Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 11:10 - ಕನ್ನಡ ಸಮಕಾಲಿಕ ಅನುವಾದ

10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಈ ನಿನ್ನ ಮಾತಿನ ಹಾಗೆ ಮಾಡದೆ ಹೋದರೆ, ಯೆಹೋವ ದೇವರು ನಮ್ಮ ಮತ್ತು ನಿನ್ನ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವರು ಅವನಿಗೆ, “ಹಾಗೆಯೇ ಮಾಡುವೆವು; ನಮ್ಮಿಬ್ಬರ ಈ ಮಾತುಗಳಿಗೆ ಯೆಹೋವನೇ ಸಾಕ್ಷಿ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅವರು ಅವನಿಗೆ, “ಹಾಗೆಯೇ ಮಾಡುತ್ತೇವೆ; ಉಭಯತ್ರರ ಮಾತುಗಳಿಗೆ ಸರ್ವೇಶ್ವರನೇ ಸಾಕ್ಷಿ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವರು ಅವನಿಗೆ - ಹಾಗೆಯೇ ಮಾಡುವೆವು; ಉಭಯತರ ಮಾತುಗಳಿಗೆ ಯೆಹೋವನೇ ಸಾಕ್ಷಿ ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಗಿಲ್ಯಾದಿನ ಹಿರಿಯರು ಯೆಫ್ತಾಹನಿಗೆ, “ನಾವು ಹೇಳುತ್ತಿರುವ ಎಲ್ಲವನ್ನು ಯೆಹೋವನು ಕೇಳುತ್ತಿದ್ದಾನೆ. ನೀನು ಹೇಳಿದಂತೆಯೇ ಮಾಡುತ್ತೇವೆ ಎಂದು ನಾವು ಮಾತುಕೊಡುತ್ತೇವೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 11:10
16 ತಿಳಿವುಗಳ ಹೋಲಿಕೆ  

ಆಗ ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾರೋ, ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ, ಯೆಹೋವ ದೇವರು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳುವಾಗ, ನಮಗೆ ಒಳ್ಳೆಯದಾಗುವ ಹಾಗೆ,


ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು.


ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.


ಸಾರಯಳು ಅಬ್ರಾಮನಿಗೆ, “ನನಗೆ ಆದ ಅನ್ಯಾಯಕ್ಕೆ ನೀನೇ ಹೊಣೆ. ನಾನು ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರಕ್ಕೆ ಯೋಗ್ಯಳಾದೆನು. ಯೆಹೋವ ದೇವರು ನಿನಗೂ ನನಗೂ ನ್ಯಾಯತೀರಿಸಲಿ,” ಎಂದಳು.


ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ.


“ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”


ಯೆಹೋವ ದೇವರು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ. ಹೌದು, ಯೆಹೋವ ದೇವರು ತಾವೇ ನನಗೋಸ್ಕರ ನಿನ್ನ ವಿಷಯವಾಗಿ ಮುಯ್ಯಿಗೆ ಮುಯ್ಯಿ ಮಾಡಲಿ. ಆದರೆ ನಾನು ನಿನ್ನ ಮೇಲೆ ನನ್ನ ಕೈಯೆತ್ತುವುದಿಲ್ಲ.


ಆಗ ಅವನು ಅವರಿಗೆ, “ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬುದಕ್ಕೆ ಯೆಹೋವ ದೇವರೇ ನಿಮಗೆ ಸಾಕ್ಷಿಯಾಗಿದ್ದಾರೆ. ಅವರ ಅಭಿಷಿಕ್ತನು ಈ ಹೊತ್ತು ಸಾಕ್ಷಿಯಾಗಿದ್ದಾನೆ,” ಎಂದನು. ಅದಕ್ಕವರು, “ಸಾಕ್ಷಿಯಾಗಿದ್ದಾರೆ,” ಎಂದರು.


ಆ ನ್ಯಾಯಾಧಿಪತಿಗಳಿಗೆ ಆ ಕಾಲದಲ್ಲಿ ನಾನು, “ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಾಯೇಲರ ವ್ಯಾಜ್ಯವಾಗಿರಬಹುದು. ಇಸ್ರಾಯೇಲರಲ್ಲದವರ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.


ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು. ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.


ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು. ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು.


ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.


ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.


ಆಗ ಯೆಫ್ತಾಹನು ಗಿಲ್ಯಾದಿನ ಹಿರಿಯರಿಗೆ, “ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ನೀವು ತಿರುಗಿ ನನ್ನನ್ನು ಮನೆಗೆ ಕರೆತಂದರೆ ಮತ್ತು ಯೆಹೋವ ದೇವರು ಅವರನ್ನು ನನ್ನ ಮುಂದೆ ಒಪ್ಪಿಸಿಕೊಟ್ಟರೆ, ನಾನು ನಿಮಗೆ ತಲೆಯಾಗಿರುವೆನೋ?” ಎಂದನು.


ಎಲ್ಲಾ ಜನಗಳೇ ಕೇಳಿರಿ, ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ. ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು