Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 4:11 - ಕನ್ನಡ ಸಮಕಾಲಿಕ ಅನುವಾದ

11 ಮೋಶೆಯ ಅಳಿಯನಾದ ಹೊಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರನು ಕೇನ್ಯರನ್ನು ಬಿಟ್ಟು, ತನ್ನನ್ನು ಪ್ರತ್ಯೇಕಿಸಿ, ಕೆದೆಷಿನ ಬಳಿಯಲ್ಲಿರುವ ಚಾನನ್ನೀಮ್ ಎಂಬ ಊರಲ್ಲಿ ಅಲ್ಲೋನ್ ಮರದ ಬಳಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 (ಕೇನ್ಯನಾದ) ಹೆಬೆರನು ಉಳಿದ ಕೇನ್ಯರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು. ಕೇನ್ಯರು ಮೋಶೆಯ ಮಾವನಾದ ಹೋಬಾಬನ ವಂಶದವರು. ಹೆಬೆರನು ಕೆದೆಷಿನ ಹತ್ತಿರ ಇರುವ ಚಾನನ್ನೀಮೆಂಬ ಊರಿನ ಏಲೋನ್ ವೃಕ್ಷದ ವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಕೇನ್ಯನಾದ ಹೆಬೆರನು ಮೋಶೆಯ ಮಾವ ಹೋಬಾಬನ ವಂಶದ ಉಳಿದ ಕೇನ್ಯರನ್ನು ಬಿಟ್ಟು ಕೆದೆಷಿನ ಹತ್ತಿರ ಇರುವ ‘ಚಾನನ್ನೀಮ್’ ಎಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 (ಕೇನ್ಯನಾದ ಹೆಬೆರನು ಮೋಶೆಯ ಮಾವನಾದ ಹೋಬಾಬನ ವಂಶದ ಉಳಿದ ಕೇನ್ಯರನ್ನು ಅಗಲಿ ಕೆದೆಷಿನ ಹತ್ತಿರ ಇರುವ ಚಾನನ್ನೀಮೆಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರಹಾಕಿಕೊಂಡಿದ್ದನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 4:11
13 ತಿಳಿವುಗಳ ಹೋಲಿಕೆ  

ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು.


ಅವರ ಮೇರೆಯು ಹೆಲೇಫ್ ಮತ್ತು ಚಾನನ್ನೀಮ್ ಎಂಬ ಕಡೆಯಲ್ಲಿ ಇರುವ ಅಲ್ಲೋನ್ ಮರದಿಂದ, ಆದಾಮಿ ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮ್ ತನಕ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಗಿಯುತ್ತದೆ.


ಮೋಶೆ ತನ್ನ ಮಾವನಾಗಿದ್ದ ಮಿದ್ಯಾನನಾದ ರೆಯೂವೇಲನ ಮಗ ಹೊಬಾಬನಿಗೆ, “ಯೆಹೋವ ದೇವರು ನಮಗೆ ಕೊಡುತ್ತೇನೆಂದು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸಂಗಡ ನೀನೂ ಬಾ, ನಾವು ನಿನಗೆ ಒಳ್ಳೆಯದನ್ನು ಮಾಡುವೆವು. ಏಕೆಂದರೆ ಯೆಹೋವ ದೇವರು ಇಸ್ರಾಯೇಲರನ್ನು ಕುರಿತು ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾರೆ,” ಎಂದು ಹೇಳಿದನು.


ಕೆದೆಷ್, ಎದ್ರೈ, ಎನ್ ಹಾಚೋರ್,


ಮೋಶೆಯು ತನ್ನ ಮಾವನೂ ಮಿದ್ಯಾನಿನ ಯಾಜಕನೂ ಆದ ಇತ್ರೋವನ ಮಂದೆಯನ್ನು ಮೇಯಿಸುತ್ತಿದ್ದನು. ಮರುಭೂಮಿಯ ಹಿಂಭಾಗಕ್ಕೆ ನಡೆಸಿಕೊಂಡು ಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.


ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವಮನ ಮಗ ಬಾರಾಕನನ್ನು ಕರೆಯಿಸಿ ಅವನಿಗೆ, “ಇಸ್ರಾಯೇಲ್ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದೇನೆಂದರೆ, ‘ನೀನು ನಫ್ತಾಲಿಯರಲ್ಲಿಯು, ಜೆಬುಲೂನರಲ್ಲಿಯು ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು.


ಬಳಿಕ ಕೇನ್ಯರನ್ನು ಅವನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.


ದೇವರು ಮೋಶೆಗೂ, ತಮ್ಮ ಜನರಾದ ಇಸ್ರಾಯೇಲರಿಗೂ ಮಾಡಿದವುಗಳೆಲ್ಲವನ್ನೂ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದದ್ದನ್ನೂ, ಮಿದ್ಯಾನಿನ ಯಾಜಕನೂ, ಮೋಶೆಯ ಮಾವನೂ ಆಗಿದ್ದ ಇತ್ರೋವನಿಗೆ ಮುಟ್ಟಿತು.


ಹುಡುಗಿಯರು ತಮ್ಮ ತಂದೆ ರೆಯೂವೇಲನ ಬಳಿಗೆ ಬಂದಾಗ, ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿರಿ?” ಎಂದನು.


ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟದಲ್ಲಿ ಏರಿದನೆಂದು ಸೀಸೆರನಿಗೆ ತಿಳಿಸಲಾಯಿತು.


ಕೇನ್ಯರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ, ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ, ನೀವು ಅವರ ಮಧ್ಯದಲ್ಲಿಂದ ಹೊರಟು ಹೋಗಿರಿ,” ಎಂದು ಹೇಳಿದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು.


ಆಗ ಆಕೀಷನು, “ಈ ಹೊತ್ತು ಎಲ್ಲಿ ಸುಲಿದುಕೊಂಡಿರಿ?” ಎಂದಾಗ ದಾವೀದನು, “ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ, ಯೆರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ, ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು,” ಎಂದನು.


ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು