Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 1:6 - ಕನ್ನಡ ಸಮಕಾಲಿಕ ಅನುವಾದ

6 ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ. ನನ್ನ ಸಹೋದರರು ನನ್ನ ಮೇಲೆ ಕೋಪಮಾಡಿಕೊಂಡು, ದ್ರಾಕ್ಷಿತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ಆದರೆ ನನ್ನ ಸ್ವಂತ ದ್ರಾಕ್ಷಿತೋಟವನ್ನು ನಾನು ಅಲಕ್ಷ್ಯ ಮಾಡಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ. ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು ದ್ರಾಕ್ಷಿತೋಟಗಳನ್ನು ಕಾಯುವುದಕ್ಕೆ ಇಟ್ಟರು; ಆದುದರಿಂದ ನನ್ನ ಸ್ವಂತ ದ್ರಾಕ್ಷಿ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ದಿಟ್ಟಿಸಿ ನೋಡಬೇಡಿ ನನ್ನ ರೂಪವನ್ನೆ ನಾ ಕಪ್ಪಾಗಿರುವುದು ಸೂರ್ಯನ ತಾಪದಿಂದಲೆ. ಸಿಟ್ಟುಗೊಂಡರು ಸಹೋದರರು ನನ್ನ ಮೇಲೆ ಅಟ್ಟಿದರು ನನ್ನನು ತೋಟಕಾಯುವುದಕ್ಕೆ ಗಮನ ಕೊಡಲಾಗಲಿಲ್ಲ ನನ್ನ ತನು ತೋಟಕ್ಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿರುವದರಿಂದ ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನನ್ನ ಸಹೋದರರು ನನ್ನ ಮೇಲೆ ಉರಿಗೊಂಡು ತೋಟಗಳನ್ನು ಕಾಯುವದಕ್ಕೆ ಹಾಕಿದರು; ನನ್ನ ತೋಟವನ್ನೋ ನಾನು ಕಾಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಸೂರ್ಯನ ತಾಪಕ್ಕೆ ನಾನೆಷ್ಟು ಕಪ್ಪಾಗಿದ್ದೇನೆಂದು ನೋಡಬೇಡಿರಿ. ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ನನ್ನನ್ನು ನೇಮಿಸಿದರು. ಆದರೆ ನಾನು ನನ್ನ ತೋಟವನ್ನು ಕಾಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 1:6
15 ತಿಳಿವುಗಳ ಹೋಲಿಕೆ  

ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.


ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ.


ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ.


ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.


ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.


ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!


ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.


ಏಕೆಂದರೆ ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ. ಮಗಳು ತನ್ನ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವಾಗಿ ಏಳುತ್ತಾರೆ. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.


ಆದರೆ ಈಗ ಅವರ ರೂಪವು ಕಲ್ಲಿದ್ದಲಿನಂತೆ ಕಪ್ಪಾಗಿದೆ. ಬೀದಿಗಳಲ್ಲಿ ಅವರು ಯಾರೆಂಬುದು ತಿಳಿಯಲಿಲ್ಲ. ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ. ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.


ಏಕೆಂದರೆ, ನಿನ್ನ ಸಹೋದರರೂ, ನಿನ್ನ ತಂದೆಯ ಮನೆತನದವರೂ ನಿನಗೆ ವಂಚನೆ ಮಾಡಿದ್ದಾರೆ. ಹೌದು, ಇವರೇ ನಿನಗೆ ವಿರೋಧವಾಗಿ ಬಂದು ಜೋರಾಗಿ ಕೂಗಿದ್ದಾರೆ. ಅವರು ನಿನಗೆ ಒಳ್ಳೆಯ ಮಾತುಗಳನ್ನು ಹೇಳಿದರೂ, ಅವರನ್ನು ನಂಬಬೇಡ.


ನನ್ನ ಜನರು ತುಳಿತಕ್ಕೆ ಒಳಗಾದದ್ದರಿಂದ ನಾನೂ ತುಳಿತಕ್ಕೆ ಒಳಗಾದೆನು. ದುಃಖಿಸಿದೆನು. ಭಯವು ನನ್ನನ್ನು ಹಿಡಿಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು