Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 5:3 - ಕನ್ನಡ ಸಮಕಾಲಿಕ ಅನುವಾದ

3 “ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 “ಅರಸರೇ, ಕೇಳಿರಿ! ಪ್ರಭುಗಳೇ, ಕಿವಿಗೊಡಿರಿ! ನಾನು ಯೆಹೋವನನ್ನು ಕೀರ್ತಿಸುವೆನು; ನಾನು ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತುತಿ ಗೀತೆ ಹಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅರಸರೇ, ಕೇಳಿ! ಪ್ರಭುಗಳೇ, ಕಿವಿಗೊಡಿ; ನಾ ಕಟ್ಟುವೆನು ಕವಿತೆಯನು ಸರ್ವೇಶ್ವರನಿಗೆ ನಾ ಭಜಿಸಿ ಹಾಡುವೆನು ಇಸ್ರಯೇಲರಾ ದೇವನಿಗೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅರಸರೇ, ಕೇಳಿರಿ; ಪ್ರಭುಗಳೇ, ಕಿವಿಗೊಡಿರಿ; ನಾನು ಯೆಹೋವನನ್ನು ಕೀರ್ತಿಸುವೆನು; ಇಸ್ರಾಯೇಲ್‍ದೇವರಾದ ಯೆಹೋವನಿಗೆ ಗಾನ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ಅರಸರೇ ಕೇಳಿರಿ, ಆಳುವವರೇ ಗಮನಿಸಿರಿ! ನಾನು ಹಾಡುವೆನು. ನಾನು ಯೆಹೋವನನ್ನು ಕೀರ್ತಿಸುವೆನು. ಇಸ್ರೇಲಿನ ದೇವರಾದ ಯೆಹೋವನಿಗೆ ನಾನು ಗಾನ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 5:3
18 ತಿಳಿವುಗಳ ಹೋಲಿಕೆ  

ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ.


“ಅರ್ತಷಸ್ತ ರಾಜನಾದ ನಾನು, ಯೂಫ್ರೇಟೀಸ್ ನದಿ ಆಚೆಯ ಪ್ರಾಂತಗಳ ಭಂಡಾರ ಮುಖ್ಯಸ್ಥರಿಗೆ ಆಜ್ಞಾಪಿಸುವುದೇನೆಂದರೆ ಯಾಜಕನೂ, ಪರಲೋಕ ದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು.


ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.


ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.


ಆಗ ಎಲೀಯನು ಜನರಿಗೆ, “ಯೆಹೋವ ದೇವರ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ. ಆದರೆ ಬಾಳನ ಪ್ರವಾದಿಗಳು ನಾನೂರ ಐವತ್ತು ಮಂದಿಯಿದ್ದಾರೆ.


ದೆಬೋರಳಾದ ನಾನು ಏಳುವವರೆಗೂ, ಇಸ್ರಾಯೇಲಿನಲ್ಲಿ ತಾಯಿಯಾಗಿ ನಾನು ಏಳುವವರೆಗೂ ಇಸ್ರಾಯೇಲಿನ ಹಳ್ಳಿಗಳ ನಿವಾಸಿಗಳು ಯುದ್ಧಮಾಡಲಿಲ್ಲ.


ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.


ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.


ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು, ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.


ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ. “ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.


“ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ


ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು.


ಈಗ ನನ್ನ ತಲೆಯು ನನ್ನ ಸುತ್ತಲಿರುವ ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು, ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು; ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು.


ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು. ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು.


ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು