ನೆಹೆಮೀಯ 9:35 - ಕನ್ನಡ ಸಮಕಾಲಿಕ ಅನುವಾದ35 ಅವರು ತಮ್ಮ ರಾಜ್ಯದಲ್ಲಿಯೂ, ನೀವು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀವು ಅವರಿಗೆ ಕೊಟ್ಟ ವಿಸ್ತಾರವಾದ, ರಸವತ್ತಾದ ದೇಶದಲ್ಲಿಯೂ, ನಿಮ್ಮನ್ನು ಸೇವಿಸಲಿಲ್ಲ. ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201935 ಅವರು ಸ್ವರಾಜ್ಯದಲ್ಲಿದ್ದುಕೊಂಡು ನೀನು ದಯಪಾಲಿಸಿದ ಸಮೃದ್ಧಿಯನ್ನು ಅನುಭವಿಸುತ್ತಾ ನಿನ್ನ ಅನುಗ್ರಹದಿಂದ ದೊರಕಿದ ಫಲವತ್ತಾದ ವಿಶಾಲವಾದ ದೇಶದಲ್ಲಿ ವಾಸಿಸುತ್ತಾ ಇರುವಾಗ ನಿನ್ನನ್ನು ಆರಾಧಿಸದೆಯೂ ತಮ್ಮ ದುಷ್ಕೃತ್ಯಗಳನ್ನು ಬಿಡದೆಯೂ ಇದ್ದುದರಿಂದಲೇ ನಾವು ಈಗ ದಾಸರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)35 ಅವರಿದ್ದರು ನೀವೇ ಅನುಗ್ರಹಿಸಿದ ಸ್ವರಾಜ್ಯದಲಿ ನಲಿದಾಡಿದರು ನೀವು ಕರುಣಿಸದ ಸಮೃದ್ಧಿಯಲಿ ವಾಸಿಸಿದರು ಸಾರವತ್ತಾದ ಸವಿಸ್ತಾರ ನಾಡಿನಲಿ. ಆದರೂ ಮಾಡಲಿಲ್ಲ ನಿಮ್ಮ ಸೇವೆ, ಬಿಡಲಿಲ್ಲ ತಮ್ಮ ದುರ್ನಡತೆ ನಮಗೊದಗಿರುವ ಗುಲಾಮಗಿರಿ, ಇದರ ಪರಿಣಾಮವಲ್ಲವೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)35 ಅವರು ಸ್ವರಾಜ್ಯದಲ್ಲಿದ್ದುಕೊಂಡು ನೀನು ದಯಪಾಲಿಸಿದ ಸಮೃದ್ಧಿಯನ್ನು ಅನುಭವಿಸುತ್ತಾ ನಿನ್ನ ಅನುಗ್ರಹದಿಂದ ದೊರಕಿದ ಸಾರವುಳ್ಳ ವಿಸ್ತಾರದೇಶದಲ್ಲಿ ವಾಸಿಸುತ್ತಾ ಇರುವಾಗ ನಿನ್ನನ್ನು ಸೇವಿಸದೆಯೂ ತಮ್ಮ ದುಷ್ಕೃತ್ಯಗಳನ್ನು ಬಿಡದೆಯೂ ಇದ್ದದರಿಂದಲೇ ನಾವು ಈಗ ದಾಸರಾಗಿದ್ದೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್35 ನಮ್ಮ ಪೂರ್ವಿಕರು ನಿನ್ನ ಸೇವೆಮಾಡಲಿಲ್ಲ. ತಮ್ಮ ಸ್ವಂತ ದೇಶದಲ್ಲಿ ವಾಸಿಸುವಾಗಲೂ ನಿನ್ನ ಸೇವೆಮಾಡಲಿಲ್ಲ; ಕೆಟ್ಟತನವನ್ನು ನಿಲ್ಲಿಸಲಿಲ್ಲ. ನೀನು ಕೊಟ್ಟ ಉತ್ತಮ ವಸ್ತುಗಳಲ್ಲಿಯೂ ಉತ್ತಮ ಭೂಮಿಯಲ್ಲಿಯೂ ಆನಂದಿಸಿದರು. ಅವರಿಗೆ ಬೇಕಾದಷ್ಟು ಜಮೀನಿತ್ತು. ಆದರೂ ಅವರು ತಮ್ಮ ದುಷ್ಟತನವನ್ನು ನಿಲ್ಲಿಸಲಿಲ್ಲ. ಅಧ್ಯಾಯವನ್ನು ನೋಡಿ |