ನ್ಯಾಯಸ್ಥಾಪಕರು 9:3 - ಕನ್ನಡ ಸಮಕಾಲಿಕ ಅನುವಾದ3 ಹಾಗೆಯೇ ಅವನ ತಾಯಿಯ ಸಹೋದರರು ಅವನನ್ನು ಕುರಿತು ಶೆಕೆಮಿನ ಹಿರಿಯರೆಲ್ಲರೂ ಕೇಳುವಂತೆ ಈ ಮಾತುಗಳನ್ನೆಲ್ಲಾ ಹೇಳಿದರು. ಅವರು, “ಇವನು ನಮ್ಮ ಸಹೋದರನು,” ಎಂದು ಹೇಳಿದ್ದರಿಂದ, ಆ ಜನರ ಹೃದಯವು ಅಬೀಮೆಲೆಕನ ಕಡೆಗೆ ತಿರುಗಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಲು ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲಾ” ಅಂದುಕೊಂಡು ಅವನ ಪಕ್ಷವನ್ನು ಹಿಡಿಯುವುದಕ್ಕೆ ಒಪ್ಪಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಿದರು. ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲವೆ” ಎಂದುಕೊಂಡು ಅವನ ಪಕ್ಷವಹಿಸಲು ಒಪ್ಪಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅವರು ಶೆಕೆವಿುನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಲು ಅವರು - ಇವನು ನಮ್ಮ ಸಹೋದರನಾಗಿದ್ದಾನಲ್ಲಾ ಅಂದುಕೊಂಡು ಅವನ ಪಕ್ಷವನ್ನು ಹಿಡಿಯುವದಕ್ಕೆ ಒಡಂಬಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅಬೀಮೆಲೆಕನ ಸೋದರ ಮಾವಂದಿರು ಶೆಕೆಮಿನ ಹಿರಿಯರ ಜೊತೆ ಮಾತನಾಡಿ ಅವರಿಗೆ ಆ ಪ್ರಶ್ನೆಯನ್ನು ಕೇಳಿದರು. ಶೆಕೆಮಿನ ಹಿರಿಯರು ಅಬೀಮೆಲೆಕನ ಪಕ್ಷವಹಿಸಲು ನಿರ್ಧರಿಸಿದರು. ಆ ಹಿರಿಯರು, “ಎಷ್ಟೇ ಆದರೂ ಅವನು ನಮ್ಮ ಸಹೋದರ” ಎಂದರು. ಅಧ್ಯಾಯವನ್ನು ನೋಡಿ |