Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 11:11 - ಕನ್ನಡ ಸಮಕಾಲಿಕ ಅನುವಾದ

11 ಹಾಗೆಯೇ ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನನ್ನಾಗಿಯೂ, ಸೈನ್ಯಾಧಿಪತಿಯಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಜನರು ಅವನನ್ನು ಅಧಿಪತಿಯನ್ನಾಗಿಯೂ, ನಾಯಕನನ್ನಾಗಿಯೂ ನೇಮಿಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಯೆಪ್ತಾಹನು ತನ್ನ ವಿಷಯಗಳನ್ನೆಲ್ಲಾ ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಅರಿಕೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇವಿುಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ವಿುಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯೆಫ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೊರಟುಹೋದನು. ಅವರು ಯೆಫ್ತಾಹನನ್ನು ತಮ್ಮ ನಾಯಕನನ್ನಾಗಿಯೂ ಸೇನಾಧಿಪತಿಯನ್ನಾಗಿಯೂ ಮಾಡಿದರು. ಯೆಫ್ತಾಹನು ಮಿಚ್ಛೆ ನಗರದಲ್ಲಿ ಯೆಹೋವನ ಸಮ್ಮುಖದಲ್ಲಿ ತನ್ನ ಎಲ್ಲಾ ಮಾತುಗಳನ್ನು ಮತ್ತೊಮ್ಮೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 11:11
14 ತಿಳಿವುಗಳ ಹೋಲಿಕೆ  

ಸಮುಯೇಲನು ಇಸ್ರಾಯೇಲರನ್ನು ಮಿಚ್ಪೆಯಲ್ಲಿ ಯೆಹೋವ ದೇವರ ಬಳಿಗೆ ಒಟ್ಟಾಗಿ ಕರೆದು ಅವರಿಗೆ,


ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು.


ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.


ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.


ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.


ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ, ಆ ಸ್ಥಳದಲ್ಲಿ ಯೆಹೋವ ದೇವರ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ, ಯೆಹೋವ ದೇವರಿಗೆ ಸಮಾಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲರೂ ಬಹಳವಾಗಿ ಸಂತೋಷಪಟ್ಟರು.


ದಿಲಾನ್, ಮಿಚ್ಪೆ, ಯೊಕ್ತೇಲ್,


ನಮ್ಮಿಂದಲೇ ಉಂಟಾಯಿತು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವ ಸಾಮರ್ಥ್ಯವೂ ಇಲ್ಲ. ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ.


ಯೆಫ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವುದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು?” ಎಂದು ಹೇಳಿ ಕಳುಹಿಸಿದನು.


ಆಗ ಯೆಹೋವ ದೇವರ ಆತ್ಮ ಯೆಫ್ತಾಹನ ಮೇಲೆ ಬಂತು. ಅವನು ಗಿಲ್ಯಾದ್, ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ, ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರೆದುರಿಗೆ ಹಾದುಹೋದನು.


ಯೆಫ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಹಿಂದಿರುಗಿ ಬರುವಾಗ, ಅವನ ಮಗಳು ದಮ್ಮಡಿಗಳಿಂದಲೂ, ನಾಟ್ಯದಿಂದಲೂ ಅವನನ್ನು ಎದುರುಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು. ಅವಳ ಹೊರತಾಗಿ ಅವನಿಗೆ ಮಗನಾಗಲಿ, ಮಗಳಾಗಲಿ ಇರಲಿಲ್ಲ.


ಸಮುಯೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಯೆಹೋವ ದೇವರಿಗೆ ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು