Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:5 - ಕನ್ನಡ ಸಮಕಾಲಿಕ ಅನುವಾದ

5 ಲೇವಿಯರಾದ ಯೇಷೂವ, ಕದ್ಮಿಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು ಜನರಿಗೆ: “ಏಳಿರಿ, ಎಂದೆಂದಿಗೂ ಏಕರೀತಿಯಾಗಿರುವ ನಿಮ್ಮ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿರಿ,” ಎಂದರು. ಅನಂತರ ಅವರು, “ಯೆಹೋವ ದೇವರೇ, ಸಕಲ ಸ್ತುತಿ ಆಶೀರ್ವಾದಗಳಿಗೆ ಉನ್ನತವಾದದ್ದು ನಿಮ್ಮ ಮಹಿಮೆಯುಳ್ಳ ಹೆಸರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆನಂತರ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬುವವರು, “ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವನ್ನು ಸಲ್ಲಿಸಿರಿ. ಯೆಹೋವನೇ, ಸರ್ವಸ್ತುತಿ ಕೀರ್ತನೆಗಳಿಗೂ ಮೀಗಿಲಾಗಿರುವ ನಿನ್ನ ಮಹಾನಾಮಕ್ಕೆ ಮಹಿಮೆಯುಂಟಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆಮೇಲೆ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು, “ಏಳಿ, ನಮ್ಮ ದೇವರಾದ ಸರ್ವೇಶ್ವರನಿಗೆ ಯುಗಯುಗಕ್ಕೂ ಸ್ತುತಿಸ್ತೋತ್ರ ಎನ್ನಿ,” ಎಂದು ಹೇಳಿ ಹೀಗೆ ಪ್ರಾರ್ಥಿಸಿದರು: “ಸರ್ವೇಶ್ವರಾ, ಸ್ತುತಿಸ್ತೋತ್ರ ನಿಮ್ಮ ಮಹಿಮಾಮಯ ನಾಮಕೆ ಮಿಗಿಲಾದುದು ಆ ಶ್ರೀ ನಾಮ ಸರ್ವಸ್ತುತಿ ಕೀರ್ತನೆಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಮೇಲೆ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು - ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವಾಗಲಿ ಅನ್ನಿರಿ ಎಂದು ಹೇಳಿ - ಯೆಹೋವನೇ, ಸರ್ವಸ್ತುತಿಕೀರ್ತನೆಗಳಿಗೆ ವಿುಗಿಲಾಗಿರುವ ನಿನ್ನ ಮಹಾನಾಮಕ್ಕೆ ಕೊಂಡಾಟವಾಗಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು. “ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ. ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ; ನಿನ್ನ ಹೆಸರು ಎಲ್ಲಾ ಸ್ತುತಿಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:5
36 ತಿಳಿವುಗಳ ಹೋಲಿಕೆ  

ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯೂ ದೇವರೂ ಆಗಿರುವವರಿಗೆ ಸ್ತೋತ್ರವಾಗಲಿ. ಅವರು ಕ್ರಿಸ್ತ ಯೇಸುವನ್ನು ತಮ್ಮ ಮಹಾ ಕರುಣಾನುಸಾರವಾಗಿ, ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಜೀವಕರವಾದ ನಿರೀಕ್ಷೆಗೆ ನಮ್ಮನ್ನು ತಿರುಗಿ ಹುಟ್ಟಿಸಿದ್ದಾರೆ.


“ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ.


ಆ ಸಮಯದಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ.


ಪರಸ್ಪರವಾಗಿ ಹಾಡುತ್ತಾ, ಕೃತಜ್ಞತಾಸ್ತುತಿ ಮಾಡುತ್ತಾ ಯೆಹೋವ ದೇವರನ್ನು ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು! ಅವರ ಅಚಲ ಪ್ರೀತಿ ಇಸ್ರಾಯೇಲರ ಮೇಲೆ ಶಾಶ್ವತ!” ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ, ಯೆಹೋವ ದೇವರ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.


ಆದ್ದರಿಂದ ನಮ್ಮ ದೇವರೇ, ನಾವು ನಿಮ್ಮನ್ನು ಸ್ತುತಿಸಿ, ನಿಮ್ಮ ಮಹಿಮೆಯುಳ್ಳ ನಾಮವನ್ನು ಕೊಂಡಾಡುತ್ತೇವೆ.


ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.


ನಿಮ್ಮ ಘನತೆಯ ಪ್ರಭಾವದ ಮಹಿಮೆಗಳ ವಿಷಯವಾಗಿಯೂ ನಿಮ್ಮ ಅದ್ಭುತಕಾರ್ಯಗಳ ವಿಷಯವಾಗಿಯೂ ನಾನು ಧ್ಯಾನಿಸುತ್ತಿರುವೆನು,


ಪ್ರತಿದಿನ ನಿಮ್ಮನ್ನು ಸ್ತುತಿಸುವೆನು; ಎಂದೆಂದಿಗೂ ಸ್ತುತಿಸುವೆನು.


ಯೆಹೋವ ದೇವರ ಆಲಯದಲ್ಲಿ ಪ್ರತಿ ರಾತ್ರಿ ಸೇವೆ ಸಲ್ಲಿಸುವ ಯೆಹೋವ ದೇವರ ಎಲ್ಲಾ ಸೇವಕರೇ, ಯೆಹೋವ ದೇವರನ್ನು ಸ್ತುತಿಸಿರಿ.


ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ, ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?


ನಾನು ಯೆಹೋವ ದೇವರಿಗೆ, “ನೀವೇ ನನ್ನ ಕರ್ತ; ನಿಮ್ಮನ್ನು ಬಿಟ್ಟು ನನಗಿಲ್ಲ ಒಳಿತು,” ಎಂದು ಹೇಳಿದೆನು.


ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು.


ಹೀಗೆ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಯೆಹೋವ ದೇವರ ಮುಂದೆ ನಿಂತರು.


ತರುವಾಯ ದಾವೀದನು ಸಮಸ್ತ ಸಭೆಗೆ, “ಈಗ ನಿಮ್ಮ ದೇವರಾದ ಯೆಹೋವ ದೇವರನ್ನು ಸ್ತುತಿಸಿರಿ,” ಎಂದನು. ಆಗ ಜನರೆಲ್ಲರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ತಮ್ಮ ತಲೆಗಳನ್ನು ಬಾಗಿಸಿ ಯೆಹೋವ ದೇವರನ್ನೂ, ಅರಸನನ್ನೂ ವಂದಿಸಿದರು.


ಯೆಹೋವ ದೇವರೇ, ಮಹತ್ವವೂ, ಪರಾಕ್ರಮವೂ, ಮಹಿಮೆಯೂ, ಜಯವೂ, ವೈಭವವೂ ನಿಮ್ಮವೇ. ಆಕಾಶಗಳಲ್ಲಿಯೂ, ಭೂಮಿಯಲ್ಲಿಯೂ ಇರುವುದೆಲ್ಲಾ ನಿಮ್ಮದೇ. ಯೆಹೋವ ದೇವರೇ, ರಾಜ್ಯವು ನಿಮ್ಮದು. ನೀವು ಸಮಸ್ತಕ್ಕೂ ತಲೆಯಾಗಿ ಉನ್ನತರು.


“ಆದರೆ ದೇವರು ನಿಜವಾಗಿ ಭೂಮಿಯ ಮೇಲೆ ವಾಸವಾಗಿರುವರೋ? ಇಗೋ, ಆಕಾಶವೂ ಉನ್ನತೋನ್ನತ ಆಕಾಶವೂ ನಿಮಗೆ ಸಾಲದು. ಹಾಗಾದರೆ, ನಾನು ಕಟ್ಟಿಸಿದ ಈ ಆಲಯವು ನಿಮಗೆ ಸಾಲುವುದು ಹೇಗೆ?


ಆಗ ಸೊಲೊಮೋನನು ಇಸ್ರಾಯೇಲಿನ ಸಮಸ್ತ ಸಮೂಹದವರ ಸಮ್ಮುಖದಲ್ಲಿ ಯೆಹೋವ ದೇವರ ಬಲಿಪೀಠದ ಮುಂದೆ ನಿಂತು, ಆಕಾಶದೆಡೆಗೆ ತನ್ನ ಕೈಗಳನ್ನು ಚಾಚಿ,


ಅರಸನು ಜನರ ಕಡೆ ತಿರುಗಿಕೊಂಡು, ಎದ್ದುನಿಂತಿದ್ದ ಇಸ್ರಾಯೇಲ್ ಜನರನ್ನೆಲ್ಲಾ ಆಶೀರ್ವದಿಸಿದನು.


ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ,


ಯೆಹೋವ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ವೈಭವ ಹೊಂದಿದವರೂ, ಮಹಿಮೆಯಲ್ಲಿ ಅತಿಶಯರೂ, ಅದ್ಭುತಗಳನ್ನು ಮಾಡುವವರೂ ಆದ ನಿಮ್ಮ ಹಾಗೆ ಯಾರಿದ್ದಾರೆ?


ಯೆಹೋವ ದೇವರೇ, ನಿಮ್ಮ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳದ್ದಾಗಿದೆ; ಯೆಹೋವ ದೇವರೇ, ನಿಮ್ಮ ಬಲಗೈ ಶತ್ರುವನ್ನು ಜಜ್ಜಿ ಪುಡಿ ಮಾಡಿತು.


ನಂತರ ರಾಜನು ಹೀಗೆ ಹೇಳಿದನು: “ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ, ಅವರು ನನ್ನ ತಂದೆಯಾದ ದಾವೀದನಿಗೆ ತಮ್ಮ ಬಾಯಿಂದ ವಾಗ್ದಾನ ಮಾಡಿದ್ದನ್ನು, ತಮ್ಮ ಕೈಗಳಿಂದಲೇ ನೆರವೇರಿಸಿದರು. ಅವರು ಹೇಳಿದ್ದೇನೆಂದರೆ,


ಆಗ ಮೆಟ್ಟಿಲುಗಳ ಮೇಲೆ ಲೇವಿಯರಲ್ಲಿ ಯೇಷೂವ, ಬಾನೀ, ಕದ್ಮಿಯೇಲ್, ಶೆಬನ್ಯ, ಬುನ್ನಿ, ಶೇರೇಬ್ಯ, ಬಾನೀ, ಕೆನಾನಿ ಎಂಬವರು ನಿಂತು ಮಹಾಶಬ್ದದಿಂದ ತಮ್ಮ ದೇವರಾಗಿರುವ ಯೆಹೋವ ದೇವರಿಗೆ ಮೊರೆಯಿಟ್ಟರು.


ನೀವು ಒಬ್ಬರೇ ದೇವರಾಗಿದ್ದೀರಿ. ನೀವು ಆಕಾಶವನ್ನೂ ಅದರ ಸಮಸ್ತ ಸೈನ್ಯವನ್ನೂ, ಭೂಮಿಯನ್ನೂ, ಅದರಲ್ಲಿರುವ ಪ್ರತಿಯೊಂದನ್ನೂ, ಸಮುದ್ರಗಳನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿದ್ದೀರಿ. ಅವುಗಳಿಗೆಲ್ಲಾ ಜೀವ ಕೊಡುವವರು ನೀವೇ. ಇದಲ್ಲದೆ ಆಕಾಶಗಳ ಸೈನ್ಯವು ನಿಮ್ಮನ್ನು ಆರಾಧಿಸುತ್ತವೆ.


ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು.


ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ, ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು.


ಹೀಗೆ ಹೇಳಿದನು: “ಬೆತ್ತಲೆಯಾಗಿ ನನ್ನ ತಾಯಿಯ ಗರ್ಭದಿಂದ ಬಂದೆನು, ಬೆತ್ತಲೆಯಾಗಿ ಗತಿಸಿ ಹೋಗುವೆನು. ಯೆಹೋವ ದೇವರು ಕೊಟ್ಟರು, ಯೆಹೋವ ದೇವರು ತೆಗೆದುಕೊಂಡರು; ಯೆಹೋವ ದೇವರ ನಾಮಕ್ಕೆ ಸ್ತೋತ್ರವಾಗಲಿ.”


ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.


ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ. ದೇವರು ಪರಿಶುದ್ಧರು.


ಹೀಗೆಂದು ಹೇಳಿದನು: “ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರವಾಗಲಿ! ಏಕೆಂದರೆ ಜ್ಞಾನವೂ, ಬಲವೂ ಅವರದಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು