ನ್ಯಾಯಸ್ಥಾಪಕರು 5:30 - ಕನ್ನಡ ಸಮಕಾಲಿಕ ಅನುವಾದ30 ‘ಅವರು ಓಡಲಿಲ್ಲವೋ? ಕೊಳ್ಳೆ ಹಂಚಿಕೊಳ್ಳಲಿಲ್ಲವೋ? ಒಬ್ಬೊಬ್ಬ ಸೈನಿಕನಿಗೆ ಒಂದೆರಡು ದಾಸಿಯರು ಸೀಸೆರನಿಗಾದರೋ ನಾನಾ ವರ್ಣವುಳ್ಳ ಬಟ್ಟೆಗಳು. ನಾನಾ ವರ್ಣವುಳ್ಳ ವಿಚಿತ್ರವಾಗಿ ಕಸೂತಿಹಾಕಿದ ಬಟ್ಟೆಗಳು, ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ಬಟ್ಟೆಗಳೂ ಕೊಳ್ಳೆ ಹಿಡಿಯುವವರಿಗೆ ತಕ್ಕಂಥ ಕಂಠಮಾಲೆಗಳೂ ಸಿಕ್ಕಲಿಲ್ಲವೋ?’ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201930 ‘ನಿಶ್ಚಯವಾಗಿ ಅವರಿಗೆ ಕೊಳ್ಳೆ ಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರಲ್ಲವೋ?. ಪ್ರತಿಯೊಬ್ಬ ಪುರುಷನಿಗೆ ಒಬ್ಬಿಬ್ಬರು ಹೆಂಗಸರೂ, ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ, ವಿಚಿತ್ರವಾಗಿ ಕಸೂತಿಹಾಕಿದ ಎರಡು ವಸ್ತ್ರಗಳೂ, ಕಂಠಮಾಲೆಯೂ ದೊರಕಿರುತ್ತವೆ.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)30 ‘ನಿಶ್ಚಯವಾಗಿ ಸಿಕ್ಕಿರಬೇಕು ಅವರಿಗೆ ಕೊಳ್ಳೆ ಹಂಚಿಕೊಳ್ಳುತ್ತಿರಬೇಕು ಅದನು ತಮ್ಮತಮ್ಮಲ್ಲೆ ಪ್ರತಿಯೊಬ್ಬ ಸೈನಿಕನಿಗೆ ಒಬ್ಬೊಬ್ಬ ದಾಸಿಯರು ಸೀಸೆರನಿಗೊ, ಬಣ್ಣಬಣ್ಣವಾದ ಬಟ್ಟೆಬರೆಗಳು ವಿಚಿತ್ರ ಕಸೂತಿಹಾಕಿದ ಒಂದೆರಡು ವಸ್ತ್ರಗಳು, ಕಂಠಮಾಲೆಗಳು’. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)30 ನಿಶ್ಚಯವಾಗಿ ಅವರಿಗೆ ಕೊಳ್ಳೆಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಸೈನಿಕನಿಗೆ ಒಬ್ಬಿಬ್ಬರು ದಾಸಿಯರೂ ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ವಸ್ತ್ರಗಳೂ ಕಂಠಮಾಲೆಯೂ ದೊರಕಿರುತ್ತವೆ ಎಂಬದೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್30 ‘ಖಂಡಿತವಾಗಿ ಅವರು ಗೆದ್ದಿದ್ದಾರೆ, ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ! ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ! ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು. ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು. ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು; ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’ ಅಧ್ಯಾಯವನ್ನು ನೋಡಿ |