ನೆಹೆಮೀಯ 7:1 - ಕನ್ನಡ ಸಮಕಾಲಿಕ ಅನುವಾದ1 ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಗೋಡೆಯನ್ನು ಕಟ್ಟಿ ಮುಗಿಸಿದನಂತರ ನಾನು ಕದಗಳನ್ನು ಹಚ್ಚಿಸಿದೆ; ದ್ವಾರಪಾಲಕರನ್ನೂ ಗಾಯಕರನ್ನೂ ಲೇವಿಯರನ್ನೂ ನೇಮಿಸಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಗೋಡೆಯನ್ನು ಕಟ್ಟಿ ತೀರಿಸಿದ ನಂತರ ನಾನು ಕದಗಳನ್ನು ಹಚ್ಚಿಸಿದೆನು; ದ್ವಾರಪಾಲಕರೂ ಗಾಯಕರೂ ಲೇವಿಯರೂ ನೇವಿುಸಲ್ಪಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಗೋಡೆಯ ಕೆಲಸ ಪೂರ್ತಿಯಾದ ಬಳಿಕ ದ್ವಾರಗಳಿಗೆ ಬಾಗಿಲುಗಳನ್ನು ಇಡಲು ಪ್ರಾರಂಭಿಸಿದೆವು; ಬಾಗಿಲುಗಳಿಗೆ ಕಾವಲುಗಾರರನ್ನು ನೇಮಿಸಿದೆವು. ದೇವಾಲಯದಲ್ಲಿ ಬೇಕಾಗಿರುವ ಗಾಯಕರನ್ನು ಮತ್ತು ಯಾಜಕರಿಗೆ ಬೇಕಾದ ಸಹಾಯಕರನ್ನು ಆರಿಸಿದೆವು. ಅಧ್ಯಾಯವನ್ನು ನೋಡಿ |
ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೆಯ ವರ್ಷದ, ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ, ಉಳಿದ ಅವರ ಸಹೋದರರಾದ ಯಾಜಕರೂ, ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ, ಕೆಲಸವನ್ನು ಪ್ರಾರಂಭಿಸಿ ಇಪ್ಪತ್ತು ವರ್ಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಯೆಹೋವ ದೇವರ ಆಲಯದ ಕೆಲಸ ಮಾಡುವವರ ಮೇಲೆ ಮೇಲ್ವಿಚಾರಕರನ್ನಾಗಿ ನೇಮಿಸಿದರು.