ನ್ಯಾಯಸ್ಥಾಪಕರು 19:27 - ಕನ್ನಡ ಸಮಕಾಲಿಕ ಅನುವಾದ27 ಅವಳ ಯಜಮಾನನು ಉದಯದಲ್ಲಿ ಎದ್ದು, ಮನೆಯ ಬಾಗಿಲನ್ನು ತೆರೆದು, ತನ್ನ ಮಾರ್ಗವಾಗಿ ಹೊರಡುವಾಗ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಆಕೆಯ ಪತಿ ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆದಾಗ ತನ್ನ ಉಪಪತ್ನಿ ಬಾಗಿಲ ಮುಂದೆ ಬಿದ್ದಿರುವುದನ್ನೂ ಆಕೆಯ ಕೈಗಳು ಹೊಸ್ತಲಿನ ಮೇಲಿರುವುದನ್ನೂ ಕಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವದಕ್ಕೆ ಸಿದ್ಧನಾಗಿ ಬಾಗಲನ್ನು ತೆರೆಯಲು ತನ್ನ ಉಪಪತ್ನಿಯು ಬಾಗಲ ಮುಂದೆ ಬಿದ್ದಿರುವದನ್ನೂ ಆಕೆಯ ಕೈಗಳು ಹೊಸ್ತಲಿನ ಮೇಲಿರುವದನ್ನೂ ಕಂಡನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಆ ಲೇವಿಯನು ಮರುದಿನ ಬೆಳಿಗ್ಗೆ ಬೇಗ ಎದ್ದನು. ಅವನು ತನ್ನ ಮನೆಗೆ ಹೋಗಬೇಕೆಂದಿದ್ದನು. ಆದ್ದರಿಂದ ಹೊರಗೆ ಹೋಗಲು ಬಾಗಿಲು ತೆರೆದನು. ಬಾಗಿಲ ಮುಂದೆ ಹೊಸ್ತಿಲದ ಮೇಲೆ ಕೈಚಾಚಿ ಬಿದ್ದಿದ್ದ ತನ್ನ ಉಪಪತ್ನಿಯನ್ನು ಕಂಡನು. ಅಧ್ಯಾಯವನ್ನು ನೋಡಿ |