂಜುವುದು.


ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ. ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ. ಅದು ಹಿಂದಿರುಗದು. ಪ್ರತಿಯೊಬ್ಬರು ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ಪ್ರತಿಜ್ಞೆ ಮಾಡುವುದು.


ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು: “ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು, ಅವರು ಸರ್ವಶಕ್ತರು,’ ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”


ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು,” ಎಂದು ಪವಿತ್ರ ವೇದದಲ್ಲಿ ಬರೆದಿದೆ.


“ಆ ದಿವಸದಲ್ಲಿ ಅನೇಕ ಜನಾಂಗಗಳು ಯೆಹೋವ ದೇವರನ್ನು ಅಂಟಿಕೊಂಡು ನನ್ನ ಜನರಾಗುವರು, ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆಂದು ತಿಳಿದುಕೊಳ್ಳುವೆ.


ಆಗ ಬಲಿಪೀಠವು ಹೀಗೆ ಮಾತನಾಡುವುದನ್ನು ಕೇಳಿದೆನು: “ಕರ್ತಾ, ಸರ್ವಶಕ್ತರಾದ ದೇವರೇ, ನಿಮ್ಮ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ.”


ಏಕೆಂದರೆ ದೇವರ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ. ಏಕೆಂದರೆ ತನ್ನ ಅನೈತಿಕತೆಯಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ದೇವರು ನ್ಯಾಯತೀರಿಸಿ, ಆಕೆಯು ದೇವರ ದಾಸರನ್ನು ಹಿಂಸಿಸಿ, ಚೆಲ್ಲಿಸಿದ ರಕ್ತಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾರೆ.”


ರಾತ್ರಿಯಲ್ಲಿ ನಿಮ್ಮನ್ನು ಮನಃಪೂರ್ವಕವಾಗಿ ಬಯಸಿದ್ದೇನೆ. ನನ್ನಲ್ಲಿರುವ ನನ್ನ ಆತ್ಮದೊಂದಿಗೆ ನಿಮ್ಮನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ. ಏಕೆಂದರೆ ಭೂಮಿಗೆ ನಿಮ್ಮ ನ್ಯಾಯತೀರ್ಪುಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.


ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.


ಇದಲ್ಲದೆ ಯೆಹೂದ್ಯರಲ್ಲದವರು ದೇವರ ಕರುಣೆಗಾಗಿ ದೇವರನ್ನು ಮಹಿಮೆ ಪಡಿಸುವಂತೆ ಹೀಗೆ ಮಾಡಿದರು. ಇದು ಪವಿತ್ರ ವೇದದಲ್ಲಿ ಹೀಗೆ ಬರೆದದ್ದನ್ನು ನೆರವೇರಿಸಿತು: “ಆದ್ದರಿಂದ ಯೆಹೂದ್ಯರಲ್ಲದವರ ನಡುವೆ ನಾನು ನಿನ್ನನ್ನು ಸ್ತುತಿಸುವೆನು, ನಾನು ನಿನ್ನ ನಾಮವನ್ನು ಸ್ತುತಿಸಿ ಹಾಡುವೆನು.”


ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.


ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರ ಯೆಹೋವ ದೇವರು ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು. ಭೂಮಂಡಲವೆಲ್ಲಾ ಅವರ ಮಹಿಮೆಯಿಂದ ತುಂಬಿದೆ,” ಎಂದು ಕೂಗಿ ಹೇಳಿದನು.


ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ; ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.


ಅವರು ಮಹಾಶಬ್ದದಿಂದ, “ಒಡೆಯನೇ, ಪವಿತ್ರನೇ, ಸತ್ಯವಂತನೇ ನಮ್ಮ ರಕ್ತ ಸುರಿಸಿದ ಲೋಕನಿವಾಸಿಗಳಿಗೆ ತೀರ್ಪನ್ನೂ ಪ್ರತಿದಂಡನೆಯನ್ನೂ ಮಾಡಲು ಇನ್ನೆಷ್ಟು ಸಮಯ ಬೇಕು?” ಎಂದು ಕೂಗಿದರು.


ಯೆಹೋವ ದೇವರೇ, ನೀವು ಅನಾದಿಕಾಲದಿಂದ ಬಂದವರಲ್ಲವೇ? ನನ್ನ ದೇವರೇ, ನನ್ನ ಪರಿಶುದ್ಧರೇ, ನೀನು ಎಂದಿಗೂ ಸಾಯುವುದಿಲ್ಲ. ಯೆಹೋವ ದೇವರೇ, ನ್ಯಾಯತೀರ್ಪನ್ನು ಜಾರಿಗೊಳಿಸಲು ಅವರನ್ನು ನೇಮಿಸಿದ್ದೀರಿ. ನನ್ನ ಬಂಡೆಯೇ, ನೀವು ಶಿಕ್ಷಿಸಲು ಅವರನ್ನು ನೇಮಕ ಮಾಡಿದ್ದೀರಿ.


“ಫಿಲದೆಲ್ಫಿಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ: ಪರಿಶುದ್ಧರೂ ಸತ್ಯವಂತರೂ ದಾವೀದನ ಬೀಗದ ಕೈಯುಳ್ಳವರೂ ಯಾರೂ ಮುಚ್ಚದಂತೆ ತೆರೆಯುವವರೂ ಯಾರೂ ತೆರೆಯದಂತೆ ಮುಚ್ಚುವವರೂ ಆಗಿರುವವರು ಹೇಳುವುದೇನೆಂದರೆ:


ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.


ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ದೇವರ ಪರಿಶುದ್ಧ ಪರ್ವತದಲ್ಲಿ ಆರಾಧಿಸಿರಿ. ನಮ್ಮ ದೇವರಾದ ಯೆಹೋವ ದೇವರು ಪರಿಶುದ್ಧರು.


ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ.


“ಯೆಹೋವ ದೇವರ ಹಾಗೆ ಪರಿಶುದ್ಧರಾದವರಿಲ್ಲ. ನಿಶ್ಚಯವಾಗಿ ನಿಮ್ಮ ಹೊರತು ಮತ್ತೊಬ್ಬರಿಲ್ಲ. ನಮ್ಮ ದೇವರ ಹಾಗೆಯೇ ಆಶ್ರಯದುರ್ಗ ಇಲ್ಲ.


ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವುದು, ಏಕೆಂದರೆ ಸಮುದ್ರದ ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವುದು. ಇತರ ಜನಾಂಗಗಳ ಆಸ್ತಿಯು ನಿನ್ನ ಬಳಿಗೆ ಬರುವುದು.


ಓ ಯೆಹೋವ ದೇವರೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಜಗದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಬರುವುವು. “ನಮ್ಮ ಪೂರ್ವಜರು ನಿಶ್ಚಯವಾಗಿ ಸುಳ್ಳಾದದ್ದನ್ನು ಪಾರಂಪರ್ಯವಾಗಿ ಹೊಂದಿದ್ದಾರೆ. ಅವು ವ್ಯರ್ಥವೇ. ಅವುಗಳಲ್ಲಿ ಏನೂ ಪ್ರಯೋಜನವಿಲ್ಲ.


ಏಕೆಂದರೆ ಉನ್ನತನೂ, ಮಹೋನ್ನತನೂ, ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ: “ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ, ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.


ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.


ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ಅವರ ಪಾದಪೀಠದಲ್ಲಿ ಆರಾಧಿಸಿರಿ. ಏಕೆಂದರೆ ಅವರು ಪರಿಶುದ್ಧರಾಗಿದ್ದಾರೆ.


ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ.


ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ.


ನೀವು ನನಗೆ ಭಯಪಡುವುದಿಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ? ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ, ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ. ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು.


ಆಗ ಜಲಾಶಯದ ಜಲಗಳ ದೂತನು: “ನೀವು ಇದ್ದವರೂ, ಇರುವವರೂ ಆಗಿರುವ ಪರಿಶುದ್ಧರು. ನೀವು ನೀತಿವಂತರಾಗಿದ್ದೀರಿ. ಏಕೆಂದರೆ, ನೀವು ಇವುಗಳಿಗೆ ನ್ಯಾಯತೀರಿಸುವಿರಿ.


ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ತೊಟ್ಟುಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸಲಾಗಿತ್ತು. ಏಕೆಂದರೆ ಆ ನಾರುಮಡಿಯು ಪರಿಶುದ್ಧರ ನೀತಿಕೃತ್ಯಗಳೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು