Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 2:12 - ಕನ್ನಡ ಸಮಕಾಲಿಕ ಅನುವಾದ

12 ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. ಪಕ್ಷಿಗಳು ಹಾಡುವ ಕಾಲ ಬಂತು. ಪಾರಿವಾಳಗಳ ಸ್ವರ ನಮ್ಮ ಊರಲ್ಲಿ ಕೇಳಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಭೂಮಿಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು, ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಧರೆಯಲ್ಲೆಲ್ಲ ಹೂಗಳು ಅರಳಿವೆ ನಲಿದು ಹಾಡುವ ಕಾಲ ಬಂದಿದೆ ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಭೂವಿುಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು, ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ; ಪಕ್ಷಿಗಳು ಹಾಡುವ ಸಮಯವು ಬಂದಿದೆ. ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 2:12
17 ತಿಳಿವುಗಳ ಹೋಲಿಕೆ  

ಏಕೆಂದರೆ ನೀವು ಆನಂದದೊಡನೆ ಹೋಗುವಿರಿ, ಸಮಾಧಾನದಿಂದ ಬರುವಿರಿ. ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವುವು.


ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.


ಹೌದು, ಆಕಾಶದಲ್ಲಿಯ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿಯುತ್ತದೆ. ಪಾರಿವಾಳವೂ, ಬಾನಕ್ಕಿಯೂ, ಕೊಕ್ಕರೆಯೂ ತಮ್ಮ ಗಮನಾಗಮನದ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಯೆಹೋವ ದೇವರು ಅಪೇಕ್ಷಿಸುವುದನ್ನು ಅರಿಯರು.


ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.


ದ್ರಾಕ್ಷಿಬಳ್ಳಿಯು ಚಿಗುರಿದೆಯೋ, ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು ಕಣಿವೆಯಲ್ಲಿನ ಫಲಗಳನ್ನು ನೋಡಲು ನಾನು ಬಾದಾಮಿಯ ತೋಟಕ್ಕೆ ಹೋದೆನು.


ನನ್ನ ಪ್ರಿಯನು ತೋಟಗಳಲ್ಲಿ ಮಂದೆ ಮೇಯಿಸುವುದಕ್ಕೂ, ನೆಲದಾವರೆಗಳನ್ನು ಕೊಯ್ದು ತರುವುದಕ್ಕೂ, ಸುಗಂಧ ಸಸ್ಯಗಳಿರುವ ಉದ್ಯಾನವನಕ್ಕೆ ಹೋಗಿದ್ದಾನೆ.


ಅದಕ್ಕೆ ಯೆಹೋವ ದೇವರು ಅಬ್ರಾಮನಿಗೆ, “ಮೂರು ವರ್ಷದ ಕಡಸನ್ನು, ಮೂರು ವರ್ಷದ ಮೇಕೆಯನ್ನು, ಮೂರು ವರ್ಷದ ಟಗರನ್ನು, ಒಂದು ಬೆಳವಕ್ಕಿಯನ್ನು, ಒಂದು ಪಾರಿವಾಳವನ್ನು ನನಗಾಗಿ ತೆಗೆದುಕೊಂಡು ಬಾ,” ಎಂದರು.


ನಿಮ್ಮ ಪಾರಿವಾಳದ ಪ್ರಾಣವನ್ನು ದುಷ್ಟಮೃಗಗಳಿಗೆ ಒಪ್ಪಿಸಕೊಡಬೇಡಿರಿ. ನಿಮ್ಮ ದೀನರ ಮಂಡಳಿಯನ್ನು ಸದಾಕಾಲಕ್ಕೆ ಮರೆತುಬಿಡಬೇಡಿರಿ.


ಇಗೋ! ಚಳಿಗಾಲ ಕಳೆಯಿತು, ಮಳೆ ನಿಂತುಹೋಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು