Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 9:49 - ಕನ್ನಡ ಸಮಕಾಲಿಕ ಅನುವಾದ

49 ಸೈನಿಕರೆಲ್ಲರಲ್ಲಿ ಒಬ್ಬೊಬ್ಬನು ಒಂದೊಂದು ಕೊಂಬೆಯನ್ನು ಕಡಿದು, ಅಬೀಮೆಲೆಕನ ಹಿಂದೆ ಹೋಗಿ, ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ, ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಜನರು ಸತ್ತುಹೋದರು. ಅವರು ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಅವರೂ ಅದರಂತೆಯೇ ಮಾಡಿ, ಅವನ ಹಿಂದೆ ಹೋಗಿ, ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ, ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‌ ಕೋಟೆಯವರೆಲ್ಲರೂ ಸತ್ತರು. ಅವರ ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಅವರೂ ಅದರಂತೆಯೇ ಮಾಡಿದರು. ಅವನ ಹಿಂದೆ ಹೋಗಿ ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್ ಕೋಟೆಯವರೆಲ್ಲರೂ ಸತ್ತರು. ಸ್ತ್ರೀಪುರುಷರೆಲ್ಲಾ ಸೇರಿ ಅವರು ಸುಮಾರು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಅವರೂ ಅದರಂತೆಯೇ ಮಾಡಿ ಅವನ ಹಿಂದೆ ಹೋಗಿ ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‍ಕೋಟೆಯವರೆಲ್ಲರೂ ಸತ್ತರು. ಅವರು ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಆದ್ದರಿಂದ ಅವರೆಲ್ಲರೂ ಕೊಂಬೆಗಳನ್ನು ಕಡಿದುಕೊಂಡು ಅವನನ್ನು ಹಿಂಬಾಲಿಸಿದರು. ಅವರು ಏಲ್‌ಬೆರೀತ್ ದೇವರಗುಡಿಯ ಅತೀ ಸುರಕ್ಷಿತವಾದ ಕೋಣೆಯ ಸುತ್ತಲೂ ಆ ಕೊಂಬೆಗಳನ್ನು ಇಟ್ಟರು. ತರುವಾಯ ಆ ಕೊಂಬೆಗಳಿಗೆ ಬೆಂಕಿ ಹಚ್ಚಿ ಆ ಕೋಣೆಯಲ್ಲಿದ್ದ ಎಲ್ಲರನ್ನು ಸುಟ್ಟುಬಿಟ್ಟರು. ಶೆಕೆಮಿನ ಬುರುಜಿನಲ್ಲಿದ್ದ ಒಂದು ಸಾವಿರ ಗಂಡಸರು ಮತ್ತು ಹೆಂಗಸರು ಸತ್ತುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 9:49
6 ತಿಳಿವುಗಳ ಹೋಲಿಕೆ  

ಏಕೆಂದರೆ ನಿಮ್ಮಲ್ಲಿ ಹೊಟ್ಟೆಕಿಚ್ಚೂ ಸ್ವಾರ್ಥ ಉದ್ದೇಶವೂ ಇರುವಲ್ಲಿ ಗಲಿಬಿಲಿಯೂ ಸಕಲ ವಿಧವಾದ ಕೆಟ್ಟ ಅಭ್ಯಾಸವೂ ಇರುತ್ತವೆ.


ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.


ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿ ಹೊರಟು ಶೆಕೆಮಿನ ಹಿರಿಯರನ್ನೂ, ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನರಿಂದಲೂ, ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ,” ಎಂದನು.


“ಮುಳ್ಳಿನ ಗಿಡವು ಮರಗಳಿಗೆ, ‘ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವುದು ಸತ್ಯವಾದರೆ, ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು, ಲೆಬನೋನಿನ ದೇವದಾರುಗಳು ದಹಿಸಿಬಿಡಲಿ,’ ಎಂದಿತು.


ಅಬೀಮೆಲೆಕನು ತನ್ನ ಸಂಗಡ ಇದ್ದ ಸೈನಿಕರೆಲ್ಲರ ಸಹಿತವಾಗಿ ಚಲ್ಮೋನ್ ಬೆಟ್ಟವನ್ನೇರಿ, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು, ಒಂದು ಮರದ ಕೊಂಬೆಯನ್ನು ಕಡಿದು, ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, ತನ್ನ ಕೂಡ ಇದ್ದ ಜನರಿಗೆ, “ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ,” ಎಂದನು.


ಆಗ ಅಬೀಮೆಲೆಕನು ತೆಬೇಚಿಗೆ ಹೋಗಿ, ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಿ, ಅದನ್ನು ಹಿಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು