Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 20:31 - ಕನ್ನಡ ಸಮಕಾಲಿಕ ಅನುವಾದ

31 ಆಗ ಬೆನ್ಯಾಮೀನ್ಯರು ಇಸ್ರಾಯೇಲ್ ಜನಕ್ಕೆ ಎದುರಾಗಿ ಹೊರಟು, ಪಟ್ಟಣದ ಬಳಿಯಿಂದ ಹೊರಬಂದು, ಅಡವಿಯಲ್ಲಿ ಹೆದ್ದಾರಿಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಬೆನ್ಯಾಮೀನ್ಯರು ಇಸ್ರಯೇಲರೊಡನೆ ಯುದ್ಧ ಮಾಡುವುದಕ್ಕಾಗಿ ಪಟ್ಟಣವನ್ನು ಬಿಟ್ಟು ದೂರಕ್ಕೆ ಬಂದರು. ಅವರು ಮುಂಚಿನಂತೆ ಜನರನ್ನು ವಧಿಸುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕಾಗಿ ಪಟ್ಟಣವನ್ನು ಬಿಟ್ಟು ದೂರಕ್ಕೆ ಬಂದರು. ಅವರು ಮುಂಚಿನಂತೆ ಜನರನ್ನು ವಧಿಸುವದಕ್ಕೆ ಪ್ರಾರಂಭಿಸಿ ಬೇತೇಲಿಗೂ ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜ ಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಬೆನ್ಯಾಮೀನ್ಯರ ಸೈನ್ಯವು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಲು ಗಿಬೆಯ ನಗರದಿಂದ ಹೊರಗೆ ಬಂದಿತು. ಇಸ್ರೇಲಿನ ಸೈನಿಕರು ಹಿಮ್ಮೆಟ್ಟಿದರು; ಬೆನ್ಯಾಮೀನ್ಯರು ಅವರನ್ನು ಬೆನ್ನಟ್ಟಿದರು. ಈ ರೀತಿ ಬೆನ್ಯಾಮೀನ್ಯರ ಸೈನ್ಯವು ನಗರವನ್ನು ಬಿಟ್ಟು ಬಹಳ ದೂರಹೋಗುವಂತೆ ಮಾಡಿದರು. ಬೆನ್ಯಾಮೀನ್ಯರ ಸೈನಿಕರು ಮುಂಚಿನಂತೆ ಕೆಲವು ಜನ ಇಸ್ರೇಲಿ ಸೈನಿಕರನ್ನು ಕೊಲ್ಲಲು ಆರಂಭಿಸಿದರು. ಅವರು ಸುಮಾರು ಮೂವತ್ತು ಜನ ಇಸ್ರೇಲರನ್ನು ಕೊಂದರು. ಅವರಲ್ಲಿ ಕೆಲವರನ್ನು ಹೊಲಗಳಲ್ಲಿ ಕೊಂದರು. ಒಂದು ದಾರಿ ಬೇತೇಲ್ ನಗರಕ್ಕೆ ಹೋಗುತ್ತಿತ್ತು. ಇನ್ನೊಂದು ದಾರಿ ಗಿಬೆಯಕ್ಕೆ ಹೋಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 20:31
7 ತಿಳಿವುಗಳ ಹೋಲಿಕೆ  

ಅವರು ಕಣಿವೆಯನ್ನು ದಾಟಿದ್ದಾರೆ; ಗಿಬೆಯದಲ್ಲಿ ಇಳುಕೊಂಡಿದ್ದಾರೆ. ರಾಮಾ ಜನತೆ ಹೆದರುತ್ತಿದೆ; ಸೌಲನ ಗಿಬೆಯದ ಜನತೆ ಓಡಿಹೋಗಿದೆ.


ಆಯಿ ಎಂಬ ಪಟ್ಟಣದವರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಪಟ್ಟಣದ ಬಾಗಿಲಿನಿಂದ ಪ್ರಾರಂಭಿಸಿ ಶೆಬಾರಿಮಿನವರೆಗೂ ಅವರನ್ನು ಹಿಂದಟ್ಟಿ, ಅವರನ್ನು ಹೊಡೆದರು. ಆದ್ದರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.


ಮೂರನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ, ಗಿಬೆಯದ ಸಮೀಪದಲ್ಲಿ ವ್ಯೂಹವನ್ನು ಕಟ್ಟಿದರು.


ಬೆನ್ಯಾಮೀನ್ಯರು, “ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಸೋತುಹೋಗುತ್ತಾರೆ,” ಎಂದುಕೊಂಡರು. ಆದರೆ ಇಸ್ರಾಯೇಲರು, “ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳೆದುಕೊಳ್ಳುವ ಹಾಗೆ ನಾವು ಹಿಂದಕ್ಕೆ ಓಡಿಹೋಗೋಣ,” ಎಂದುಕೊಂಡರು.


ಆಯಿ ಎಂಬ ಪಟ್ಟಣದಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇರಲಿಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲರನ್ನು ಹಿಂದಟ್ಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು