Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 18:2 - ಕನ್ನಡ ಸಮಕಾಲಿಕ ಅನುವಾದ

2 ದಾನರು ದೇಶವನ್ನು ಸಂಚರಿಸಿ ನೋಡಿ, ಪರಿಶೋಧಿಸುವುದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ, ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿಯನ್ನು ಕರೆದು, ಅವರ ಸಂಗಡ, “ನೀವು ಹೋಗಿ ದೇಶವನ್ನು ಸಂಚರಿಸಿ ನೋಡಿರಿ,” ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯೀಮ್ ಬೆಟ್ಟದಲ್ಲಿರುವ ಮೀಕನ ಮನೆಯ ಬಳಿಗೆ ಬಂದು ಅಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವರು ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದು ಮಂದಿ ಪರಾಕ್ರಮಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ, “ನೀವು ಹೋಗಿ ಲಯಿಷ್ ದೇಶವನ್ನು ಸಂಚರಿಸಿ ನೋಡಿರಿ” ಎಂದು ಆಜ್ಞಾಪಿಸಿ ಕಳುಹಿಸಿದರು. ಇವರು ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದುಮಂದಿ ಪರಾಕ್ರಮಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ, “ನೀವು ಹೋಗಿ (ಲಯಿಷ್) ದೇಶವನ್ನು ಸಂಚರಿಸಿ ನೋಡಿ ಬನ್ನಿ,” ಎಂದು ಆಜ್ಞಾಪಿಸಿ ಕಳುಹಿಸಿದನರು . ಇವರು ಪ್ರಯಾಣ ಮಾಡುತ್ತಾ ಎಫ್ರಯಿಮ್ ಬೆಟ್ಟದ ಸೀಮೆಯಲ್ಲಿ ಇದ್ದ ಮೀಕನ ಮನೆಗೆ ಬಂದು ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಮತ್ತು ಅವರು ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದು ಮಂದಿ ಪರಾಕ್ರಮ ಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ - ನೀವು ಹೋಗಿ [ಲಯಿಷ್] ದೇಶವನ್ನು ಸಂಚರಿಸಿ ನೋಡಿರಿ ಎಂದು ಆಜ್ಞಾಪಿಸಿ ಕಳುಹಿಸಿದರು. ಇವರು ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದು ಇಳುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದಾನ್ ಕುಲದವರು ತಮಗೆ ಭೂಮಿಯನ್ನು ಹುಡುಕುವುದಕ್ಕಾಗಿ ಐದು ಮಂದಿ ಸೈನಿಕರನ್ನು ಕಳುಹಿಸಿದರು. ಅವರು ತಮ್ಮ ವಾಸಕ್ಕಾಗಿ ಒಳ್ಳೆಯ ಸ್ಥಳವನ್ನು ಹುಡುಕಲು ಹೋದರು. ಆ ಐದು ಮಂದಿ ಚೊರ್ಗಾ ಮತ್ತು ಎಷ್ಟಾವೋಲ್ ನಗರದವರಾಗಿದ್ದರು. ಅವರು ದಾನ್ ಕುಲದವರ ಮನೆತನಕ್ಕೆ ಸೇರಿದವರಾದ ಕಾರಣ “ಭೂಮಿಯನ್ನು ಹುಡುಕಲು” ಅವರನ್ನು ಕಳುಹಿಸಲಾಗಿತ್ತು. ಆ ಐದು ಜನರು ಎಫ್ರಾಯೀಮ್ ಬೆಟ್ಟದ ಸೀಮೆಗೆ ಬಂದು ಮೀಕನ ಮನೆಯಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 18:2
20 ತಿಳಿವುಗಳ ಹೋಲಿಕೆ  

ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು.


ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಶಿಟ್ಟೀಮಿನಿಂದ ಗುಪ್ತವಾಗಿ ಕಳುಹಿಸಿ, ಅವರಿಗೆ, “ನೀವು ಹೋಗಿ ದೇಶವನ್ನೂ, ವಿಶೇಷವಾಗಿ ಯೆರಿಕೋ ಪಟ್ಟಣವನ್ನೂ ಸುತ್ತಿ ನೋಡಿರಿ,” ಎಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದು ಅಲ್ಲಿಯೇ ಉಳಿದುಕೊಂಡರು.


ಆಗ ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ದಾನನ ಗೋತ್ರದವರಲ್ಲಿ ಆರುನೂರು ಜನರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು, ಅಲ್ಲಿಂದ ಹೊರಟುಹೋಗಿ,


ಅವರು ಚೊರ್ಗದಲ್ಲಿಯೂ, ಎಷ್ಟಾವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರುಗಿ ಬಂದರು. ಅವರ ಸಹೋದರರಾದ ದಾನರು ಅವರಿಗೆ, “ನೀವು ಯಾವ ವರ್ತಮಾನ ತಂದಿದ್ದೀರಿ?” ಎಂದರು.


ಮೋಶೆ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ನೆಗೆವ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ,


“ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ?


ಸಲಹೆಯಿಂದ ಯೋಜನೆಗಳು ನೆರವೆರುವವು; ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.


ಅವನು ಇವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮ್ ಬೆಟ್ಟದ ಕಡೆಯಲ್ಲಿ ಹಾದು ಹೋಗುತ್ತೇವೆ. ನಾನು ಅಲ್ಲಿಯವನು. ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು. ಈಗ ಯೆಹೋವ ದೇವರ ಮನೆಗೆ ಹೋಗುತ್ತೇನೆ. ಆದರೆ ನಮ್ಮನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.


ಇಸ್ರಾಯೇಲಿನಲ್ಲಿ ಆ ದಿವಸಗಳಲ್ಲಿ ಅರಸನಿರಲಿಲ್ಲ. ಎಫ್ರಾಯೀಮ್ ಬೆಟ್ಟದ ಒಂದು ಮೂಲೆಯಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಅವನು ಯೆಹೂದದ ಬೇತ್ಲೆಹೇಮಿನವಳಾದಂಥ ಸ್ತ್ರೀಯನ್ನು ಉಪಪತ್ನಿಯಾಗಿ ತೆಗೆದುಕೊಂಡಿದ್ದನು.


ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತೆಗೆದುಕೊಂಡು ಬಂದು, ಚೊರ್ಗಕ್ಕೂ, ಎಷ್ಟಾವೋಲಿಗೂ ನಡುವೆ ಅವನ ತಂದೆ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಳಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರ್ಷ ನ್ಯಾಯತೀರಿಸಿದನು.


ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು.


ಅವರಿಗೆ ದೊರೆತ ಸೊತ್ತಿನ ವಿವರ: ಚೊರ್ಗಾ, ಎಷ್ಟಾವೋಲ್, ಈರ್ ಷೆಮೆಷ್,


ಆಗ ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವರಿಗೆ, “ನೀವು ಗೂಢಚಾರರು, ದೇಶದ ಒಳಗುಟ್ಟನ್ನು ನೋಡುವುದಕ್ಕೆ ಬಂದಿದ್ದೀರಿ,” ಎಂದನು.


ಪಶ್ಚಿಮದ ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ಣಾ,


ಎಫ್ರಾಯೀಮ್ ಬೆಟ್ಟದ ಪ್ರಾಂತದಲ್ಲಿ ಮೀಕ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಇದ್ದನು.


ಅವರು ಮೀಕನ ಮನೆಯ ಬಳಿಯಲ್ಲಿರುವಾಗ, ಲೇವಿಯ ಯುವಕನ ಸ್ವರ ಗುರುತಿಸಿ, ಅವನ ಬಳಿಗೆ ಹೋಗಿ, “ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವನು ಯಾರು? ಇಲ್ಲಿ ನೀನು ಏನು ಮಾಡುತ್ತೀ? ಏಕೆ ನೀನು ಇಲ್ಲಿರುವೆ?” ಎಂದರು.


ಯೆರಿಕೋವಿನ ಅರಸನಿಗೆ, “ಇಗೋ, ಇಸ್ರಾಯೇಲರಲ್ಲಿ ಕೆಲವರು ದೇಶವನ್ನು ಗೂಢಚಾರ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾರೆ,” ಎಂದು ತಿಳಿಸಲಾಯಿತು.


ಅದು ಕಿರ್ಯತ್ ಯಾರೀಮಿನ ಹಿಂದೆ ಇರುವುದು. ಅಲ್ಲಿಂದ ಅವರು ಎಫ್ರಾಯೀಮ್ ಬೆಟ್ಟಕ್ಕೆ ಹೋಗಿ, ಮೀಕನ ಮನೆಯವರೆಗೆ ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು