Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 1:10 - ಕನ್ನಡ ಸಮಕಾಲಿಕ ಅನುವಾದ

10 ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ, ನಿನ್ನ ಕೊರಳು ಕಂಠ ಮಾಲೆಗಳಿಂದಲೂ ರಮ್ಯವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಿನ್ನ ಕೆನ್ನೆಗಳು ಆಭರಣಗಳಿಂದಲೂ, ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿನ್ನ ಕೆನ್ನೆಗಳು ಜಡೆಗಳಿಂದಲೂ ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಿನ್ನ ಕೆನ್ನೆಗಳು ಅಲಂಕಾರಗಳಿಂದ ಸುಂದರವಾಗಿವೆ. ನಿನ್ನ ಕಂಠವು ಹಾರಗಳಿಂದ ಅಂದವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 1:10
14 ತಿಳಿವುಗಳ ಹೋಲಿಕೆ  

ಅದರ ಬದಲು ಸಾತ್ವಿಕವಾದ ಶಾಂತಮನಸ್ಸು ಎಂಬ ಹೃದಯದ ಆಂತರ್ಯದ ಅಲಂಕಾರವೇ ನಿಮ್ಮದಾಗಿರಲಿ. ಇದು ದೇವರ ದೃಷ್ಟಿಗೆ ಬಹು ಅಮೂಲ್ಯವಾದದ್ದಾಗಿದೆ.


ಅವನ ಕೆನ್ನೆಗಳು ಸುಗಂಧ ಸಸ್ಯಗಳು ಬೆಳೆಯುವ ದಿಬ್ಬಗಳಂತಿವೆ. ಅವನ ತುಟಿಗಳು ಸುಗಂಧ ರಕ್ತಬೋಳವನ್ನು ಸುರಿಸುವ ಕೆಂದಾವರೆಗಳು.


“ನಾನು ಆಕೆಗೆ, ‘ನೀನು ಯಾರ ಮಗಳು?’ ಎಂದು ಕೇಳಿದೆನು. “ಅದಕ್ಕವಳು, ‘ನಾಹೋರನಿಗೆ ಮಿಲ್ಕಾಳು ಹೆತ್ತ ಮಗನಾದ ಬೆತೂಯೇಲನ ಮಗಳು,’ ಎಂದಳು. “ಆಗ ನಾನು ಆಕೆಗೆ ಮೂಗುತಿಯನ್ನೂ, ಆಕೆಯ ಕೈಗಳಿಗೆ ಬಳೆಗಳನ್ನೂ ಕೊಟ್ಟು,


ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ, ನೀನು ನಿನ್ನ ಒಂದೇ ಕಿರುನೋಟದಿಂದಲೂ, ನಿನ್ನ ಕೊರಳಿನ ಒಂದೇ ಕಂಠ ಹಾರದಿಂದಲೂ, ನನ್ನ ಹೃದಯವನ್ನು ಸೆಳಕೊಂಡಿರುವೆ.


ಅವು ನಿನ್ನ ತಲೆಗೆ ಸುಂದರ ಕಿರೀಟ ನಿನ್ನ ಕೊರಳನ್ನು ಅಲಂಕರಿಸುವ ಹಾರ.


ಆದ್ದರಿಂದ ಯೆಹೋವ ದೇವರ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ವಸ್ತುಗಳಾದ ಸರಪಣಿಗಳನ್ನೂ, ಕಡಗಗಳನ್ನೂ, ಉಂಗುರಗಳನ್ನೂ, ವಾಲೆಗಳನ್ನೂ, ಪದಕಗಳನ್ನೂ ಯೆಹೋವ ದೇವರಿಗೆ ಕಾಣಿಕೆಯಾಗಿ ತಂದಿದ್ದೇವೆ,” ಎಂದು ಹೇಳಿದರು.


ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು.


ಒಂಟೆಗಳು ನೀರು ಕುಡಿದಾದ ಮೇಲೆ, ಆ ಮನುಷ್ಯನು ಅರ್ಧ ತೊಲೆಯ ತೂಕದ ಚಿನ್ನದ ಮೂಗುತಿಯನ್ನು, ಹತ್ತು ತೊಲೆ ತೂಕದ ಎರಡು ಬಳೆಗಳನ್ನು ಆಕೆಗೆ ಕೊಟ್ಟನು.


ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.


ಅವನು ಬೆಳ್ಳಿಯ ಒಡವೆ, ಬಂಗಾರದ ಒಡವೆ, ವಸ್ತ್ರಗಳನ್ನೂ ತಂದು, ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ, ಆಕೆಯ ತಾಯಿಗೂ ಅಮೂಲ್ಯವಾದ ಉಡುಗೊರೆಗಳನ್ನು ಕೊಟ್ಟನು.


ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು