Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 2:2 - ಕನ್ನಡ ಸಮಕಾಲಿಕ ಅನುವಾದ

2 ‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು’ ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ, ನೀವು ಈ ನಾಡಿನ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು, ಅವರ ಬಲಿಪೀಠಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೇಕೆ ಮಾಡಿದಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆದರೆ ಅದಕ್ಕೆ ಪ್ರತಿಯಾಗಿ ನೀವು ಈ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬಾರದು. ಅವರ ಯಜ್ಞವೇದಿಕೆಗಳನ್ನು ನಾಶಮಾಡಬೇಕು’ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ನನಗೆ ವಿಧೇಯರಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 2:2
29 ತಿಳಿವುಗಳ ಹೋಲಿಕೆ  

ನಿನ್ನ ಮಾರ್ಗವನ್ನು ಬೇರೆ ಮಾಡಿಕೊಳ್ಳುವಷ್ಟು ಏಕೆ ಬಹಳವಾಗಿ ತಿರುಗಾಡುತ್ತೀ? ಅಸ್ಸೀರಿಯದ ನಿಮಿತ್ತ ನಾಚಿಕೆ ಪಟ್ಟ ಹಾಗೆ ಈಜಿಪ್ಟಿನ ನಿಮಿತ್ತವೂ ನಾಚಿಕೆಪಡುವೆ.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ, ವ್ಯರ್ಥವಾಗುವ ಹಾಗೆ ನನ್ನಲ್ಲಿ ಏನು ತಪ್ಪನ್ನು ಕಂಡಿದ್ದಾರೆ?


ಈಗ ಶೀಹೋರಿನ ನೀರು ಕುಡಿಯುವುದಕ್ಕಾಗಿ ಈಜಿಪ್ಟಿನ ದಾರಿಯಲ್ಲಿ ನಿನಗೇನು ಕೆಲಸ? ಯೂಫ್ರೇಟೀಸ್ ನದಿಯ ನೀರು ಕುಡಿಯುವುದಕ್ಕಾಗಿ ಅಸ್ಸೀರಿಯದ ದಾರಿಯಲ್ಲಿ ನಿನಗೇನು ಕೆಲಸ?


ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,


ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಒಪ್ಪಿಸುವ ಜನರನ್ನೆಲ್ಲಾ ನೀವು ಸಂಹರಿಸಬೇಕು. ಅವರ ಮೇಲೆ ನೀವು ಕಟಾಕ್ಷವಿಡಬಾರದು. ಅವರ ದೇವರುಗಳನ್ನು ಆರಾಧಿಸಬಾರದು. ಏಕೆಂದರೆ ಅವು ನಿಮಗೆ ಉರುಲಾಗುವವು.


ಮೋಶೆಯು ಆರೋನನಿಗೆ, “ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು?” ಎಂದು ಕೇಳಿದನು.


ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ.


ಏಕೆಂದರೆ ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯತೀರ್ಪಿನ ಸಮಯವು ಬಂದಿದೆ. ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರಬಹುದು?


ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು.


ಅವರು ಒಬ್ಬ ಪ್ರವಾದಿಯನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದರು. ಅವನು ಅವರಿಗೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, “ನೀವು ದಾಸತ್ವದಲ್ಲಿದ್ದ ನಿಮ್ಮನ್ನು ನಾನು ಈಜಿಪ್ಟಿನಿಂದ ಬರಮಾಡಿದೆನು.


ಅನಂತರ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿ ಎಂದು ಯಾಕೆ ನನಗೆ ತಿಳಿಸಲಿಲ್ಲ?


ಆಗ ಇಸ್ರಾಯೇಲರು ಹಿವ್ವಿಯರಾದ ಅವರಿಗೆ, “ನೀವು ಒಂದು ವೇಳೆ ನಮ್ಮ ಹತ್ತಿರದಲ್ಲಿ ವಾಸಿಸುವವರು ಆಗಿರಬಹುದು. ನಾವು ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವುದು ಹೇಗೆ?” ಎಂದರು.


‘ನಾನೇ ನಿಮ್ಮ ದೇವರಾದ ಯೆಹೋವ ದೇವರು. ನೀವು ವಾಸಿಸಿರುವ ಅಮೋರಿಯರ ದೇಶದ ದೇವರುಗಳಿಗೆ ಭಯಪಡಬೇಡಿರಿ,’ ಎಂದು ನಾನು ಹೇಳಿದೆನು. ಆದರೆ ನೀವು ನನ್ನ ಸ್ವರವನ್ನು ಕೇಳದೆ ಹೋದಿರಿ,” ಎಂದು ಹೇಳಿದನು.


ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು