Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 18:7 - ಕನ್ನಡ ಸಮಕಾಲಿಕ ಅನುವಾದ

7 ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ, ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡುವಾಗ, ಅವರು ನಿರ್ಭೀತರಾಗಿಯೂ, ಸೀದೋನ್ಯರ ಹಾಗೆ ನೆಮ್ಮದಿಯಾಗಿಯೂ, ಸುರಕ್ಷಿತವಾಗಿಯೂ ಇದ್ದರು. ಅವರಿಗೆ ಯಾವ ಕೊರತೆಯು ಇರಲಿಲ್ಲ. ಅವರು ಸಮೃದ್ಧಿಯಲ್ಲಿದ್ದರು. ಸೀದೋನ್ಯರಿಂದ ದೂರವಾಗಿ ಜೀವಿಸುತ್ತಿದ್ದರು. ಬೇರೆ ಯಾರೊಂದಿಗೂ ಸಂಬಂಧವನ್ನು ಬೆಳೆಸಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆ ಐದು ಮಂದಿ ಹೊರಟು ಲಯಿಷಿಗೆ ಬಂದು, ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ಅಡಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಒಡನಾಟವಿಲ್ಲದವರು ಎಂಬುದನ್ನು ತಿಳಿದುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆ ಐದು ಮಂದಿ ಹೊರಟು ಲಯಿಷಿಗೆ ಬಂದರು. ಇಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖಸಮಾಧಾನಗಳಿಂದ ಜೀವಿಸುತ್ತಾರೆ; ಇವರನ್ನು ಅಡಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ. ಇವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಬಳಕೆಯಿಲ್ಲದವರು ಎಂಬುದನ್ನು ತಿಳಿದುಕೊಂಡು ಹಿಂದಿರುಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆ ಐದು ಮಂದಿ ಹೊರಟು ಲಯಿಷಿಗೆ ಬಂದು - ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ತಗ್ಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಬಳಕೆಯಿಲ್ಲದವರು ಎಂಬದನ್ನು ತಿಳಿದುಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆ ಐದು ಜನರು ಹೊರಟರು. ಅವರು ಲಯಿಷ್ ನಗರಕ್ಕೆ ಬಂದರು. ಅಲ್ಲಿಯ ಜನರು ಸುರಕ್ಷಿತವಾಗಿರುವುದನ್ನು ಅವರು ನೋಡಿದರು. ಚೀದೋನ್ಯರು ಅವರನ್ನು ಆಳುತ್ತಿದ್ದರು. ಎಲ್ಲವೂ ಶಾಂತವಾಗಿತ್ತು; ಸಮಾಧಾನಕರವಾಗಿತ್ತು; ಸುಖಕರವಾಗಿತ್ತು. ಸಮೀಪದಲ್ಲಿ ಅವರನ್ನು ಪೀಡಿಸುವ ಶತ್ರುಗಳು ಇರಲಿಲ್ಲ. ಅವರು ಚೀದೋನ್ ನಗರದಿಂದ ಬಹಳ ದೂರ ಇದ್ದರು. ಅವರು ಆರಾಮಿನ ಜನರೊಡನೆ ಯಾವ ಒಪ್ಪಂದವನ್ನೂ ಇಟ್ಟುಕೊಂಡಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 18:7
13 ತಿಳಿವುಗಳ ಹೋಲಿಕೆ  

ಇದಲ್ಲದೆ ದಾನನ ಗೋತ್ರದ ಮೇರೆಯು ಅವರಿಗೆ ಸಾಲದ್ದರಿಂದ ಅವರು ಹೊರಟುಹೋಗಿ ಲೆಷೆಮಿನ ಮೇಲೆ ಖಡ್ಗದಿಂದ ಯುದ್ಧಮಾಡಿ, ಅದನ್ನು ಸೋಲಿಸಿ, ಸ್ವಾಧೀನಮಾಡಿಕೊಂಡರು. ಅವರು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.


ಆಕೆಯು ಯಾವುದರಿಂದ ತನ್ನನ್ನು ಘನಪಡಿಸಿಕೊಂಡು ಭೋಗಿನಿಯಾಗಿದ್ದಳೋ ಅದಕ್ಕೆ ತಕ್ಕಂತೆ ನೀವು ಆಕೆಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ. ಏಕೆಂದರೆ ಆಕೆ ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ. ನಾನು ವಿಧವೆಯಲ್ಲ, ಎಂದೆಂದಿಗೂ ದುಃಖಿಸುವುದಿಲ್ಲ!’ ಎಂದುಕೊಳ್ಳುತ್ತಾಳೆ.


ರಾಜ್ಯಪಾಲರು ಕೆಟ್ಟವರನ್ನು ದಂಡಿಸುವುದಕ್ಕೆ ಒಳ್ಳೆಯವರನ್ನು ಪ್ರೋತ್ಸಾಹಪಡಿಸುವುದಕ್ಕೆ ಅರಸನಿಂದ ಅವರು ಕಳುಹಿಸಲಾದವರೆಂದೂ ತಿಳಿದು ಅವರಿಗೆ ಅಧೀನರಾಗಿರಿ.


ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು.


ಅವನ ತಂದೆಯು ಎಂದಾದರೂ, “ನೀನು ಹೀಗೆ ಏಕೆ ಮಾಡಿದೆ?” ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಅವನು ಬಹು ಒಳ್ಳೆಯ ರೂಪವಂತನಾಗಿದ್ದನು. ಅಬ್ಷಾಲೋಮನ ತರುವಾಯ ಅವನ ತಾಯಿ ಅವನನ್ನು ಹೆತ್ತಳು.


ನಾನು ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯತೀರಿಸುವೆನು, ಎಂದು ಹೇಳಿದ್ದೆನು. ಏಕೆಂದರೆ ತನ್ನ ಪುತ್ರರು ದೇವರ ನಿಂದನೆ ಮಾಡಿದಾಗ, ಅವರನ್ನು ಹತೋಟಿಗೆ ತರಲಿಲ್ಲ.


ಆ ಯಾಜಕನು, “ಸಮಾಧಾನವಾಗಿ ಹೋಗಿರಿ. ನೀವು ಹೋಗುವ ನಿಮ್ಮ ಮಾರ್ಗಕ್ಕೆ ಯೆಹೋವ ದೇವರ ಒಪ್ಪಿಗೆ ಇದೆ,” ಎಂದನು.


ಅವರು ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರುಗಿ ಬಂದರು. ಅವರ ಸಹೋದರರಾದ ದಾನರು ಅವರಿಗೆ, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದರು.


ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರಿತ್ತು. ಈಗ ದಾನ್ಯರು ಆ ಪಟ್ಟಣಕ್ಕೆ ಇಸ್ರಾಯೇಲನಿಗೆ ಹುಟ್ಟಿದ ತಮ್ಮ ಮೂಲಪುರುಷನಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.


ನೆಬಾಟನ ಮಗ ಯಾರೊಬ್ಬಾಮನ ಪಾಪಗಳಲ್ಲಿ ನಡೆಯುವುದು ಅವನಿಗೆ ಅಲ್ಪವಾಗಿತ್ತು. ಅವನು ಸೀದೋನ್ಯರ ಅರಸನಾದ ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾಗಿ ಬಾಳನನ್ನು ಸೇವಿಸಿ ಅವನಿಗೆ ಅಡ್ಡಬಿದ್ದನು.


ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.


“ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು