Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 20:15 - ಕನ್ನಡ ಸಮಕಾಲಿಕ ಅನುವಾದ

15 ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆ ದಿವಸದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆ ಇಪ್ಪತ್ತಾರು ಸಾವಿರ. ಇವರಲ್ಲದೆ ಗಿಬೆಯದಲ್ಲಿಯೇ ಏಳುನೂರು ಮಂದಿ ಯುದ್ಧವೀರರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆ ದಿವಸದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಬೆನ್ಯಾಮೀನ್ ಕುಲದವರು ಇಪ್ಪತ್ತಾರು ಸಾವಿರ ಸೈನಿಕರನ್ನು ಒಟ್ಟುಗೂಡಿಸಿದರು. ಆ ಸೈನಿಕರೆಲ್ಲರು ಯುದ್ಧದ ತರಬೇತಿಯನ್ನು ಪಡೆದವರಾಗಿದ್ದರು. ಗಿಬೆಯ ನಗರದಲ್ಲಿಯೂ ಏಳುನೂರು ಜನರು ತರಬೇತಿ ಪಡೆದ ಸೈನಿಕರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 20:15
9 ತಿಳಿವುಗಳ ಹೋಲಿಕೆ  

ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು ಇವರೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 45,600.


ಆಗ ಯೆಹೋವ ದೇವರು ಇಸ್ರಾಯೇಲಿನ ಮುಂದೆ ಬೆನ್ಯಾಮೀನ್ಯರನ್ನು ಹೊಡೆದರು. ಆ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಲ್ಲಿ ಖಡ್ಗ ಹಿಡಿಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯರನ್ನು ನಾಶಮಾಡಿದರು.


ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯಾದಿಂದ ಹೊರಗೆ ಬಂದು ಇಸ್ರಾಯೇಲರಲ್ಲಿ ಖಡ್ಗ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು.


ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.


ಬೆನ್ಯಾಮೀನ್ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.


ಅವನ ಸೈನಿಕರ ಸಂಖ್ಯೆ 35,400 ಮಂದಿ.


ಇಸ್ರಾಯೇಲರ ಸಂಗಡ ಯುದ್ಧಮಾಡುವುದಕ್ಕೆ ಹೊರಡುವ ಹಾಗೆ ಪಟ್ಟಣಗಳಲ್ಲಿಂದ ಗಿಬೆಯದಲ್ಲಿ ಬಂದು ಕೂಡಿದರು.


ಇಸ್ರಾಯೇಲರಾದ ಜನರು ಬಲಗೊಂಡು, ಮೊದಲನೆಯ ದಿವಸ ಯುದ್ಧಕ್ಕೆ ವ್ಯೂಹ ಕಟ್ಟಿದ ಸ್ಥಳದಲ್ಲಿ ತಿರುಗಿ ವ್ಯೂಹ ಕಟ್ಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು