ನ್ಯಾಯಸ್ಥಾಪಕರು 4:19 - ಕನ್ನಡ ಸಮಕಾಲಿಕ ಅನುವಾದ19 ಸೀಸೆರನು ಅವಳಿಗೆ, “ದಯಮಾಡಿ, ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ,” ಎಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು, ಅವನಿಗೆ ಕುಡಿಯುವುದಕ್ಕೆ ಕೊಟ್ಟು, ಅವನನ್ನು ಮುಚ್ಚಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಅವನು ಆಕೆಗೆ, “ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ಬಾಯಾರಿಕೆಯಾಗಿದೆ” ಅಂದನು. ಆಕೆಯು ಬುದ್ದಲಿಯನ್ನು ಬಿಚ್ಚಿ ಹಾಲನ್ನು ಕುಡಿಯಲು ಕೊಟ್ಟು ಅವನನ್ನು ಪುನಃ ಮುಚ್ಚಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಅವನು ಆಕೆಗೆ, “ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ದಾಹವಾಗಿದೆ,” ಎಂದನು. ಆಕೆ ಬುದ್ದಲಿಯನ್ನು ಬಿಚ್ಚಿ ಹಾಲನ್ನು ಕುಡಿಯಕೊಟ್ಟು ಅವನನ್ನು ಮತ್ತೆ ಮುಚ್ಚಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಅವನು ಆಕೆಗೆ - ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ದಾಹವಾಗಿದೆ ಅಂದನು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು. ಅಧ್ಯಾಯವನ್ನು ನೋಡಿ |