Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 9:37 - ಕನ್ನಡ ಸಮಕಾಲಿಕ ಅನುವಾದ

37 ಗಾಳನು ತಿರುಗಿ ಅವನ ಸಂಗಡ ಮಾತನಾಡಿ, “ಇಗೋ, ಜನರು ಭೂಮಧ್ಯ ಸ್ಥಳದಿಂದ ಇಳಿದು ಬರುತ್ತಾರೆ. ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಅವನು ತಿರುಗಿ, “ನೋಡು, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 “ನೋಡು ದೇಶನಾಭಿಗಿರಿಯಿಂದ ಜನರು ಬರುತ್ತಿದ್ದಾರೆ: ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಅವನು ತಿರಿಗಿ - ನೋಡು, ದೇಶನಾಭಿಗಿರಿಯಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಆದರೆ ಪುನಃ ಗಾಳನು, “ಅಲ್ಲಿ ನೋಡು! ಕೆಲವು ಜನರು ಭೂಮಿಯ ಮಧ್ಯದಿಂದ ಬರುತ್ತಿದ್ದಾರೆ. ಅಲ್ಲಿ ಆ ಮಾಟಗಾರರ ಮರದ ಹತ್ತಿರ ಒಂದು ತಲೆಯನ್ನು ನೋಡಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 9:37
4 ತಿಳಿವುಗಳ ಹೋಲಿಕೆ  

ನೀವು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಶಕುನ ನೋಡುವವರ ಹಾಗೂ ಕಣಿಹೇಳುವವರ ಮಾತನ್ನು ಕೇಳುತ್ತಿದ್ದರು. ನಿಮ್ಮನ್ನಾದರೋ ನಿಮ್ಮ ದೇವರಾದ ಯೆಹೋವ ದೇವರು ಹಾಗೆ ಮಾಡಲು ಅನುಮತಿಸಲಿಲ್ಲ.


ಗಾಳನು ಆ ಜನರನ್ನು ಕಂಡಾಗ, “ಬೆಟ್ಟದ ಶಿಖರಗಳಿಂದ ಜನರು ಬರುತ್ತಾರೆ,” ಎಂದು ಜೆಬೂಲನಿಗೆ ಹೇಳಿದರು. ಜೆಬೂಲನು ಅವನಿಗೆ, “ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ಕಾಣುತ್ತೀ,” ಎಂದನು.


ಆಗ ಜೆಬೂಲನು ಅವನಿಗೆ, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು, ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನರಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧ ಮಾಡು,” ಎಂದನು.


ನಾನು ಸುಲಿಗೆಯನ್ನು ಮತ್ತು ಕೊಳ್ಳೆಯನ್ನು ತೆಗೆದುಕೊಳ್ಳುವೆನು. ಹೀಗೆ ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳನ್ನು ಎದುರಿಸುವೆನು. ಜನಾಂಗಗಳಿಂದ ಒಟ್ಟುಗೂಡಿ, ಪಶುಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಿಸುವವರ ಮೇಲೆಯೂ ಕೈಹಾಕುವೆನು,” ಎಂದು ಹೇಳುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು