ನ್ಯಾಯಸ್ಥಾಪಕರು 17:9 - ಕನ್ನಡ ಸಮಕಾಲಿಕ ಅನುವಾದ9 ಆಗ ಮೀಕನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು. ಅವನು ಮೀಕನಿಗೆ, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು. ನನಗೆ ಸ್ಥಳ ಸಿಕ್ಕಲ್ಲಿ ಪ್ರವಾಸಿಯಾಗಬೇಕೆಂದು ಹೊರಟಿದ್ದೇನೆ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 “ನೀನು ಎಲ್ಲಿಂದ ಬಂದಿ” ಎಂದು ಮೀಕನು ಅವನನ್ನು ಕೇಳಲು ಅವನು, “ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾದ ವಾಸಸ್ಥಳವನ್ನು ಹುಡುಕಿಕೊಂಡು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ‘ನೀನು ಎಲ್ಲಿಂದ ಬಂದೆ?’ ಎಂದು ಮೀಕನು ಅವನನ್ನು ಕೇಳಿದನು. ಅವನು, “ನಾನು ಯೆಹೂದದ ಬೆತ್ಲೆಹೇಮಿನವನಾದ ಲೇವಿಯನು; ಜೀವನಕ್ಕೆ ಅನುಕೂಲವಾದ ಬೇರೆಲ್ಲಾದರು ವಾಸಿಸಬೇಕೆಂದು ಹೊರಟಿದ್ದೇನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನೀನು ಎಲ್ಲಿಂದ ಬಂದಿ ಎಂದು ಮೀಕನು ಅವನನ್ನು ಕೇಳಲು ಅವನು - ನಾನು ಯೆಹೂದದ ಬೇತ್ಲೆಹೇವಿುನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾಗುವಲ್ಲಿ ವಾಸಿಸಬೇಕೆಂದು ಹೊರಟಿದ್ದೇನೆ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಮೀಕನು ಅವನನ್ನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು. ಆ ತರುಣನು, “ನಾನು ಯೆಹೂದ ಪ್ರದೇಶದ ಬೆತ್ಲೆಹೇಮಿನವನಾದ ಲೇವಿಯನು. ನಾನು ವಾಸಮಾಡುವುದಕ್ಕೆ ಒಂದು ಸ್ಥಳವನ್ನು ಹುಡುಕುತ್ತಿದ್ದೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |