ನೆಹೆಮೀಯ 6:6 - ಕನ್ನಡ ಸಮಕಾಲಿಕ ಅನುವಾದ6 ಅದರಲ್ಲಿ ಹೀಗೆ ಬರೆದಿತ್ತು: “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ, ಯೆಹೂದ್ಯರೂ ತಿರುಗಿಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಪುನಃ ಕಟ್ಟಿಸುತ್ತಿದ್ದೀ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಅದರಲ್ಲಿ “ಗೆಷೆಮ್ ಎಂಬುವನು ನನಗೆ ತಿಳಿಸಿದ ಪ್ರಕಾರ, ನೀನೂ ಮತ್ತು ಯೆಹೂದ್ಯರೂ ತಿರುಗಿ ಬೀಳಬೇಕೆಂದಿದ್ದೀರಿ; ಆದುದರಿಂದಲೇ ನೀನು ಆ ಗೋಡೆಯನ್ನು ಕಟ್ಟಿಸುತ್ತಿರುವೆ ಮತ್ತು ನೀನು ಅವರಿಗೆ ಅರಸನಾಗಬೇಕೆಂದಿರುವೆಯೆಂಬ ಸುದ್ದಿಯು ಜನರಲ್ಲಿ ಹಬ್ಬಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅದರಲ್ಲಿ, “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ ಯೆಹೂದ್ಯರೂ ನನ್ನ ಮೇಲೆ ದಾಳಿಮಾಡಬೇಕೆಂದಿದ್ದೀರಿ; ಆದುದರಿಂದಲೇ, ನೀನು ಆ ಗೋಡೆಯನ್ನು ಕಟ್ಟಿಸುತ್ತಿರುವೆ. ನೀನು ಅವರ ಅರಸನಾಗುವೆ ಎಂಬ ಸುದ್ದಿ ಜನರಲ್ಲಿ ಹಬ್ಬಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಅದರಲ್ಲಿ - ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ ಯೆಹೂದ್ಯರೂ ತಿರುಗಿಬೀಳಬೇಕೆಂದಿದ್ದೀರಿ; ಆದದರಿಂದಲೇ ನೀನು ಆ ಗೋಡೆಯನ್ನು ಕಟ್ಟಿಸುತ್ತೀ. ಮತ್ತು ನೀನು ಅವರ ಅರಸನಾಗುವಿಯೆಂಬ ಸುದ್ದಿಯು ಜನರಲ್ಲಿ ಹಬ್ಬಿರುತ್ತದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಅದರಲ್ಲಿ, “ಒಂದು ಸುದ್ದಿಯು ಹರಡುತ್ತಲಿದೆ. ಎಲ್ಲಾ ಕಡೆಗಳಲ್ಲಿ ಜನರು ಅದರ ವಿಷಯವಾಗಿ ಮಾತಾಡುತ್ತಿದ್ದಾರೆ. ಆ ಸುದ್ದಿಯು ಸತ್ಯವೆಂದು ಗೆಷೆಮನು ನನಗೆ ಹೇಳಿದನು. ನೀನು ಮತ್ತು ಯೆಹೂದ್ಯರು ಅರಸನಿಗೆ ವಿರುದ್ಧವಾಗಿ ದಂಗೆ ಏಳಲು ಯೋಚಿಸುತ್ತಿದ್ದೀರೆಂಬ ವದಂತಿ ಇದೆ. ಅದಕ್ಕೋಸ್ಕರವಾಗಿಯೇ ನೀವು ಕೋಟೆಗೋಡೆಯನ್ನು ಕಟ್ಟುತ್ತಿದ್ದೀರಿ. ನೀನು ಯೆಹೂದ್ಯರ ಅರಸನಾಗುವೆ ಎಂದೂ ಜನರಲ್ಲಿ ಸುದ್ದಿ ಹಬ್ಬಿದೆ. ಅಧ್ಯಾಯವನ್ನು ನೋಡಿ |