Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 11:12 - ಕನ್ನಡ ಸಮಕಾಲಿಕ ಅನುವಾದ

12 ಯೆಫ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವುದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು?” ಎಂದು ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಏನು ಕಾರಣ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧ ಮಾಡುವುದಕ್ಕೇನು ಕಾರಣ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನನ್ನು - ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧಮಾಡುವದಕ್ಕೇನು ಕಾರಣ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೆಫ್ತಾಹನು ಅಮ್ಮೋನಿಯರ ಅರಸನಿಗೆ ತನ್ನ ದೂತರ ಮೂಲಕ, “ಅಮ್ಮೋನಿಯರ ಮತ್ತು ಇಸ್ರೇಲರ ಮಧ್ಯೆ ಯಾವ ಸಮಸ್ಯೆ ಇದೆ? ನೀವು ನಮ್ಮ ದೇಶದಲ್ಲಿ ಯುದ್ಧಮಾಡಲು ಏಕೆ ಬಂದಿರುವಿರಿ?” ಎಂಬ ಸಂದೇಶವನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 11:12
11 ತಿಳಿವುಗಳ ಹೋಲಿಕೆ  

ಆಗ ನಾನು ಕೆದೇಮೋತೆಂಬ ಮರುಭೂಮಿಯಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನದ ಸುದ್ದಿಯನ್ನು ತಿಳಿಸುವಂತೆ ದೂತರನ್ನು ಕಳುಹಿಸಿ,


ಆಗ ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,


ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಿಮ್ಮ ಸಹೋದರರಾದ ಇಸ್ರಾಯೇಲರು ಹೇಳುವುದೇನೆಂದರೆ, ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.


ಆಗ ಅವರು, “ದೇವಪುತ್ರನೇ, ನಮ್ಮ ಗೊಡವೆ ನಿಮಗೆ ಏಕೆ? ಸಮಯಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಇಲ್ಲಿಗೆ ಬಂದೆಯಾ?” ಎಂದು ಕೂಗಿ ಹೇಳಿದರು.


ಹಾಗೆಯೇ ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನನ್ನಾಗಿಯೂ, ಸೈನ್ಯಾಧಿಪತಿಯಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಹೇಳಿದನು.


ಅಮ್ಮೋನಿಯ ಅರಸನು ಯೆಫ್ತಾಹನ ದೂತರಿಗೆ, “ಇಸ್ರಾಯೇಲರು ಈಜಿಪ್ಟಿನಿಂದ ಬರುವಾಗ, ಅರ್ನೋನಿನಿಂದ ಯಬ್ಬೋಕಿನವರೆಗೂ ಮತ್ತು ಯೊರ್ದನಿನವರೆಗೂ ಇರುವ ನನ್ನ ದೇಶವನ್ನು ತೆಗೆದುಕೊಂಡರು. ಆದ್ದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರುಗಿಕೊಡು,” ಎಂದನು.


ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು